ಕುಂದಾಪುರ: ಕುಂದಾಪುರ ಸಮೀಪದ ಬೀಜಾಡಿ ಗ್ರಾಮಕ್ಕೆ ಮದುವೆಗೆಂದು ಆಗಮಿಸಿದ್ದ ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಶನಿವಾರ ಇಲ್ಲಿನ ಕಡಲತೀರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೀಚ್‌ಸೈಡ್ ರೆಸಾರ್ಟ್‌ನಲ್ಲಿ ತಂಗಿದ್ದ ನಾಲ್ವರು ಸ್ನೇಹಿತರ ಪೈಕಿ ಇಬ್ಬರು ನೀರು ಪಾಲಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೊಲೀಸರ ಪ್ರಕಾರ, ನಾಲ್ವರಲ್ಲಿ ಮೂವರು ನೀರಿನಲ್ಲಿ ಆಟವಾಡಲು ಹೋಗಿದ್ದರು. ಆಗ ಪ್ರಬಲವಾದ ಅಲೆಯೊಂದು ಅಪ್ಪಳಿಸಿತು. ಇದರಿಂದ ಸಂತೋಷ್ ಮತ್ತು ಅಜಯ್ ಇಬ್ಬರೂ ಸಮುದ್ರದ ಆಳಕ್ಕೆ ಹೋಗಿದ್ದಾರೆ.
ಅಪಾಯದಲ್ಲಿರುವ ತನ್ನ ಸ್ನೇಹಿತರನ್ನು ನೋಡಿದ ಮೋಕ್ಷಿತ್, ಅವರನ್ನು ರಕ್ಷಿಸಲು ಯತ್ನಿಸಿದರು. ಸಂತೋಷ್ ಅವರನ್ನು ನೀರಿನಿಂದ ಹೊರತೆಗೆಯುವಲ್ಲಿ ಮೋಕ್ಷಿತ್ ಯಶಸ್ವಿಯಾದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಸಂತೋಷ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟರೆ, ಅಜಯ್ ಅವರ ಮೃತದೇಹವನ್ನು ತುರ್ತು ಸಿಬ್ಬಂದಿ ನಂತರ ಹೊರತೆಗೆದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.