ತುಮಕೂರು || ಅಚ್ಚರಿ!! ಮಳೆಗಾಗಿ ಬಾಲಕರಿಬ್ಬರಿಗೆ ಮದುವೆ : ಮದುವೆ ಮಾಡಿದ್ದೇ ತಡ ಸುರಿದ ಭರ್ಜರಿ ಮಳೆ

ತುಮಕೂರು || ಅಚ್ಚರಿ!! ಮಳೆಗಾಗಿ ಬಾಲಕರಿಬ್ಬರಿಗೆ ಮದುವೆ : ಮದುವೆ ಮಾಡಿದ್ದೇ ತಡ ಸುರಿದ ಭರ್ಜರಿ ಮಳೆ

ತುಮಕೂರು:-  ಮಳೆಗಾಗಿ ಪ್ರಾರ್ಥಿಸಿ ಇಬ್ಬರು ಬಾಲಕರಿಗೆ ಮದುವೆ ಮಾಡಿ,  ಜನರಿಗೆ ಭೋಜನ ವ್ಯವಸ್ಥೆ ಮಾಡಿದ ಅಪರೂಪದ ಪ್ರಸಂಗ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಮೃತ್ತೂರು ಹೋಬಳಿ, ಸೊಂಡೇಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮಳೆ ಇಲ್ಲದಾದಾಗ ಮಳೆಗಾಗಿ ಕತ್ತೆಗಳಿಗೆ, ಕಪ್ಪೆಗಳಿಗೆ ಮದುವೆ ಮಾಡುವುದು ಸಾಮಾನ್ಯ‌. ಆದರೆ, ಇಲ್ಲಿ ಮಕ್ಕಳಿಗೆ ಮದುವೆ ಮಾಡಿದ್ದಾರೆ.  ಇಬ್ಬರು ಬಾಲಕರಿಗೆ ವಧು-ವರರನ್ನಾಗಿ ಮಾಡಿ ಮಾಂಗಲ್ಯ ಕಟ್ಟಿಸಿ ಮದುವೆ ಮಾಡಿರುವ ಅಪರೂಪದ ಪ್ರಸಂಗ  ಜನರನ್ನು ನಿಬ್ಬೆರಗಾಗುವಂತೆ ಮಾಡಿದೆ.

ಹಲವು ದಿನಗಳಿಂದ ತಾಲ್ಲೂಕಿನಲ್ಲಿ ಮಳೆಯಿಲ್ಲದೆ ರೈತರು ಬೆಳೆದಿದ್ದ ರಾಗಿ, ಭತ್ತ ಸೇರಿದಂತೆ ಇತರೆ ಬೆಳೆಗಳು ಒಣಗುತ್ತಿವೆ. ಇದರಿಂದ ಕಂಗೆಟ್ಟ ರೈತರು  ಸೊಂಡೇಕೊಪ್ಪ ಗ್ರಾಮದಲ್ಲಿ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಾಲಕರಿಗೆ ಮದುವೆ ಮಾಡಿದ್ದಾರೆ.

 ಸೊಂಡೆಕೊಪ್ಪ ಸರ್ಕಾರಿ ಕಿರಿಯ ಪ್ರಾರ್ಥಮಿಕ ಪಾಠಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕರಿಗೆ  ಮಳೆಯಾಗಿ ಮದುವೆ ಮಾಡಿದ್ದಾರೆ. ,

 ಗ್ರಾಮದಲ್ಲಿ ಮದುವೆ ವಾತಾವರಣ: ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಚಪ್ಪರ ಹಾಕಿ, ಬಾಳೆಕಂದು ಕಟ್ಟಿ, ಹೂವಿನಿಂದ ಅಲಂಕಾರಗೊಳಿಸಿ ಸಿಂಗಾರಗೊಳಿಸಲಾಗಿತ್ತು, ಇಡೀ ಗ್ರಾಮದಲ್ಲಿ ಮಧುವೆಯ ವಾತಾವರಣ ಸೃಷ್ಠಿಯಾಗಿತ್ತು, ಮಧುವೆಗಾಗಿ ಬಂದು ಬಳಗ ಸ್ನೇಹಿತರು ಭಾಗವಹಿಸಿದ್ದರು. ವರನಿಗೆ ಕಚ್ಚೆ ಪಂಚೆ, ಮೈಸೂರು ಪೇಟ, ಶೆರ್ಟ್, ಧರಿಸಿದರೇ, ವಧುವಿಗೆ ಹಸಿರು ಸೀರೆ ಹುಡಿಸಿ ಬಳೆ ತೋಡಿಸಿ, ಹಣೆಗೆ ಹರಿಶಿಣ ಕುಂಕುಮ ಇಟ್ಟು ಸಿಂಗಾರಗೊಳಿಸಲಾಗಿತ್ತು. ಹಿಂದೂ ಸಂಪ್ರದಾಯದಂತೆ ಹಾರ ಬದಲಿಸಿ ಬಳಿಕ, ವರನಿಂದ ವಧುವಿಗೆ ತಾಳಿ ಕಟ್ಟಿಸಿ ಮದುವೆ ಮಾಡಲಾಯಿತು. ಗಂಡು ಹೆಣ್ಣು ಕಡೆಯವರು ಕಳಸ ಹೊತ್ತಿದರು. ಬಳಿಕ ಮದುವೆಗೆ ಬಂದಿದ್ದ ಗ್ರಾಮಸ್ಥರು ವಧು ವರರಿಗೆ ಅಕ್ಷತೆ ಹಾಕಿ, ಶುಭ ಆರೈಸಿದರು, ಈ ವೇಳೆ ವಾದ್ಯಗೋಷ್ಠ ಮೊಳಗಿತ್ತು, 

ಮದುವೆಯಾದ ನಂತರ ವಧು ವರನ್ನು ಗ್ರಾಮಸ್ಥರು ಆಂಜನೇಯಸ್ವಾಮಿ ದೇವರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಮಳೆಗಾಗಿ ಪ್ರಾರ್ಥಿಸಿದರು, 

ಮದುವೆಯಾದ ಬಳಿಕ ರುಚಿಕರವಾದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು, ಗ್ರಾಮಸ್ಥರು ರಸಕಳವ ಸವಿದು ವದು ವರರಿಗೆ ಆರ್ಶೀವದಿಸಿದರು. 

 ಮದುವೆ ಆಗುತ್ತಿದ್ದಂತೆ‌ ಮಳೆ

ಕಾಕತಾಳಿಯದಂತೆ ಮಳೆಯೂ ಸಹ ಬಂದಿದೆ. ಗ್ರಾಮಸ್ಥರ ಪ್ರಾರ್ಥನೆಗಾಗಿ ಪ್ರತ್ಯೇಕ್ಷನಾದ ಮಳೆರಾಯ  ಬಾಲಕರು ಮದುವೆಯಾಗಿದ್ದ ಅದೇ ರಾತ್ರಿಯೇ ಕಾಕತಾಳೀಯಂತೆ ಮಳೆ ಸುರಿದಿದ್ದು ನಾಗರೀಕರ ಆಶ್ಚರ್ಯಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *