ವಧು-ವರರು ತಮ್ಮ ವಿವಾಹದ ಮೊದಲು ಅನುಸರಿಸಲು 5 ಆರೋಗ್ಯಕರ ಚರ್ಮ ಮತ್ತು ಕೂದಲಿನ ಸಲಹೆಗಳನ್ನು ಚರ್ಮರೋಗ ತಜ್ಞರು ಸೂಚಿಸದ್ದಾರೆ. ಆರೋಗ್ಯಕರ ಕೂದಲು ಮತ್ತು ಚರ್ಮಕ್ಕಾಗಿ ವಧು ತಮ್ಮ ಮದುವೆಗೆ 3 ರಿಂದ 4 ವಾರಗಳ ಮೊದಲು ಅನುಸರಿಸಬೇಕಾದ 5 ಸಲಹೆಗಳನ್ನು ಚರ್ಮರೋಗ ತಜ್ಞರು ಹಂಚಿಕೊOಡಿದ್ದಾರೆ.
ಮದುವೆಯ ಸೀಸನ್ ನಡೆಯುತ್ತಿರುವುದರಿಂದ, ಅವರಿಗೋಸ್ಕರ ಟಿಪ್ಸ್. ವಧುವಿನ ಉಡುಪು, ಕೂದಲು ಮತ್ತು ಮೇಕಪ್ ಹಿಡಿದು ಎಲ್ಲಾ ಅಲಂಕಾರಿಕ ವ್ಯವಸ್ಥೆಗಳವರೆಗೆ, ಎಲ್ಲವೂ ಪರಿಪೂರ್ಣವಾಗಿರಬೇಕು. ವಧುಗಳು ತಮ್ಮ ಮದುವೆಯ ದಿನದಂದು ಉತ್ತಮವಾಗಿ ಕಾಣಲು ಬಯಸುತ್ತಾರೆ. ಮತ್ತು ಹಲವಾರು ಮೇಕಪ್ ಉತ್ಪನ್ನಗಳೊಂದಿಗೆ ಲೇಯರ್ ಮಾಡಲು ಪ್ರಾರಂಭಿಸುವ ಮೊದಲು ಚರ್ಮವನ್ನು ಸಿದ್ಧಪಡಿಸಿದರೆ ಮತ್ತು ಆರೋಗ್ಯಕರವಾಗಿದ್ದರೆ ಮಾತ್ರ ಅದನ್ನು ಚೆನ್ನಾಗಿ ಕಾಣಿಸುವಂತೆ ಮಾಡಬಹುದು. ಕುದಲಿಯಿಂದ, ಟೋವರೆಗೆ ಹೊಳೆಯುವ ನಿಮ್ಮ ಅಗತ್ಯಕ್ಕೆ ಸಾಕಷ್ಟು ತಯಾರಿ ಅಗತ್ಯವಿರುತ್ತದೆ. ಮದುವೆ ಕೆಲವು ದಿನಗಳ ಮೊದಲು ತಯಾರಾಗಲು ಪ್ರಾರಂಭವಾಗಬೇಕು. ವಧುಗಳು ತಮ್ಮ ವಿವಾಹದ ಮೊದಲು ಅನುಸರಿಸಬೇಕಾದ ಆರೋಗ್ಯಕರ ಚರ್ಮದ ಸಲಹೆಗಳನ್ನು ಡಾ ವಾರೈಚ್ ನೀಡಿದ್ದಾರೆ.
ಮೊದಲನೆಯದಾಗಿ, ಪ್ರತಿಯೊಬ್ಬ ವಧುವೂ ಅನುಸರಿಸಬೇಕಾದ ಮೊದಲ ನಿಯಮವೆಂದರೆ ‘ಈಗ ಹೊಸದೇನೂ ಇಲ್ಲ’. ಚರ್ಮಶಾಸ್ತ್ರಜ್ಞರ ಪ್ರಕಾರ, ವಧುಗಳು ತಮ್ಮ ಮದುವೆಗೆ 3 ರಿಂದ 4 ವಾರಗಳ ಮೊದಲು ಹೊಸ ಉತ್ಪನ್ನಗಳ, ಹೊಸ ಫೇಶಿಯಲ್ ಮತ್ತು ಚರ್ಮದ ಮೇಲೆ ಹೊಸ ರೀತಿಯ ಪ್ರಯೋಗಗಳನ್ನು ಮಾಡಬಾರದು.
ಮೃದುವಾದ ಮೇಕಪ್ ಬೇಸ್ಗಾಗಿ ಶೇವಿಂಗ್ ಮಾಡಿಸಿಕೊಳ್ಳಿ. ವಧುಗಳು ಉತ್ತಮವಾದ ಪೀಚ್ ಫಝ್ ಮುಖದ ಕೂದಲನ್ನು ಹೊಂದಿದ್ದರೆ, ಫೇಸ್ ಶೇವಿಂಗ್ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಮೂರನೆಯ ಸಲಹೆಗಾಗಿ, ಡಾ ವರೈಚ್ ಹೇಳಿರುವುದು, “ನೀವು ಕೂದಲು ನುಣುಪಾಗಿಸುವ ಚಿಕಿತ್ಸೆಯನ್ನು ಮಾಡಲು ಯೋಜಿಸುತ್ತಿದ್ದರೆ, ಕೆರಾಟಿನ್, ಸಿಸ್ಟೈನ್ ಅಥವಾ ಸ್ಮೂತನಿಂಗ್ ಗಳನ್ನು ಮಾಡಿಸಿಕೊಳ್ಳಬೇಡಿ. ಇದರಿಂದ ಕೂದಲು ಉದುರುವುದು ಜಾಸ್ತಿಯಾಗುತ್ತದೆ. ಕೂದಲು ಬೊಟೊಕ್ಸ್ ಮಾಡಿಸಿಕೊಳ್ಳುವುದು ಸುರಕ್ಷಿತ ಆಯ್ಕೆ.
ನಾಲ್ಕನೇ ಸಲಹೆಗಾಗಿ, ಚರ್ಮರೋಗ ತಜ್ಞರು ವಧುಗಳು ತಮ್ಮ ಮದುವೆಯ ದಿನ ಅಥವಾ ಸಮಾರಂಭದ ಮೊದಲು ಅನುಸರಿಸಬಹುದಾದ ತ್ವಚೆಯ ಹ್ಯಾಕ್ ಅನ್ನು ಸೂಚಿಸಿದ್ದಾರೆ. ಚರ್ಮರೋಗ ತಜ್ಞರ ಪ್ರಕಾರ ಮೇಕಪ್ ಅನ್ನು ಪ್ರಾರಂಭಿಸುವ ಮೊದಲು, ಲಘುವಾದ ಮಾಯಿಶ್ಚರೈಸರ್ ಮುಖಕ್ಕೆ ಹಚ್ಚಿಕೊಳ್ಳುವುದು, ಮೃದುವಾಗಿ 5 ನಿಮಿಷಗಳ ಮಸಾಜ್ ಮಾಡಿ, ಮುಖದ ಮೇಲೆ ಶೀಟ್ ಮಾಸ್ಕ್ ಮತ್ತು ನಿಮ್ಮ ಕಣ್ಣುಗಳ ಮೇಲೆ ಟೀ ಬ್ಯಾಗ್‌ಗಳನ್ನು 15 ನಿಮಿಷಗಳ ಕಾಲ ಇರಿಸಿ. ಈ ರೀತಿ ಮಾಡುವುದರಿಂದ ಚರ್ಮದಲ್ಲಿ ಗ್ಲೋ ಬರುತ್ತದೆ ಎಂದು ಸಲಹೆ ನೀಡಿದ್ದಾರೆ. ಕೊನೆಯದಾಗಿ, ವಧು ತನ್ನ ಮದುವೆಗೆ ಅನುಸರಿಸಬೇಕಾದ ಮುಖ್ಯ ಮಂತ್ರವೆOದರೆ ‘ನಗುತ್ತಲೇ ಇರಬೇಕು ಏಕೆಂದರೆ ಸಂತೋಷದ ವಧುಗಳು ಅತ್ಯಂತ ಸುಂದರವಾಗಿ ಕಾಣುತ್ತಾರೆ ಎಂದು ಅವರು ಹೇಳಿದರು.