ಚಾಮರಾಜನಗರದಲ್ಲಿ ಕಾಡಾನೆ ಹಾವಳಿ.!

ಚಾಮರಾಜನಗರದಲ್ಲಿ ಕಾಡಾನೆ ಹಾವಳಿ.!

ಮೆಕ್ಕೆಜೋಳ ತಿನ್ನಿ ಓಡಿದ ಒಂಟಿ ಸಲಗ; ರೈತರಿಗೆ ಗಾಯ

ಚಾಮರಾಜನಗರ : ಗಡಿ ನಾಡು ಚಾಮರಾಜನಗರದಲ್ಲಿ ಮತ್ತೆ ಕಾಡಾನೆ ಹಾವಳಿ ಮಿತಿ ಮೀರಿದೆ. ಕಟಾವಿಗೆ ಬಂದಿದ್ದ ಮೆಕ್ಕೆಜೋಳವನ್ನು ಒಂಟಿ ಸಲಗ ತಿಂದು ತೇಗಿದ್ದು, ತಡರಾತ್ರಿ 3 ಗಂಟೆಯವರೆಗೂ ಕಾಡಾನೆ ಓಡಿಸಲು ಹನೂರು ತಾಲೂಕಿನ ಕಾಡಂಚಿನ ಪ್ರದೇಶ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದಲ್ಲಿ ರೈತರು ಹರಸಾಹಸ ಪಟ್ಟಿದ್ದಾರೆ.

ನಂಜಶೆಟ್ಟಿ ಎಂಬುವವರಿಗೆ ಸೇರಿದ ಜಮೀನಿಗೆ ಲಗ್ಗೆಯಿಟ್ಟ ಕಾಡಾನೆ, 5 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳವನ್ನು ಸಂಪೂರ್ಣ ಹಾಳು ಮಾಡಿದೆ. ಒಂಟಿ ಸಲಗವನ್ನು ಓಡಿಸುವ ವೇಳೆ ಬಿದ್ದು ರೈತನ ಕಾಲಿಗೆ ಗಾಯ ಕೂಡ ಆಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *