ಬೆಂಗಳೂರು:ಬಡ ಕುಟುಂಬಗಳಿಗೆ ಉಚಿತ ಆಹಾರ ಕಾರ್ಡ್ಗಳನ್ನು ಪಡೆಯಲು ಕೆಲವರು ನಕಲಿದಾಖಲೆಗಳನ್ನು ಬಳಸುತ್ತಿದ್ದಾರೆ ಎಂದು ಸರ್ಕಾರ ಕಂಡುಹಿಡಿದಿದೆ, ಆದ್ದರಿಂದ ಅವರು ಆ ಕಾರ್ಡ್ಗಳನ್ನು ರದ್ದುಗೊಳಿಸಿದ್ದಾರೆ ಮತ್ತು ಅದನ್ನು ಮಾಡಿದ ಜನರನ್ನು ಶಿಕ್ಷಿಸಲು ಹೊರಟಿದ್ದಾರೆ.
ಅಕ್ರಮವಾಗಿ ಕಾರ್ಡ್ ಪಡೆದುಕೊಂಡಿರುವವರ ವಿವರವನ್ನು ಪತ್ತೆ ಹೆಚ್ಚುವುದಕ್ಕೆ ರಾಜ್ಯ ಸರ್ಕಾರವು ವಿವಿಧ ಮೂಲಗಳ ಮೊರೆ ಹೋಗಿದ್ದು, ಈ ಪೈಕಿ ಆದಾಯ ತೆರಿಗೆ ಇಲಾಖೆ, ಆರ್ಟಿಓ, ಸಬ್ ರಿಜಿಸ್ಟ್ರಾರ್ ಕಚೇರಿ, ಕಂದಾಯ ಇಲಾಖೆ ಕೂಡ ಆಗಿದೆ.
ಇದಲ್ಲದೇ ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷ ರೂ. ಮೀರಿದವರ ಬಗ್ಗೆ ವಿವಿಧ ಇಲಾಖೆಗಳಿಂದ ಮಾಹಿತಿಯನ್ನು ಕಲೆ ಹಾಕುವುದಕ್ಕೆ ಮುಂದಾಗಿದೆ. ಅನರ್ಹರು ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಲ್ಲಿ ಅವರಿಗೆ ಎಪಿಎಲ್ ಕಾರ್ಡ್ ಅನ್ನು ನೀಡುವುದರ ಮೂಲಕ ಅಕ್ರಮವನ್ನು ಮಟ್ಟ ಹಾಕುವುದನ್ನೆ ಮುಂದಾಗಿದೆ ಇಲಾಖೆ.