ಪತ್ನಿಗಳಿಗೆ ವಿಚ್ಛೇದನ ನೀಡದೆ ಮದುವೆ: ವ್ಯಕ್ತಿ ಜೈಲುಪಾಲು.
ಗೋಪಾಲ್ಗಂಜ್ : ವ್ಯಕ್ತಿಯೊಬ್ಬ ಮೂರು ವರ್ಷಗಳಲ್ಲಿ ಮೂರು ಮದುವೆಯಾಗಿ ಈಗ ಜೈಲುಪಾಲಾಗಿರುವ ಘಟನೆ ಬಿಹಾರದ ಗೋಪಾಲ್ಗಂಜ್ನಲ್ಲಿ ನಡೆದಿದೆ. ಗೋಪಾಲ್ಗಂಜ್ ಜಿಲ್ಲೆಯ ಪಿಂಟು ಬರ್ನ್ವಾಲ್ ಎಂಬ ವ್ಯಕ್ತಿಯನ್ನು ಮೂರು ವರ್ಷಗಳ ಅವಧಿಯಲ್ಲಿ ತನ್ನ ಹಿಂದಿನ ಯಾವುದೇ ಪತ್ನಿಯರಿಗೆ ವಿಚ್ಛೇದನ ನೀಡದೆ ಮೂವರು ಮಹಿಳೆಯರನ್ನು ಮದುವೆಯಾಗಿದ್ದಾನೆ. ಆತನ ಮೊದಲ ಮತ್ತು ಎರಡನೇ ಪತ್ನಿ ಆತನ ಮೇಲೆ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಬೇಡಿಕೆಯ ಆರೋಪ ಹೊರಿಸಿದ ನಂತರ ಆತನನ್ನು ಬಂಧಿಸಲಾಗಿದೆ.
ಆರೋಪಗಳಿಗೆ ಪ್ರತಿಕ್ರಿಯಿಸಿದ ಪಿಂಟು ಬರ್ನ್ವಾಲ್, ವರದಕ್ಷಿಣೆ, ಹಿಂಸೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ತನ್ನ ವಿರುದ್ಧ ಮಾಡಲಾದ ಆರೋಪಗಳು ಸುಳ್ಳು ಎಂದು ಅವರು ಹೇಳಿಕೊಂಡಿದ್ದಾರೆ. ವರದಕ್ಷಿಣೆ ಆರೋಪಗಳಿಗೆ ಸಂಬಂಧಿಸಿದಂತೆ ಅವರು ಹೇಳಿದ್ದೆಲ್ಲವೂ ಸುಳ್ಳು, ನಾವು ಅವರಿಂದ ಒಂದು ರೂಪಾಯಿ ಕೂಡ ಪಡೆದಿಲ್ಲ ಎಂದು ಪಿಂಟು ಹೇಳಿದ್ದಾರೆ.
ತಾನು ಮೂವರು ಮಹಿಳೆಯರನ್ನು ಮದುವೆಯಾಗಿದ್ದೇನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಅವರ ಪ್ರಕಾರ, ಅವರ ಮನೆಯ ಪರಿಸ್ಥಿತಿಯಿಂದ ಹಿಂದಿನ ವಿವಾಹಗಳನ್ನು ಮುಂದುವರಿಸಲು ಸಾಧ್ಯವಾಗಿಲ್ಲ ನನ್ನ ತಾಯಿಗೆ 60 ವರ್ಷ. ಅವರಿಬ್ಬರೂ ಎರಡು ದಿನಗಳವರೆಗೆ ಅಡುಗೆಯನ್ನೂ ಮಾಡಿರಲಿಲ್ಲ ಎಂದು ಪಿಂಟು ಹೇಳಿದ್ದಾರೆ.
ಇಬ್ಬರೂ ಪತ್ನಿಯರ ಲಿಖಿತ ದೂರುಗಳ ನಂತರ, ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಜೈಲಿಗೆ ಕಳುಹಿಸಲಾಗುತ್ತಿದೆ. ಖುಷ್ಬೂ ಅವರೊಂದಿಗಿನ ತನ್ನ ಮೊದಲ ಮದುವೆಯ ಬಗ್ಗೆ ಮಾತನಾಡುತ್ತಾ, ಪಿಂಟು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
For More Updates Join our WhatsApp Group :




