ದುಬೈ : ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಘಟ್ಟ ಇನ್ನು ಇತ್ತೀಚಿನ ದಿನಗಳಲ್ಲಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಕೋರ್ಟ್ ಮೆಟ್ಟಿಲು ಹತ್ತುವುದು ಇತ್ತೀಚಿಗೆ ಸರ್ವೇಸಾಮಾನ್ಯವಾಗಿದೆ ಬಹುತೇಕ ದಂಪತಿಗಳು ತಮ್ಮ ಅನೇಕ ಸಮಸ್ಯೆಯಿಂದ ಅನೇಕ ಕಾರಣಗಳಿಂದ ಬೇರೆ ಬೇರೆ ಆಗುತ್ತಿದ್ದಾರೆ. ಇನ್ನು ಕೆಲವು ನವದಂಪತಿಗಳು ತುಂಬಾ ಸಾಮರಸ್ಯದಿಂದ ಬದುಕುತ್ತಾರೆ. ಹೆಂಡತಿಯ ಸುಖಕಾಗಿ ಗಂಡ ಏನು ಬೇಕಾದರೂ ಮಾಡಲು ತಯಾರಿರುತ್ತಾರೆ ಅದೇ ರೀತಿಯ ಒಂದು ಘಟನೆ ಇಲ್ಲಿ ನಡೆದಿದೆ ಇನ್ನೊಬ್ಬ ಪತಿರಾಯ ತನ್ನ ಪತ್ನಿಗಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡಿ ಇಡೀ ದ್ವೀಪವನ್ನು ಖರೀದಿಸಿದ್ದಾನೆ. ಅಷ್ಟಕ್ಕೂ ದ್ವೀಪದ ಖರೀದಿಗೆ ಕಾರಣವೇನು ಗೊತ್ತಾ ತನ್ನ ಹೆಂಡತಿ ಬಿಕಿನಿ ಧರಿಸಿ ಮುಜುಗರಕ್ಕೆ ಈಡಾಗಬಾರದು ಎಂಬ ಉದ್ದೇಶದಿಂದ ಈ ಪತಿರಾಯ ಇಡೀ ದ್ವೀಪವನ್ನು ಖರೀದಿಸಿದ್ದಾನೆ. ದುಬೈ ಮೂಲದ ಖ್ಯಾತ ಉದ್ಯಮಿ ಜಮಾಲ್ ಅಲ್ ನಡಾಕ್ ಅವರು ತಮ್ಮ ಪತ್ನಿ ಸೌದಿ ಅಲ್ ನಡಾಕ್ ಗಾಗಿ ಹಿಂದೂ ಮಹಾಸಾಗರದಲ್ಲಿ ದ್ವೀಪವನ್ನು ಖರೀದಿಸಿದ್ದಾರೆ. ಇದರ ಬೆಲೆ 50 ಮಿಲಿಯನ್ ಡಾಲರ್ ಭಾರತೀಯ ಕರೆನ್ಸಿ ಪ್ರಕಾರ 418 ಕೋಟಿ ರೂಪಾಯಿ ಪಾವತಿಸಿದ್ದಾರೆ.
ಪತ್ನಿಗಾಗಿ ದ್ವೀಪವನ್ನೇ ಖರೀದಿಸಿದ ಪತಿ?




