ನವರಾತ್ರಿಯ ಎರಡನೇ ದಿನ, “ಬ್ರಹ್ಮಚಾರಿಣಿ” ಎಂಬ ಹೆಸರು ಏಕೆ ಬಂತು?

ನವರಾತ್ರಿಯ ಎರಡನೇ ದಿನ, “ಬ್ರಹ್ಮಚಾರಿಣಿ” ಎಂಬ ಹೆಸರು ಏಕೆ ಬಂತು?

ನವರಾತ್ರಿಯ ಎರಡನೇ ದಿನ ದುರ್ಗಾ ದೇವಿಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜಿಸಲಾಗುತ್ತದೆ ತಾಯಿ ಬ್ರಹ್ಮಚಾರಿಣಿಯನ್ನು ತಪಸ್ಸಿನ ದೇವತೆ ಎಂದು ಕರೆಯಲಾಗುತ್ತದೆ. ಎರಡನೇ ದಿನ ನೀವು ಸಕ್ಕರೆ ಮತ್ತು ಪಂಚಾಮೃತವನ್ನು ಅರ್ಪಿಸಬೇಕು. ಈ ಎರಡೂ ಪ್ರಸಾದ ಆಕೆಗೆ ಅತ್ಯಂತ ಪ್ರಿಯ.

ಆಕೆಯ ಹೆಸರೇ ಹಲವು ರೀತಿಯ ಅರ್ಥಗಳನ್ನು ನೀಡುತ್ತದೆ. ಬ್ರಹ್ಮ ಎಂದರೆ ‘ತಪಸ್ಸು’ ಮತ್ತು ಚಾರಿಣಿ ಎಂದರೆ ‘ನಡೆಸುವವರು’. ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಮಾಡುವವಳು ಎಂಬರ್ಥವಾಗಿದೆ. ಯಾವ ಓರ್ವ ವ್ಯಕ್ತಿ ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾನೋ ಅವನು ತಪಸ್ಸು, ತ್ಯಾಗ, ಸಂಯಮ ಮತ್ತು ಪುಣ್ಯವನ್ನು ಪಡೆಯುತ್ತಾನೆ.

ಮಾ ದುರ್ಗೆಗೆ ಬ್ರಹ್ಮಚಾರಿಣಿ ಎಂಬ ಹೆಸರು ಏಕೆ ಬಂತು ಎಂಬುದರ ಹಿಂದಿನ ಕತೆಯನ್ನು ತಿಳಿಯೊಣ ಬನ್ನಿ…

ಈ ದೇವಿಯು ತನ್ನ ಪೂರ್ವ ಜನ್ಮದಲ್ಲಿ ಪರ್ವತ ರಾಜನ ಮನೆಯಲ್ಲಿ ಹುಟ್ಟಿರುತ್ತಾಳೆ.  ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯನ್ನಾಗಿ ಪಡೆಯಲು ನಾರದರು ಉಪದೇಶ ಮಾಡಿದಂತೆ ದೇವಿಯು ಶಿವನನ್ನು ಪತಿಯನ್ನಾಗಿ ಪಡೆಯುವುದಕ್ಕೆ ತಪಸ್ಸು ಮಾಡುತ್ತಾಳೆ. ಒಂದು ಸಾವಿರ ವರ್ಷಗಳ ಕಾಲ ದೇವಿಯು ಹಣ್ಣು- ಎಲೆಗಳನ್ನು ತಿಂದು ಜೀವಿಸುತ್ತಾಳೆ. ಆ ನಂತರ ಒಂದು ಸಾವಿರ ವರ್ಷ ಕೇವಲ ನೆಲದ ಮೇಲೆ ಬಿದ್ದ ಒಣಗಿದ ಬಿಲ್ವಪತ್ರೆಗಳನ್ನು ಮಾತ್ರ ಸೇವಿಸುತ್ತಾಳೆ. ಅದಾದ ಮೇಲೆ ಅವುಗಳನ್ನು ಸಹ ಸೇವಿಸುವುದನ್ನು ನಿಲ್ಲಿಸುತ್ತಾಳೆ. ಹೀಗೆ ಬಹಳ ಕಠಿಣವಾದ ತಪಸ್ಸು ಮಾಡಿದ ಕಾರಣದಿಂದಾಗಿ ದೇವಿಗೆ ತಪಶ್ಚಾರಿಣೀ ಅರ್ಥಾತ್ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂದಿದೆ. ಆಕೆಯ ಆಕೆಯ ಕಠಿಣ ತಪಸ್ಸಿನಿಂದ ಶಿವನು ಆಕೆಗೆ ಒಲಿಯುತ್ತಾನೆ.

Leave a Reply

Your email address will not be published. Required fields are marked *