ಎಲ್ಲರೂ ಕಡಿಮೆ ಬೆಲೆಯಲ್ಲಿ ಆಕರ್ಷಕ ಫೀಚರ್ಸ್ ಹೊಂದಿರುವ 5ಜಿ ಮೊಬೈಲ್ ತೆಗೆದುಕೊಳ್ಳುವ ಪ್ಲ್ಯಾನ್ ಮಾಡುತ್ತಾರೆ. ಆದರೆ ಇದರಲ್ಲಿ ಕೊಳ್ಳುಗನಿಗೆ ಆಯ್ಕೆಗಳು ಕಡಿಮೆ ಸಿಗುತ್ತವೆ. ಈಗ ಫ್ಲಿಪ್ ಕಾರ್ಟ್ ಸೇಲ್ ನಡೆಯುತ್ತಿದ್ದು, ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳಬಹುದು.
ಈ ಸೇಲ್ನಲ್ಲಿ ಫ್ಲಿಪ್ ಕಾರ್ಟ್ ಕಡಿಮೆ ಬೆಲೆಯಲ್ಲಿ ಆಕರ್ಷಕ 5ಜಿ ಫೋನ್ ನೀಡುತ್ತಿದೆ.
ಫ್ಲಿಪ್ ಕಾರ್ಟ್ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ಆರಂಭಿಸಿದೆ. ಈ ವೇಳೆ ಹಲವು ಶಕ್ತಿ ಶಾಲಿ ಫೋನ್ಗಳು ಕಡಿಮೆ ಬೆಲೆಯಲ್ಲಿ ಲಭ್ಯ. ಈ ಆಫರ್ ಜುಲೈ 7ರ ವರೆಗೆ ಮಾತ್ರ ಇರುತ್ತದೆ. ಈ ಸ್ಮಾರ್ಟ್ಫೋನ್ಗಳನ್ನು ಖರೀದಿಸಲು ನೀವು ಹೆಚ್ಚಿನ ಹಣವನ್ನು ವ್ಯಯ ಮಾಡುವ ಅವಶ್ಯಕತೆಯೂ ಇಲ್ಲ. ಕಡಿಮೆ ಖರ್ಚಿನಲ್ಲಿ ಆಕರ್ಷಕ ಸ್ಮಾರ್ಟ್ಫೋನ್ಗಳು ನಿಮ್ಮ ಕೈ ಸೇರುತ್ತವೆ. 10 ಸಾವಿರ ರೂ.ಗಿಂತ ಕಡಿಮೆ ಮಾರಾಟದಲ್ಲಿ ಲಭ್ಯವಿರುವ ಅಂತಹ ಸ್ಮಾರ್ಟ್ಫೋನ್ಗಳ ಬಗ್ಗೆ ವರದಿ ಇಲ್ಲಿದೆ.
ಪೊಕೊ ಎಂ6 ಪ್ರೋ 5 ಜಿ
10 ಸಾವಿರಗಿಂತಲೂ ಕಡಿಮೆ ಬೆಲೆಯಲ್ಲಿ ಈಗ ನಿಮಗೆ 5ಜಿ ಸ್ಮಾರ್ಟ್ಫೋನ್ಗಳು ಲಭ್ಯ. ಬಿಗ್ ಸೇವಿಂಗ್ಸ್ ಡೇಸ್ ಮಾರಾಟದ ಸಮಯದಲ್ಲಿ POCO M6 Pro 5G ಅತ್ಯಂತ ಅಗ್ಗದ ಬೆಲೆಯಲ್ಲಿ ಲಭ್ಯವಿದೆ. ಯಾವುದೇ ಆಫರ್ ಇಲ್ಲದೆ ನೀವು ಈಗ 9,999 ರೂ.ಗೆ ಖರೀದಿಸಬಹುದು. ಕೂಪನ್ ಡಿಸ್ಕೌಂಟ್ ಮೂಲಕ ಕಂಪನಿಯು ಫೋನ್ ಮೇಲೆ 6000 ರೂ.ಗಳ ರಿಯಾಯಿತಿಯನ್ನು ನೀಡುತ್ತಿದೆ. ಇಷ್ಟೇ ಅಲ್ಲ, ಕಂಪನಿಯು ಫೋನ್ನಲ್ಲಿ 4,000 ರೂಪಾಯಿಗಳ ಎಕ್ಸ್ಚೇಂಜ್ ಆಫರ್ ಅನ್ನು ಸಹ ನೀಡುತ್ತಿದೆ.
ಈ ಮೊಬೈಲ್ 6ಜಿಬಿ ರ್ಯಾಮ್, 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, 6.7 ಇಂಚಿನ ಫುಲ್ ಎಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಹಿಂಭಾಗದಲ್ಲಿ 50 ಮೆಗಾ ಪಿಕ್ಸಲ್ ಕ್ಯಾಮೆರಾ ಮುಂಭಾಗದಲ್ಲಿ 8 ಮೆಗಾಪಿಕ್ಸಲ್ ಕ್ಯಾಮೆರಾ ಹೊಂದಿದ್ದು, ಇದರಲ್ಲಿ 5000 ಎಂಎಎಚ್ ಬ್ಯಾಟರಿ ನೀಡಲಾಗುತ್ತದೆ.
ಲಾವಾ ಯುವ 5 ಜಿ
LAVA Yuva 5G ಸಹ ರೂ 10 ಸಾವಿರಕ್ಕಿಂತ ಕಡಿಮೆ ಮಾರಾಟದಲ್ಲಿ ಲಭ್ಯವಿದೆ. ಈ ಫೋನ್ನಲ್ಲಿ ಅತ್ಯಂತ ಅದ್ಭುತವಾದ ಕೊಡುಗೆ ಲಭ್ಯವಿದೆ. ಫೋನ್ ಬ್ಯಾಂಕ್ ಕೊಡುಗೆ ಇಲ್ಲದೆ ರೂ 9,999 ಗೆ ಲಭ್ಯವಿದೆ, ಆದರೆ ಕಂಪನಿಯು ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 5 ಪ್ರತಿಶತ ಕ್ಯಾಶ್ಬ್ಯಾಕ್ ನೀಡುತ್ತದೆ.
ಈ ಆಕರ್ಷಕ ಸ್ಮಾರ್ಟ್ಫೋನ್ 6.53 ಡಿಸ್ಪ್ಲೇ ಹೊಂದಿದೆ. ಅಲ್ಲದೆ 5000 ಎಂಎಎಚ್ ಬ್ಯಾಟರಿಯೊಂದಿಗೆ ಗ್ರಾಹಕರ ಕೈ ಸೇರಲಿದೆ. ಇದರಲ್ಲಿ 4ಜಿಬಿ ರ್ಯಾಮ್, 128 ಜಿಬಿ ಇಂಟರ್ನಲ್ ಸ್ಟೋರೇಜ್ ನೀಡಲಾಗಿದೆ. ಹಿಂಭಾಗದಲ್ಲಿ 50 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದೆ.
ಸ್ಯಾಮಸಂಗ್ ಗ್ಯಾಲಕ್ಸಿ ಎಫ್ 14 5ಜಿ
SAMSUNG Galaxy F14 5G ನಂತಹ ಬ್ರ್ಯಾಂಡ್ ಫೋನ್ನ ಬೆಲೆ ಈ ಸೇಲ್ನಲ್ಲಿ ಮಾರಾಟದಲ್ಲಿ ರೂ 10,990 ಆದರೆ ಎಕ್ಸ್ಚೇಂಜ್ ಆಫರ್ ಮೂಲಕ ಕಂಪನಿಯು ಫೋನ್ನಲ್ಲಿ ರೂ 5000 ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ಫೋನ್ 4 ಜಿಬಿ ರ್ಯಾಮ್, 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದರಲ್ಲಿ ನೀವು 1 ಟಿಬಿ ವರೆಗೆ ಸ್ಟೋರೆಜ್ ಬೆಳಿಸಿಕೊಳ್ಳಬಹುದು.
ಫುಲ್ ಎಚ್ಡಿ ಪ್ಲಸ್ 6.6 ಇಂಚಿನ ಡಿಸ್ಪ್ಲೇ ನೀಡಲಾಗುತ್ತಿದ್ದು, ಹಿಂಭಾಗದಲ್ಲಿ 50 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 13 ಮೆಗಾಪಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ 6000 ಎಂಎಎಚ್ ಬ್ಯಾಟರಿ ಲಭ್ಯ.