ಚಿಕ್ಕಮಗಳೂರು: ಅಜ್ಜಂಪುರ ತಾಲೂಕಿನ ಶಿವನಿ ರೈಲ್ವೆ ನಿಲ್ದಾಣದ ಬಳಿ ವಾಸವಿರುವ ಮಂಜುನಾಥ್ ಹಾಗೂ ಮಂಗಳದಂಪತಿಯ ಐದು ವರ್ಷದ ಪುಟ್ಟ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮನೆಯಲ್ಲಿದ್ದ ಐದು ವರ್ಷದ ಪಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಮಗುವಿಗೆ ಜ್ವರ ಇದ್ದ ಕಾರಣ ಮನೆಯವರು ಮಗುವನ್ನು ಮನೆಯಲ್ಲೇ ಬಿಟ್ಟು ಕೂಲಿ ಕೆಲಸಕ್ಕೆ ಹೋಗಿದ್ದರು, ದಂಪತಿಗಳು ಮಧ್ಯಾಹ್ನ ಊಟಕ್ಕೆಂದು ಮನೆಗೆ ಬಂದು ನೋಡಿದಾಗ ಬಾಲಕಿಯ ಮೃತ ದೇಹ ಕಂಡು ಶಾಕ್ ಆಗಿದ್ದಾರೆ. ಹಾಗೂ ಮಗುವಿನ ಕಿವಿಯಲ್ಲಿದ್ದ ಓಲೆ ಹಾಗೂ ಕಾಲಲ್ಲಿದ್ದ ಕಾಲ್ಗೆಜ್ಜೆ ಇರಲಿಲ್ಲ ಮಗುವಿನ ಕೆನ್ನೆ ಹಾಗೂ ಕೈ ಮೇಲೆ ಗಾಯಗಳಾಗಿದ್ದು ಸಾವಿನ ಸುತ್ತಾ ಅನುಮಾನದ ಹುತ್ತ ಬೆಳೆದು ನಿಂತಿದೆ. ಇನ್ನು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿದ್ದ 5 ವರ್ಷದ ಬಾಲಕಿಗೆ ಏನಾಯ್ತು?
