ಮುಂಬೈ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ನ ದಿ ಬೆಸ್ಟ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು ಬೇಬಿಮೂನ್ಗಾಗಿ (ಮಗು ಹುಟ್ಟುವ ಮುನ್ನ ಸಣ್ಣ ಟ್ರಿಪ್ ಹೋಗೋದು) ಲಂಡನ್ಗೆ ತೆರಳಿದರು. ಅದಕ್ಕೂ ಮುನ್ನ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡರು. ಕೈ ಕೈ ಹಿಡಿದುಕೊಂಡು ವಿಮಾನ ನಿಲ್ದಾಣದ ಒಳಗೆ ತೆರಳುತ್ತಿರುವ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿವೆ. ನೆಟ್ಟಿಗರು ಕೂಡ ತಾರಾ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ
ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಕಾರಿನ ಬಾಗಿಲು ತೆರೆದ ರಣವೀರ್ ಸಿಂಗ್, ಪತ್ನಿ ದೀಪಿಕಾಳ ಕೈ ಹಿಡಿದುಕೊಂಡು ಚೆಕ್-ಇನ್ ಗೇಟ್ನತ್ತ ಸುರಕ್ಷಿತವಾಗಿ ಕರೆದುಕೊಂಡು ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ದೀಪಿಕಾ ಕಪ್ಪು ಕಾರ್ಡಿಜನ್ ಮತ್ತು ಬಿಳಿ ಸ್ನೀಕರ್ ಬಾಡಿಕಾನ್ ಡ್ರೆಸ್ ಧರಿಸಿದ್ದರೆ, ರಣವೀರ್ ಕಪ್ಪು ಟಿ-ಶರ್ಟ್ ಮತ್ತು ಮ್ಯಾಚಿಂಗ್ ಪ್ಯಾಂಟ್ ಧರಿಸಿದ್ದರು. ತಾರಾ ಜೋಡಿ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಳ್ಳುತ್ತಿದ್ದಂತೆ ರಣವೀರ್ ಮತ್ತು ದೀಪಿಕಾ ಅವರನ್ನು ಸುತ್ತುವರೆದ ಪಾಪರಾಜಿಗಳು ಪೋಸ್ ನೀಡುವಂತೆ ಕೇಳಿದರು. ಮುಗುಳು ನಡೆಯೊಂದಿಗೆ ದಂಪತಿ ಕೈ ಕೈ ಹಿಡಿದು ಚೆಕ್-ಇನ್ ಗೇಟ್ನತ್ತ ತೆರಳಿದರು.