ಚಿತ್ರಹಿಂಸೆಗೆ ಒಳಗಾದವರ ಬೆಂಬಲಕ್ಕಾಗಿ, ಚಿತ್ರಹಿಂಸೆ ಈಗಲೇ ಕೊನೆಗೊಳಿಸಿ

ಚಿತ್ರಹಿಂಸೆ ಎಂದರೆ, ಯಾರನ್ನಾದರೂ ಶಿಕ್ಷಿಸುವ ಮತ್ತು ಅವರನ್ನು ನೋಯಿಸುವ ನೀಚ ಕ್ರಿಯೆಯಾಗಿದೆ. ಮಾನವ ಹಕ್ಕುಗಳ ನ್ಯಾಯಾಲಯದ ಪ್ರಕಾರ, ಚಿತ್ರಹಿಂಸೆಯು ಉದ್ದೇಶಪೂರ್ವಕ ಅಮಾನವೀಯ ಕೃತ್ಯವಾಗಿದ್ದು, ಅದು ಅತ್ಯಂತ ಗಂಭೀರ ಮತ್ತು ಕ್ರೂರ ನೋವನ್ನು ಉಂಟುಮಾಡುತ್ತದೆ. ಯುಎನ್ ಅಂತಹ ಕೃತ್ಯಗಳನ್ನು ಕಟ್ಟುನಿಟ್ಟಾಗಿ ಖಂಡಿಸಿದೆ. ಈ ಕೃತ್ಯಗಳನ್ನು ಮಾನವೀಯತೆಯ ವಿರುದ್ಧದ ಅಪರಾಧವೆಂದು ಪರಿಗಣಿಸಿದೆ.

ಅಂತಾರಾಷ್ಟ್ರೀಯ ಕಾನೂನು ಚಿತ್ರಹಿಂಸೆ ನೀಡುವುದನ್ನು ನಿಷೇಧಿಸುತ್ತದೆ. ಅನೇಕ ದೇಶಗಳು ಇನ್ನೂ ಚಿತ್ರಹಿಂಸೆಯ ವಿಧಾನಗಳನ್ನು ಬಳಸುತ್ತವೆ. ಚಿತ್ರಹಿಂಸೆ ಅತ್ಯಂತ ಸಾಮಾನ್ಯವಾಗಿರುವ ಕೆಲವು ದೇಶಗಳೆಂದರೆ, ಶ್ರೀಲಂಕಾ, ಇರಾನ್, ಅಫ್ಘಾನಿಸ್ತಾನ್, ಎರಿಟ್ರಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಸುಡಾನ್, ಇಥಿಯೋಪಿಯಾ, ಇರಾಕ್, ಟರ್ಕಿ ಮತ್ತು ಸಿರಿಯಾ. ಚಿತ್ರಹಿಂಸೆಯು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ, ಅವರ ಗುರುತನ್ನು ಮತ್ತು ಕುಟುಂಬ ಮತ್ತು ಸಮುದಾಯದೊಂದಿಗೆ ಅವರ ಸಾಮಾಜಿಕ – ಆರ್ಥಿಕ ಸಂಬಂಧಗಳನ್ನು ಗಾಢವಾಗಿ ಹಾನಿಗೊಳಿಸುವ ಗುರಿ ಮತ್ತು ಪರಿಣಾಮವನ್ನು ಹೊಂದಿದೆ.

ಇತಿಹಾಸ: ಡಿಸೆಂಬರ್ 12, 1997 ರಂದು, ನಿರ್ಣಯ 52/149 ಮೂಲಕ, ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ಜೂನ್ 26 ರಂದು ಚಿತ್ರಹಿಂಸೆಯ ಅನುಭವಿಸಿದವರ ಬೆಂಬಲಕ್ಕಾಗಿ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ದಿನವನ್ನು ಘೋಷಿಸಿತು. ಜೂನ್ 26 ಯುಎನ್ ಸದಸ್ಯ ರಾಷ್ಟ್ರಗಳು, ನಾಗರಿಕ ಸಮಾಜ ಮತ್ತು ಎಲ್ಲೆಡೆ ಇರುವ ವ್ಯಕ್ತಿಗಳು ಸೇರಿದಂತೆ ಎಲ್ಲ ಮಧ್ಯಸ್ಥಗಾರರಿಗೆ ಕರೆ ನೀಡಲು ಒಂದು ಅವಕಾಶವಾಗಿದೆ. ಪ್ರಪಂಚದಾದ್ಯಂತ ಸಾವಿರಾರು ಜನರು ಚಿತ್ರಹಿಂಸೆಗೆ ಒಳಗಾದವರು ಮತ್ತು ಇಂದಿಗೂ ಚಿತ್ರಹಿಂಸೆಗೆ ಒಳಗಾಗುವವರ ಬೆಂಬಲಕ್ಕಾಗಿ ಒಗ್ಗಟ್ಟಾಗಲು ಈ ದಿನ ಆಚರಿಸಲಾಗುತ್ತದೆ.

ಯುಎನ್ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಪ್ರಕಾರ, “ಹಿಂಸಿಸುವವರು ತಮ್ಮ ಅಪರಾಧಗಳಿಂದ ತಪ್ಪಿಸಿಕೊಳ್ಳಲು ಎಂದಿಗೂ ಅನುಮತಿಸಬಾರದು ಮತ್ತು ಚಿತ್ರಹಿಂಸೆಯನ್ನು ಸಕ್ರಿಯಗೊಳಿಸುವ ವ್ಯವಸ್ಥೆಗಳನ್ನು ಕಿತ್ತುಹಾಕಬೇಕು ಅಥವಾ ಪರಿವರ್ತಿಸಬೇಕು” ಎಂದು ತಿಳಿಸಿದ್ದಾರೆ.

ಜೂನ್ 26ಕ್ಕೆ ಏಕೆ ಆಚರಿಸಬೇಕು?: ಚಿತ್ರಹಿಂಸೆಗೆ ಒಳಗಾದವರ ಬೆಂಬಲಕ್ಕಾಗಿ ಜೂನ್ 26 ರಂದು ಯುಎನ್ ಅಂತಾರಾಷ್ಟ್ರೀಯ ದಿನವು 1987ರಲ್ಲಿ ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ ಅಥವಾ ಅವಮಾನಕರ ಶಿಕ್ಷೆಯ ವಿರುದ್ಧದ ಚಿತ್ರಹಿಂಸೆ ವಿರುದ್ಧ ಹೋರಾಡುವ ಕುರಿತು ಯುಎನ್ ಕನ್ವೆನ್ಶನ್ ಸೂಚಿಸುತ್ತದೆ.

ಈ ದಿನಾಚರಣೆಯ ಉದ್ದೇಶ: ಚಿತ್ರಹಿಂಸೆಯ ಸಂಪೂರ್ಣ ನಿರ್ಮೂಲನೆ ಮತ್ತು ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ ಅಥವಾ ಅವಮಾನಕರ ಶಿಕ್ಷೆಯ ವಿರುದ್ಧದ ಸಮಾವೇಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ದಿನದ ಗುರಿಯಾಗಿದೆ. ಜೂನ್ 26, 1998 ರಂದು, ವಿಶ್ವಸಂಸ್ಥೆಯು ಎಲ್ಲ ಸರ್ಕಾರಗಳು, ಮಧ್ಯಸ್ಥಗಾರರು ಮತ್ತು ಜಾಗತಿಕ ಸಮಾಜದ ಸದಸ್ಯರು ಜಗತ್ತಿನಾದ್ಯಂತ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರೆ ನೀಡಿದೆ. ಈ ಅಮಾನವೀಯ ಆಚರಣೆಯನ್ನು ಅದರ ಎಲ್ಲಾ ರೂಪಗಳಲ್ಲಿ ನಿರ್ಮೂಲನೆ ಮಾಡುವುದು ಈ ದಿನದ ಪ್ರಾಥಮಿಕ ಗುರಿಯಾಗಿದೆ. ಚಿತ್ರಹಿಂಸೆಯು ಗಂಭೀರವಾದ ಜಾಗತಿಕ ಸಮಸ್ಯೆಯಾಗಿದೆ. ಈ ದಿನವು ಪ್ರಪಂಚದಾದ್ಯಂತ ನಡೆಯುತ್ತಲೇ ಇದೆ ಎಂಬುದಕ್ಕೆ ನಿರ್ಣಾಯಕ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಚಿತ್ರಹಿಂಸೆ ದೈಹಿಕ ಮತ್ತು ಮಾನಸಿಕ ಗಾಯಗಳು ಆಗುತ್ತವೆ. ಈ ದಿನವು ನಡೆಯುತ್ತಿರುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಬದುಕುಳಿದವರಿಗೆ ವೈದ್ಯಕೀಯ ಮಾನಸಿಕ ಬೆಂಬಲ ಮತ್ತು ಸಂತ್ರಸ್ತರಿಗೆ ತಮ್ಮ ಜೀವನವನ್ನು ಪುನರ್ನಿರ್ಮಿಸಲು ಸಹಾಯ ಮಾಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇದುವೇ ಚಿತ್ರಹಿಂಸೆ: ಮಾನಸಿಕ, ದೈಹಿಕ ಚಿತ್ರಹಿಂಸೆ ಅಥವಾ ಎರಡನ್ನೂ ಒಳಗೊಂಡಿರುತ್ತದೆ. ದೈಹಿಕ ಆಕ್ರಮಣಗಳಲ್ಲಿ ಹಲ್ಲೆ ನಡೆಸುವುದು, ದೀರ್ಘಕಾಲ ಬಲವಂತವಾಗಿ ನಿಲ್ಲಿಸುವುದು, ನೇಣು ಹಾಕುವುದು, ಉಸಿರುಗಟ್ಟಿಸುವುದು, ಸುಡುವಿಕೆ, ವಿದ್ಯುತ್ ಆಘಾತ, ಲೈಂಗಿಕ ಆಕ್ರಮಣ ಮತ್ತು ಅತ್ಯಾಚಾರ ಮತ್ತು ತೀವ್ರವಾದ ಶಾಖ ಅಥವಾ ಶೀತಕ್ಕೆ ಒಡ್ಡಿಕೊಳ್ಳುವುದು ಸೇರಿವೆ. ಮಾನಸಿಕ ಹಿಂಸೆಯು ಮೌಖಿಕ ನಿಂದನೆ, ಬೆದರಿಕೆ, ಸುಳ್ಳು ಆರೋಪ, ಬಲವಂತದ ಆಯ್ಕೆ, ವಿರೂಪಗೊಳಿಸುವಿಕೆ ಮತ್ತು ಕೊಲೆಗೆ ಸಾಕ್ಷಿಯಾಗಲು ಬಲವಂತ ಮಾಡುವುದು ಸೇರಿದಂತೆ ಇತರರ ಚಿತ್ರಹಿಂಸೆ ಒಳಗೊಂಡಿತ್ತು.

ಚಿತ್ರಹಿಂಸೆ ಮತ್ತು ಆಘಾತದಿಂದ ಬದುಕುಳಿದವರು ಹೊಂದಿರುವ ಸಮಸ್ಯೆಗಳು:

ಇತರರನ್ನು ನಂಬಲು ಅಸಮರ್ಥತೆ

ನಿಕಟ ಸಂಬಂಧಗಳನ್ನು ರೂಪಿಸಲು ಅಸಮರ್ಥತೆ

ಫೋಬಿಯಾ ಅಥವಾ ಪ್ಯಾನಿಕ್ ಅಟ್ಯಾಕ್‌ಗಳಂತಹ ಆತಂಕದ ಅಸ್ವಸ್ಥತೆಗಳು

ತೀವ್ರ ಖಿನ್ನತೆ, ನಿದ್ರಾಹೀನತೆ, ಮೆಮೊರಿ ನಷ್ಟ, ಆಯಾಸ ಮತ್ತು ನಂತರದ
ಆಘಾತಕಾರಿ ಒತ್ತಡದ ಅಸ್ವಸ್ಥತೆ (PTSD)

ಮನಸ್ಸು ಕೇಂದ್ರೀಕರಿಸುವಲ್ಲಿ ಸಮಸ್ಯೆ

ಆಲ್ಕೋಹಾಲ್ ಅಥವಾ ಮಾದಕ ವ್ಯಸನ ಚಟಗಳಿಗೆ ತುತ್ತಾಗುವುದು
ಬದುಕುಳಿದವರು ತಮ್ಮ ದುಃಸ್ವಪ್ನಗಳು ಅಥವಾ ಫ್ಲ್ಯಾಷ್‌ಬ್ಯಾಕ್‌ಗಳಲ್ಲಿ ಈ ಸಾವಿನ ಸಮೀಪ ಅನುಭವಗಳನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವುದು
ಚಿತ್ರಹಿಂಸೆ ಮತ್ತು ಆಘಾತದಿಂದ ಬದುಕುಳಿದ ಕೆಲವರು ತಮ್ಮ ನೆನಪುಗಳೊಂದಿಗೆ ಹಲವು ವರ್ಷಗಳವರೆಗೆ ಅಥವಾ ಉಳಿದ ಜೀವನದವರೆಗೂ ಬದುಕುತ್ತಾರೆ
ಚಿತ್ರಹಿಂಸೆಯ ದೀರ್ಘಾವಧಿಯ ದೈಹಿಕ ಪರಿಣಾಮಗಳು, ತಲೆನೋವು, ಮಸ್ಕ್ಯುಲೋಸ್ಕೆಲಿಟಲ್ ನೋವು, ಕಾಲು ನೋವು, ಶ್ರವಣದೋಷ, ಹಲ್ಲಿನ ನೋವು, ದೃಷ್ಟಿ ಸಮಸ್ಯೆ, ಹೊಟ್ಟೆ ನೋವು, ಹೃದಯರಕ್ತನಾಳದ/ಉಸಿರಾಟದ ಸಮಸ್ಯೆಗಳು, ಲೈಂಗಿಕ ತೊಂದರೆಗಳು ಮತ್ತು ನರಗಳಿಗೆ ಸಂಬಂಧಿಸಿದ ಹಾನಿ.
ಪುನರ್ವಸತಿ ಮೂಲಕ ಗುಣಪಡಿಸುವುದು: ಚಿಕಿತ್ಸೆ ಇಲ್ಲದೇ, ಹೆಚ್ಚಿನ ಬದುಕುಳಿದವರು ಚಿತ್ರಹಿಂಸೆಗೆ ಮೊದಲು ಅವರು ಹೊಂದಿದ್ದ ದೈಹಿಕ ಮತ್ತು ಮಾನಸಿಕ ಜೀವನವನ್ನು ಚೇತರಿಸಿಕೊಳ್ಳಲು ಸಾಧ್ಯವಿಲ್ಲ. ಚಿತ್ರಹಿಂಸೆಗೆ ಒಳಗಾದವರಿಗೆ ಅವರ ಕುಟುಂಬಗಳಿಗೆ ವಿಶ್ವಸಂಸ್ಥೆ ಸ್ವಯಂಪ್ರೇರಿತ ನಿಧಿ, ಜಿನೀವಾದಲ್ಲಿರುವ UN ಮಾನವ ಹಕ್ಕುಗಳ ಕಚೇರಿಯಿಂದ ಧನಸಹಾಯ ನೀಡುವ ವ್ಯವಸ್ಥೆ ಮಾಡುತ್ತದೆ. ಪ್ರಪಂಚದಾದ್ಯಂತದ ಪುನರ್ವಸತಿ ಕೇಂದ್ರಗಳು ಮತ್ತು ಸಂಸ್ಥೆಗಳ ಮೂಲಕ ಚಿತ್ರಹಿಂಸೆಯ ಸಂತ್ರಸ್ತರಿಗೆ ಚಿಕಿತ್ಸೆ ನೀಡಿ ಪರಿವರ್ತನೆ ಮಾಡಲಾಗುತ್ತಿದೆ.

ಭಾರತದಲ್ಲಿ ಚಿತ್ರಹಿಂಸೆ ಪ್ರಕರಣಗಳಿಗಿರುವ ಶಿಕ್ಷೆ: ಭಾರತವು ಚಿತ್ರಹಿಂಸೆ ಮತ್ತು ಇತರ ಕ್ರೂರ, ಅಮಾನವೀಯ ಅಥವಾ ಅವಮಾನಕರ ಶಿಕ್ಷೆಯ ವಿರುದ್ಧದ ಸಮಾವೇಶವನ್ನು ಆಯೋಜಿಸಿಲ್ಲ. ಆದರೆ, ಅಕ್ಟೋಬರ್ 14, 1997 ರಂದು ಸಮಾವೇಶಕ್ಕೆ ಸಹಿ ಹಾಕಿದೆ. ಚಿತ್ರಹಿಂಸೆಯನ್ನು ಕಾನೂನಿನಲ್ಲಿ ಪ್ರತ್ಯೇಕ ಅಥವಾ ವಿಶೇಷ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಭಾರತೀಯ ದಂಡ ಸಂಹಿತೆ, 1860 (ವಿಭಾಗಗಳು 330 ಮತ್ತು 348) ನಲ್ಲಿನ ನಿಬಂಧನೆಗಳ ಪ್ರಕಾರ ಅಪರಾಧಿ ಎಂದು ಸಾಬೀತಾದರೆ ಕ್ರಮವಾಗಿ, ಏಳು ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಯೊಂದಿಗೆ ಚಿತ್ರಹಿಂಸೆ ಎಂದು ಪರಿಗಣಿಸಬಹುದಾದ ಕೃತ್ಯಗಳಿಗೆ ದಂಡ ವಿಧಿಸುತ್ತದೆ. ಆದ್ರೆ, ಈ ಅಪರಾಧವು ಪೊಲೀಸ್ ಅಧಿಕಾರಿಯಿಂದ ಮಾಡಲ್ಪಟ್ಟಿದ್ದರೆ, ಈ ಬಗ್ಗೆ ಕಾನೂನಿನಲ್ಲಿ ಉಲ್ಲೇಖಿಸಿಲ್ಲ

Leave a Reply

Your email address will not be published. Required fields are marked *