ವಿಜಯಪುರ: ಕಣ್ಣು ಹೊಡೆದು ಸನ್ನೆ ಮಾಡಿದ ಯುವಕನಿಗೆ ಮಹಿಳೆಯೊಬ್ಬರು ಚಪ್ಪಲಿಯಲ್ಲಿ ಹೊಡೆದು ಬುದ್ದಿ ಕಲಿಸಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಯುವಕನೊಬ್ಬ ಮಹಿಳೆಗೆ ಕಣ್ಣು ಹೊಡೆದು, ಸನ್ನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕುಪಿತಳಾದ ಮಹಿಳೆ ಯುವಕನಿಗೆ ಸಾರ್ವಜನಿಕವಾಗ ಚಪ್ಪಲಿ ಸೇವೆ ಮಾಡಿದ್ದು ವಿಡಿಯೋ ವೈರಲ್ ಆಗಿದೆ.
ನಗರದ ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಈಚೆಗೆ ಮಹಿಳಾ ಪೀಡಕರ ಹಾವಳಿ ಹೆಚ್ಚಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.