ತುಮಕೂರು || ತುಮಕೂರು ಲೋಕಾಯುಕ್ತ ಪೊಲೀಸರಿಗೆ  ‘ಮುಖ್ಯಮಂತ್ರಿಗಳ ಪದಕ’

ತುಮಕೂರು || ತುಮಕೂರು ಲೋಕಾಯುಕ್ತ ಪೊಲೀಸರಿಗೆ ‘ಮುಖ್ಯಮಂತ್ರಿಗಳ ಪದಕ’

ತುಮಕೂರು:  ಪೊಲೀಸ್ ಇಲಾಖೆಯಲ್ಲಿ ಅಪ್ರತಿಮ ಸೇವೆ, ಗಣನೀಯ ಕಾರ್ಯ ಹಾಗೂ ಅತ್ಯುತ್ತಮ ಸೇವೆ ಸಲ್ಲಿಸಿದ ಕರ್ನಾಟಕ ಲೋಕಾಯುಕ್ತ ತುಮಕೂರು ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಶಿವರುದ್ರಪ್ಪ ಮೇಟಿ ಹಾಗೂ  ಹೆಡ್ ಕಾನ್ಸ್ಟೇಬಲ್ ಲಕ್ಷ್ಮೀಶ ವೈ.ಆರ್. ಅವರಿಗೆ  ಬೆಂಗಳೂರಿನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವು ನೀಡುವ ‘ಮುಖ್ಯಮಂತ್ರಿಗಳ ಪದಕ’ ವನ್ನು ನೀಡಿ ಗೌರವಿಸಿದ್ದಾರೆ.

ಶಿವರುದ್ರಪ್ಪ ಮೇಟಿ ಅವರು ಮೂಲತಃ ಹುಬ್ಬಳಿಯ ಕಲಘಟಕಿ ತಾಲ್ಲೂಕಿನವರಾಗಿದ್ದು, 2010ರಲ್ಲಿ ಪಿ.ಎಸ್.ಐ ಹುದ್ದೆಗೆ ನೇಮಕಗೊಂಡು, ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸ್ ಠಾಣೆ, ಅಜಾದ್ ನಗರ ಪೊಲೀಸ್ ಠಾಣೆ ಸೇರಿದಂತೆ ಹಲವಾರು ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ. 2022ರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಹುದ್ದೆಗೆ ಪದೋನ್ನತಿ ಹೊಂದಿ, ತುಮಕೂರು ಲೋಕಾಯುಕ್ತ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇವರ ಪತ್ನಿ ಭವ್ಯ ಡಿ.ಎಂ ಅವರು ಚಿತ್ರದುರ್ಗ ಬೆಸ್ಕಾಂ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರೂ ಸಹ 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿರುತ್ತಾರೆ. ಪತಿ-ಪತ್ನಿ ಇಬ್ಬರೂ ಒಂದೇ ವೇದಿಕೆಯಲ್ಲಿ ಮುಖ್ಯಮಂತ್ರಿಗಳ ಪದಕವನ್ನು ಸ್ವೀಕರಿಸಿರುವುದು ವಿಶೇಷ.

ಲಕ್ಷೀಶ ವೈ.ಆರ್. ಅವರು ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನ ಯಲಿಯೂರು ಗ್ರಾಮದವರಾಗಿದ್ದು, 2008ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಾತಿ ಹೊಂದಿ, ಮಿಡಿಗೇಶಿ ಪೊಲೀಸ್ ಠಾಣೆ, ಮಧುಗಿರಿ ಸಿ.ಪಿ.ಐ ಕಚೇರಿ, ಕೋರಾ ಪೊಲೀಸ್ ಠಾಣೆ, ತುಮಕೂರು ಗ್ರಾಮಾಂತರ ಸಿ.ಪಿ.ಐ ಕಚೇರಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ (ಡಿ.ಸಿ.ಆರ್.ಇ) ಇಲ್ಲಿ ಕಾರ್ಯನಿರ್ವಹಿಸಿರುತ್ತಾರೆ.

2024ರಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿ ಪದೋನ್ನತಿ ಹೊಂದಿದ್ದು, ಇವರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ ಕಾರ್ಯ ನಿರ್ವಹಿಸುವಾಗ 2022ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ. 

ಮಾನ್ಯ ಮುಖ್ಯ ಮಂತ್ರಿಗಳ ಪದಕ ಪುರಸ್ಕೃತರಾದವರನ್ನು ತುಮಕೂರು ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕ ಲಕ್ಷ್ಮೀಶ ನಾರಾಯಣ ಎ.ವಿ. ಅವರು ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *