ಯಾದಗಿರಿ: ಯಾದಗಿರಿ ತಾಲೂಕಿನ ಜೀನಕೇರ ತಾಂಡಾ ಬಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರನ್ನು 30 ವರ್ಷದ ಸುಮಿ ಬಾಯಿ, 30 ವರ್ಷದ ಕಿಶನ್, 18 ವರ್ಷದ ನೇನು, 22 ವರ್ಷದ ಚೇನು ಎಂದು ಗುರುತಿಸಲಾಗಿದೆ. ಸಿಡಿಲು ಬಡಿದ ಇನ್ನು ಮೂವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ