ತುಮಕೂರು: ಸದಾ ಮನೆಯಲ್ಲಿರುವ ಕೆಂಪು ಸುಂದರಿ’ ಎಂಬ ಪಟ್ಟ ಗಿಟ್ಟಿಸಿಕೊಂಡಿರುವ ಟೊಮೆಟೊಗೆ ಮಾರುಕಟ್ಟೆಯಲ್ಲಿ ಸದ್ಯ ಅಷ್ಟು ಕಿಮ್ಮತ್ತಿಲ್ಲ.

ಟೊಮ್ಯಾಟೊ ಬೆಲೆ ಸದ್ಯ ಕುಸಿತ ಕಂಡಿದ್ದು, ಕೆಂಪು ಸುಂದರಿಯನ್ನು ಸ್ಥಳೀಯ ವ್ಯಾಪಾರಸ್ಥರು ಕೇಳುತ್ತಿದ್ದು, ಹೊರಗಿನವರಿಂದ ಡಿಮ್ಯಾಂಡ್ ಕಿಮ್ಮತ್ತು ಕಳೆದುಕೊಂಡಿದೆ. ಪರಿಣಾಮ ಗ್ರಾಹಕರು ಫುಲ್ ಖುಷಿಯಾಗಿದ್ದು, ಬೆಳೆಗಾರರು ಬೆಲೆ ಇಲ್ಲದೆ ಬೆಂಡಾಗಿದ್ದಾರೆ.
ಕೆಲ ದಿನಗಳ ಹಿಂದೆ ಟೊಮೆಟೊ ದರ ಏರಿಕೆ ಕಂಡ ಬೆನ್ನಲ್ಲೇ ರೈತರು ನೂರಾರು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದರು. ಏಕಾಏಕಿ ಟೊಮೆಟೊ ಬೆಲೆ ಪಾತಾಳ ಕಂಡಿದ್ದರಿಂದ ರೈತರನ್ನು ಕಂಗಲಾಗಿಸಿದೆ.
ಕಳೆದ ಎರಡು ತಿಂಗಳ ಹಿಂದೆ ಟೊಮ್ಯಾಟೊಗೆ ಬೆಲೆ ಇತ್ತು. ಆದರೆ, ಈಗ ಬೆಲೆ ಕುಸಿತವಾಗಿದೆ. ಪರಿಣಾಮ ರೈತರು ಹೈರಾಣಾಗಿದ್ದಾರೆ.
ಸದ್ಯ ಮಾರುಕಟ್ಟೆಯಲ್ಲಿ 25 ಕೆ.ಜಿ. ತೂಕದ ಟೊಮ್ಯಾಟೊ ಕ್ರೇಟ್ ಬೆಲೆ 200ರಿಂದ 300 ರೂ ಇದೆ. ಹೀಗಾಗಿ ಬೆಳೆಗಾರರು ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಲ್ಲಿ ,50 ರಿಂದ 60 ರೂ. ಇದ್ದ ಟೊಮ್ಯಾಟೊ ಬೆಲೆ ಸದ್ಯ ಕೊಂಚ ಏರಿಕೆ ಕಂಡಿದೆ.
ಮಳೆ ಬಂದರೆ ಮತ್ತೆ ಕೆಂಪು ಸುಂದರಿಗೆ ಕಿಮ್ಮತ್ತು ಬರಲಿದೆ. ಹೊರ ಭಾಗದ ವರ್ತಕರು ಬರೋ ಸಾಧ್ಯತೆಯಿದ್ದು ಮಳೆಗಾಲ ಆರಂಭವಾದರೆ ಮತ್ತೆ ಏರಿಕೆ ಕಾಣಲಿದೆ.