ತುಮಕೂರು: ಕಳೆದ ಬಾರಿ ಪಿಯುಸಿ ಫಲಿತಾಂಶದಲ್ಲಿ 24 ಸ್ಥಾನದಲ್ಲಿದ್ದ ತುಮಕೂರು ಶೈಕ್ಷಣಿಕ ಜಿಲ್ಲೆ ಈಗ 18ನೇ ಸ್ಥಾನಕ್ಕೆ ಬಂದಿದೆ.

24ನೇ ಸ್ಥಾನದಲ್ಲಿದ್ದ ತುಮಕೂರು ಜಿಲ್ಲೆ 6 ಸ್ಥಾನ ಮೇಲಕ್ಕೇರಿದೆ. ಹೀಗಾಗಿ ಈ ಬಾರಿ ತುಮಕೂರು ಶೈಕ್ಷಣಿಕ ಜಿಲ್ಲೆ ಕಳೆದ ಬಾರಿಗಿಂತ ಹೆಚ್ಚಿನ ಫಲಿತಾಂಶ ತೆಗೆದುಕೊಂಡಿದೆ.
ನಗರದ ವಿದ್ಯಾನಿಧಿ ಕಾಲೇಜಿನ ಶ್ರೀಲಕ್ಷ್ಮಿ ಎಂಬ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ.