ಹೈದ್ರಾಬಾದ್: ಮಹಾನಟಿ’ ಚಿತ್ರದ ಮೂಲಕ ಕೀರ್ತಿ ಸುರೇಶ್ ಪ್ಯಾನ್ ಇಂಡಿಯಾ ಅಭಿಮಾನಿಗಳನ್ನು ಸೃಷ್ಟಿಸಿದ್ದಾರೆ. ‘ರಘು ಟಾಟಾ’ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಸುಮನ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿದ್ದ ಕೀರ್ತಿ ಸುರೇಶ್ ತಮ್ಮ ವಿರುದ್ಧ ಬಂದ ಟೀಕೆಗಳ ಬಗ್ಗೆ ಮಾತನಾಡಿದ್ದಾರೆ.
‘ನನ್ನ ಆಯ್ಕೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಸದ್ಯ ನನ್ನ ಕೆಲಸದಿಂದ ಖುಷಿಯಾಗಿದ್ದೇನೆ. ಆದರೆ ನನ್ನ ವೃತ್ತಿಬದುಕಿನ ಆರಂಭದಲ್ಲಿ ನಟಿಸಿದ ಸಿನಿಮಾಗಳು ನಿರಾಶಾದಾಯಕವಾಗಿದ್ದವು. ಅದರಿಂದಾಗಿ ನನಗೆ ತೀವ್ರ ಟ್ರೋಲ್ ಮತ್ತು ಟೀಕೆಗಳು ಬಂದವು. ನಾನು ಬಹುಶಃ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಟ್ರೋಲ್ ಆಗಿರುವ ನಟಿ. ಮಹಾನಟಿ ಚಿತ್ರದ ನಂತರ ನನ್ನ ಮೇಲಿನ ಟ್ರೋಲ್ಗಳು ಕಡಿಮೆಯಾಗಿವೆ. ಕೆಲವರು ಉದ್ದೇಶಪೂರ್ವಕವಾಗಿ ನಕಾರಾತ್ಮಕ ಕಾಮೆಂಟ್ಗಳನ್ನು ಮಾಡುತ್ತಾರೆ. ನಾನು ಅವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ.
ನೀವು ಒಂಟಿಯಾಗಿದ್ದೀರಾ ಮತ್ತು ಬೇಸರಗೊಂಡಿದ್ದೀರಾ? ಎಂದು ಕೇಳಿದಾಗ, ‘ನಾನು ಸಿಂಗಲ್ ಎಂದು ನಾನು ಎಂದಿಗೂ ಹೇಳಲಿಲ್ಲ,’ ಎಂದು ನಗುತ್ತಲೇ ಉತ್ತರಿಸಿದಳು. ಇದೀಗ ಈ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅಂದರೆ ಕೀರ್ತಿ ಸುರೇಶ್ ಸಿಂಗಲ್ ಆಗಿದ್ದಾರಾ? ನೀವು ಯಾರೊಂದಿಗಾದರೂ ಡೇಟಿಂಗ್ ಮಾಡುತ್ತಿದ್ದೀರಾ? ಎಂದು ನೆಟಿಜನ್ಗಳು ಪ್ರಶ್ನಿಸುತ್ತಿದ್ದಾರೆ. ಈ ನಡುವೆ ‘ಬೇಬಿ ಜಾನ್’ ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ ಈ ಚೆಲುವೆ. ಇದರಲ್ಲಿ ವರುಣ್ ಧವನ್ ನಾಯಕನಾಗಿ ನಟಿಸುತ್ತಿದ್ದಾರೆ.