ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಮಂಗಳವಾರ) ಮಂಡಿಸಿದ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರ ಆಕಾಂಕ್ಷೆಗಳು ಹಾಗೂ ಭಾರತದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡಿರುವುದು ಕಂಡುಬಂದಿದೆ.
”ವೀಕ್ಷಿತ್ ಭಾರತ್ಕ್ಕಾಗಿ 9 ಆದ್ಯತೆಗಳ ಮೇಲೆ ಕೇಂದ್ರ ಸರ್ಕಾರವು ನಿರಂತರ ಪ್ರಯತ್ನಗಳನ್ನು ಮಾಡುತ್ತದೆ. ಕೃಷಿ, ಸಾಮಾಜಿಕ ನ್ಯಾಯ, ಉದ್ಯೋಗ, ಕೌಶಲ್ಯ, ಸುಧಾರಿತ ಮಾನವ ಸಂಪನ್ಮೂಲಗಳು, ಉತ್ಪಾದನೆ ಹಾಗೂ ಸೇವೆಗಳು, ನಗರಾಭಿವೃದ್ಧಿ, ಇಂಧನ ಭದ್ರತೆ, ಮೂಲಸೌಕರ್ಯ, ನಾವೀನ್ಯತೆಗಳಲ್ಲಿ ಉತ್ಪಾದಕತೆ ಮತ್ತು ಸ್ಥಿತಿಸ್ಥಾಪಕತ್ವ ಪಟ್ಟಿ ಮಾಡುವ ‘ವೀಕ್ಷಿತ್ ಭಾರತ್’ಗಾಗಿ 9 ಆದ್ಯತೆಗಳ ಮೇಲೆ ಸರ್ಕಾರವು ಸತತ ಪ್ರಯತ್ನಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದೇ 9 ಆದ್ಯತೆಗಳ ಆಧಾರದ ಮೇಲೆ ಪ್ರಸಕ್ತ ಸಾಲಿನ ಬಜೆಟ್ ಸಿದ್ಧಪಡಿಸಲಾಗಿದೆ” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ನಿರ್ಮಲಾ ಸೀತಾರಾಮನ್ ಬಜೆಟ್- ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?
- ರಕ್ಷಣಾ ಕ್ಷೇತ್ರ- 4,54,773 (ಕೋಟಿ ರೂಪಾಯಿಗಳಲ್ಲಿ)
- ಗ್ರಾಮೀಣಾಭಿವೃದ್ಧಿ- 2,65,808
- ಕೃಷಿ ಮತ್ತು ಅದಕ್ಕೆ ಸಂಬಂಧಿಸಿದಂತೆ- 1,51,851
- ಗೃಹ ಇಲಾಖೆ- 1,51,983
- ಶಿಕ್ಷಣ – 1,25,638
- ಐಟಿ ಮತ್ತು ಟಿಲಿಕಾಂ – 1,16,342
- ಆರೋಗ್ಯ ಕ್ಷೇತ್ರ- 89,287
- ಪವರ್ ಸೆಕ್ಟರ್- 68,769
- ಸಾಮಾಜ ಕಲ್ಯಾಣ ಇಲಾಖೆ- 56,501
- ವಾಣಿಜ್ಯ ಮತ್ತು ಕೈಗಾರಿಕೆ- 47,559
- ನರೇಗಾ- 86,000
- ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳು- 1,200
- ನ್ಯೂಕ್ಲೀಯರ್ ಪವರ್ ಪ್ರಾಜೆಕ್ಟ್- 2228
- ಫಾರ್ಮಾಸಿಟಿಮಲ್ ಇಂಡಸ್ಟ್ರಿ- 2,143
- ಸೆಮಿಕಂಡಕ್ಟರ್ ಕ್ಷೇತ್ರ- 6,903
- ಸೋಲಾರ್ ಪವರ್- 10,000
- ಎಲ್ಪಿಜಿ (ಫಲಾನುಭವಿಗಳಿಗೆ ನೇರ ಲಾಭ)- 15,000
- ಐಡಿಇಎ ಯೋಜನೆ- 3,849