ಕೆಸರು ತಾಗಿದ್ದಕ್ಕೆ ಅವಮಾನ : ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ 

ಕೆಸರು ತಾಗಿದ್ದಕ್ಕೆ ಅವಮಾನ : ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ

ಮಧ್ಯಪ್ರದೇಶ : ಬೈಕ್ ನಲ್ಲಿ ಹೋಗುವಾಗ ಕೆಸರು ತಾಗಿದ್ದಕ್ಕೆ ಅವಮಾನ ಮಾಡಿದ್ದ ವಿದ್ಯಾರ್ಥಿನಿ ಮೇಲೆ ಅವಮಾನಕ್ಕೊಳಗಾದ ವ್ಯಕ್ತಿ ಹಾಗೂ ಅವನ ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ಸೆ.22 ಭಾನುವಾರದಂದು ಕಾಲೇಜು ವಿದ್ಯಾರ್ಥಿನಿ ಮೊಬೈಲ್ ಅನ್ನು ಅಂಗಡಿಗೆ ರಿಪೇರಿಗೆ ಕೊಡಲೆಂದು ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ. ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ.

ಬೈಕ್ನಲ್ಲಿ ಹೋಗುವಾಗ ಕೆಸರು ತಾಗಿದ್ದಕ್ಕೆ ಅವಮಾನ ಮಾಡಿದ್ದ ವಿದ್ಯಾರ್ಥಿನಿಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಮದ ವ್ಯಕ್ತಿ ಹಾಗೂ ಅವನ ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆಗೆ ಸಂಭಂದಿಸಿದ ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆಯಲ್ಲಿ ಪ್ರಮುಖ ಆರೋಪಿ ಕಿಶನ್ ಕೋಲ್, ತನ್ನ ಬೈಕ್ ನಲ್ಲಿ ಸಾಕಷ್ಟು ಕೆಸರು ಇರುವ ರಸ್ತೆಯಲ್ಲಿ ಹೋಗುತ್ತಿದ್ದೆವು, ರಸ್ತೆಬದಿಯಲ್ಲಿ ಹೋಗುತ್ತಿದ್ದ ವಿದ್ಯಾರ್ಥಿನಿಗೆ ಕೆಸರು ತಾಗಿತ್ತು. ಅಷ್ಟೆಲ್ಲಾ ಜನರ ಎದುರು ತನಗೆ ಅವಮಾನ ಮಾಡಿದ್ದಳು ಇದರಿಂದ ತನಗೆ ಮುಜುಗರ ಉಂಟಾಯಿತು ಎಂದು ಆರೋಪಿ ತಿಳಿಸಿದ್ದಾನೆ.

ಅವಮಾನದಿಂದ ಕೋಪಗೊಂಡ ಆರೋಪಿಗಳು ಸಂತ್ರಸ್ತೆಗೆ ತಕ್ಕ ಪಾಠ ಕಲಿಸಲು ನಿರ್ಧರಿಸಿ ಭಾನುವಾರದಂದು ಕಿಶನ್ ಕೋಲ್ ಮತ್ತು ಆತನ ಸ್ನೇಹಿತ ಸಂತಲಾಲ್ ಆಕೆಯನ್ನು ಅಪಹರಿಸಿ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *