ಬೆಂಗಳೂರು: ಪತ್ನಿಯ ರಹಸ್ಯಗಳನ್ನು ಬಿಚ್ಚಿಟ್ಟ ಬೆಂಗಳೂರು ಮೂಲದ ಸಾಫ್ಟ್ವೇರ್ ಎಂಜಿನಿಯರ್ ಕೌಟುಂಬಿಕ ನ್ಯಾಯಾಲಯದಲ್ಲಿ ಗೆದ್ದಿದ್ದಾರೆ. ವರ್ಷಗಳಿಂದಲೂ ಕೂರ್ಟ್ನಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿತ್ತು. ಇದರಲ್ಲಿ ಕೊನೆಗೂ ತನ್ನದು ತಪ್ಪಿಲ್ಲ ಎಂಬುದನ್ನು ಆತ ಸಾಬೀತುಪಡಿಸಲು ಗೂಢಚಾರನಾಗಿ ಬದಲಾಗಿದ್ದ. ಎಲ್ಲ ಮಾಹಿತಿ ಕಲೆ ಹಾಕಿದ್ದಾನೆ. ಪ್ರಕರಣದಲ್ಲಿ ಪತ್ನಿಯ ವರ್ತನೆ ನೋಡಿದರೆ ಇಂದಿನ ದಿನಮಾನಗಳಲ್ಲಿ ಮದುವೆಗೆ, ಪತಿ-ಪತ್ನಿ ಸಂಬಂಧಕ್ಕೆ ಮೌಲ್ಯ ಇಲ್ಲವೇನೋ ಎಂದನಿಸುತ್ತದೆ.

ಬೆಂಗಳೂರು ಮೂಲದ ಎಂಜಿನಿಯರ್ ತನ್ನ ಪತ್ನಿ ಕಳ್ಳಾಟವನ್ನು ಬಯಲಿಗೆಡವಿದ್ದಾನೆ. ಆತ ಅದಕ್ಕಾಗಿ ಗೂಢಾಚಾರನಂತೆ ಕೆಲಸ ಮಾಡಿದ್ದಾನೆ. ಕರಾವಳಿ ನಗರ ಮಂಗಳೂರು ಕೌಟುಂಬಿಕ ನ್ಯಾಯಾಲಯದಲ್ಲಿ ನಾಲ್ಕು ವರ್ಷಗಳ ಕಾಲ ನಡೆದ ವಿಚ್ಛೇದನ ಹೋರಾಟದಲ್ಲಿ ಕೊನೆಗೂ ಆತನ ಗೆದಿದ್ದಾನೆ. ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದರ ವರದಿ ಆಗಿದೆ.
ಮಂಗಳೂರು ಕೋರ್ಟ್ ಈ ದಂಪತಿಗಳಿಗೆ ವಿಚ್ಛೇದನ ನೀಡಿ ಆದೇಶಿಸಿದೆ. ಅಷ್ಟು ಮಾತ್ರವಲ್ಲದೇ ಬಹುಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆತನ ಪತ್ನಿಯ ಬೇಡಿಕೆಯನ್ನು ಪುರಸ್ಕರಿಸದೇ, ಆಕೆಯ ಅರ್ಜಿ ವಜಾಗೊಳಿಸಿ, ಮೊಕದ್ದಮೆ ವೆಚ್ಚವಾಗಿ ₹30,000 ರೂಪಾಯಿಯನ್ನು ಪಾವತಿಸುವಂತೆ ಆದೇಶ ಹೊರಡಿಸಿದೆ.
ಅಸಲಿಗೆ ಆಗಿದ್ದೇನು? ಪತಿ ಮಾಡಿದ್ದೇನು?
ಪತ್ನಿ ಮತ್ತು ಆಕೆಯ ಮಾಜಿ ಗೆಳೆಯನ ನಡುವೆ ಇನ್ನೂ ಸಂಬಂಧವಿದೆ. ಹಣಕಾಸಿನ ವಹಿವಾಟುಗಳ ನಡೆದಿವೆ ಎಂದು ಅನುಮಾನಗೊಂಡ ಮೊದಲ ತಪಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಡಿಸೆಂಬರ್ 2018 ರಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನ ಮದುವೆ ಕೊನೆಗೊಂಡಿದೆ. ಹೀಗಿದ್ದರು ಅವರ ಸಂಬಂಧ ರಹಸ್ಯವಾಗಿ ಮುಂದುವರಿಸಿದ್ದಾರೆ ಎಂದು ಅವರು ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ತಾನು ಮಾಡಿದ ಆರೋಪಗಳ ಸತ್ಯಾಸತ್ಯತೆ ತಿಳಿಯಲು ಸತಃ ಗೂಢಾಚಾರನಾಗಿ ಕೆಲಸ ಮಾಡಿದ್ದ ಪತಿಯು, ಕೆಲಸ ಹುಡುಕುತ್ತಿದ್ದ ಪತ್ನಿಯೊಂದಿಗೆ ಉದ್ಯೋಗದಾತನೆಂಬಂತೆ ಜೂಮ್ ಮೀಟಿಂಗ್ ಮಾಡಿದ್ದಾನೆ. ಪತ್ನಿ ಉದ್ಯೋಗ ಸಂದರ್ಶನ ನಡೆಸಿದ್ದಾನೆ. ಈ ವೇಳೆ ಆಕೆ ತನ್ನ ಮೊದಲ ಮದುವೆ ಮುರಿದುಕೊಂಡಿದ್ದರ ಬಗ್ಗೆ ಮಾತನಾಡಿದ್ದಾಳೆ. ಬಳಿಕ ನಾನೀಗ ಬೇರೊಬ್ಬರನ್ನು ಮದುವೆಯಾಗಿದ್ದೇನೆ ಅಂತಲೂ ಹೇಳಿದ್ದಾರೆ. ಪತಿಯ ನಕಲಿ ಜೂಮ್ ಕರೆಯಲ್ಲಿ ಎಲ್ಲವನ್ನು ಆಕೆ ಬಹಿರಂಗಪಡಿಸಿದ್ದಾಳೆ.
ಅಷ್ಟಕ್ಕೆ ಬಿಡದ ಪತಿ ಇನ್ನಷ್ಟು ಮಾಹಿತಿ ಹೊರಗೆಳೆಯಲು ಯತ್ನಿಸಿದ್ದಾನೆ. ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಅರ್ಜಿಗಳನ್ನು ಹಾಕಿದ್ದಾರೆ. ಆಕೆಯ ಮೊದಲ ವಿವಾಹದ ದಾಖಲೆಗಳನ್ನು ಪಡೆದಿದ್ದಾನೆ. ಆಕೆ ಪಾನ್ ಕಾರ್ಡ್ ವಿವರ, ದಾಖಲೆಗಳು, ವಿಚ್ಛೇದನಕ್ಕೆ ಬೇಕಾದ ಎಲ್ಲ ದಾಖಲೆಗಳು, ಪತ್ನಿ ಹೆಸರು ಬದಲಾವಣೆ ಮಾಡಿಕೊಂಡಿದ್ದ ಅಫಿಡವಿಟ್ ಪ್ರತಿಗಳ ಮಾಹಿತಿ ಪಡೆದುಕೊಂಡಿದ್ದಾನೆ.
2023 ರಲ್ಲಿ ಮತ್ತೊಂದು ಮದುವೆ
ಈ ಮೇಲಿನ ಎಲ್ಲ ದಾಖಲೆಗಳು ಪತ್ನಿ ಬೇರೊಬ್ಬನನ್ನು 2023ರಲ್ಲಿ ಅಧಿಕೃತ ಹಾಗೂ ಕಾನೂನು ಬದ್ಧವಾಗಿ ವಿವಾಹವಾಗಿದ್ದನ್ನು ಸಾಬೀತು ಮಾಡಿವೆ. ಮೊದಲ ವಿವಾಹದ ದಾಖಲೆಗಳನ್ನು ಪತಿ ಕೋರ್ಟ್ಗೆ ಸಲ್ಲಿಸಿದ್ದಾನೆ. ಅರ್ಜಿದಾರ ಹಾಗೂ ಪತ್ನಿ ಇಬ್ಬರು ಟೆಕ್ಕಿಗಳು ಎಂಜಿನಿಯರಿಂಗ್ ವೃತ್ತಿಯಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನಲ್ಲಿ ವಿವಾಹವಾಗಿದ್ದರು. ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡು ಕೆಆರ್ ಪುರಂನಲ್ಲಿ ವಾಸಿಸುತ್ತಿದ್ದರು. ಮೊದಲ ಪತಿ 2021 ರಲ್ಲಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13(1)(i-a) ಅಡಿಯಲ್ಲಿ ಕ್ರೌರ್ಯ, ಮಾನಸಿಕ ಕಿರುಕುಳ ಮತ್ತು ದ್ರೋಹ ಉಲ್ಲೇಖಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
₹3 ಕೋಟಿ ಪರಿಹಾರ ಬೇಡಿಕೆ ವಜಾ ವಿಚ್ಚೇದನ ಸಿಗುವ ಮೊದಲೇ ಎರಡನೇ (2023) ಮದುವೆ ಆಗಿದ್ದ ಪತ್ನಿಯು, ತನ್ನ ಪತಿ (ಅರ್ಜಿದಾರ) ವಿರುದ್ಧ ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಗರ್ಭಪಾತಕ್ಕೆ ಒತ್ತಾಯಿಸಿದ್ದಾರೆಂದು ಆರೋಪಿಸಿದ್ದರು. ಜೊತೆಗೆ ಜೀವನಾಂಶ ಪರಿಹಾರವಾಗಿ 3 ಕೋಟಿ ರೂಪಾಯಿ ಹಾಗೂ ಮಾಸಿಕ ಜೀವನಾಂಶ ಪ್ರತಿ ತಿಂಗಳು ₹60,000 ಬೇಡಿಕೆ ಇಟ್ಟಿದ್ದರು. ಸದ್ಯ ಕೋರ್ಟ್ ಆಕೆಯ ಬೇಡಿಕೆ ವಜಾಗೊಳಿಸಿ ಪತಿಯ ಇಚ್ಛೆಯಂತೆ ವಿಚ್ಛೇದನ ನೀಡಿದೆ. ಅಲ್ಲದೇ ಪತಿಗೆ ಚಿನ್ನದ ಆಭರಣಗಳೇನಿದ್ದರೂ ಹಿಂತಿರುಗಿಸುವಂತೆ ಆದೇಶಿಸಿತು.