ಬೆಂಗಳೂರು : ಯಡಿಯೂರಪ್ಪ ವಿರುದ್ದ ಪ್ರಕರಣ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡಲಾಗಿದೆ. ಅರ್ಜಿದಾರರು ಅಬ್ರಾಹಂ ಇರಬಹುದು. ಪ್ರಾಥಮಿಕ ತನಿಖೆ ವರದಿ ಆದಾರದ ಮೇಲೆ ತನಿಖೆಯಾಗಬೇಕು. ಮುಡಾದಲ್ಲಿ ಪ್ರಿಲಿಮನರಿ ತನಿಖೆಯಾಗಿಲ್ಲಾ. ಇವರನ್ನ ಅವರನ್ನ ಒಂದೆ ತಕ್ಕಡಿಗೆ ಹಾಕೋದು ಸರಿಯಲ್ಲಾ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಹಣ ಆಸ್ತಿ ಮಾಡಬೇಕು ಅಂದ್ರೆ ಸೈಟ್ ನಲ್ಲಿ ಮಾಡಬೇಕಾ..? ಯಾರ ಬಗ್ಗೆ ಏನು ಮಾತಾಡ್ತಿವಿ ಅನ್ನೊ ವಿಚಾರ ಮಾಡಬೇಕು. ಅವರು ಎಷ್ಟು ದುಡ್ಡ ಮಾಡಬೇಕು ಅಂದಿದ್ರೆ ಸೈಟ್ ನಲ್ಲೆ ಮಾಡಬೇಕಿತ್ತಾ. ಚಿಟುಕಿ ಹೊಡುದ್ರೆ ಬೇಕಾದಷ್ಟು ಬಂದು ಬೀಳುತ್ತೆ. ಬಾಡಿಗೆ ಮನೆಯಲ್ಲಿ ವಾಸವಿದ್ದವರು ಸಿದ್ದರಾಮಯ್ಯನವರು ಎಂದು ಹೇಳಿದ್ದಾರೆ.
ಯಾರ ಬಗ್ಗೆ ಆರೋಪ ಮಾಡ್ತಿವಿ ಅನ್ನೋದನ್ನ ಯೋಚನೆ ಮಾಡಬೇಕು. ಅನಿವಾರ್ಯವಾಗಿ ಕೆಲವೊಂದರಲ್ಲಿ ಕಾಂಪ್ರಮೈಸ್ ಆಗಬೇಕಿದೆ. ಸಿದ್ದರಾಮಯ್ಯ ಅವರ ಶ್ರೀಮತಿಯವರು ಇಲ್ಲಿಯವರೆಗೂ ಮನೆಯಿಂದ ಹೊರಗೆ ಬಂದವರಲ್ಲಾ. ಅಂತವರನ್ನ ಬೀದಿಗೆ ತಂದು ನಿಲ್ಲಿಸಿ ಕಟಕಟೆಗೆ ನಿಲ್ಲಿಸಿ. ವ್ಯವಸ್ಥಿಯವಾಗಿ ಕುತಂತ್ರ ಮಾಡಿದಕ್ಕೆ ಜನ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ಇರೋರು ಯಾರು 24 ಕ್ಯಾರೆಟ್ ಗೋಲ್ಡ್ ಅಲ್ಲಾ ನನ್ನನ್ನು ಸೇರಿ. ತನಿಖೆ ಮಾಡಿ ಅಂತ ಕೋರ್ಟ್ ಹೇಳಿದೆ. ಜನತಾ ನ್ಯಾಯಾಲದಿಂದ ತೀರ್ಪು ಬಂದಿದೆ ಎಂದು ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.