ನೀಲಿ ಬಣ್ಣ ವಿಶ್ವಮಧುಮೇಹ ದಿನದ ಸಂಕೇತ:  ನ. 14 ವಿಶ್ವಮಧುಮೇಹ ದಿನಾಚರಣೆ

ನೀಲಿ ಬಣ್ಣ ವಿಶ್ವಮಧುಮೇಹ ದಿನದ ಸಂಕೇತ: ನ. 14 ವಿಶ್ವಮಧುಮೇಹ ದಿನಾಚರಣೆ

ತುಮಕೂರು: ಡಯಾಬಿಟಿಸ್ ಅಂಡ್ ವೆಲ್ ಬೀಯಿಂಗ್ ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ನವೆಂಬರ್ 14 ರಂದು ವಿಶ್ವಮಧುಮೇಹ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ.

ಸಕ್ಕರೆ ಕಾಯಿಲೆ, ಡಯಾಬಿಟೀಸ್, ಶುಗರ್ ಎಂದು ನಾನಾ ವಿಧದಲ್ಲಿ ಕರೆಸಿಕೊಳ್ಳುವ ಮಧುಮೇಹದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಾದ್ಯಂತ ವಿಶ್ವ ಮಧುಮೇಹ ದಿನಾಚರಣೆಯನ್ನು ಆಚರಣೆ ಮಾಡಿಕೊಂಡು ಬರಲಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ವಿಶ್ವಮಧುಮೇಹ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಹಾಗೂ ಅಂತಾರಾಷ್ಟ್ರೀಯ ಮಧುಮೇಹ ಒಕ್ಕೂಟದ ಸಹಯೋಗದಲ್ಲಿ 1991ರಲ್ಲಿ ಮೊದಲ ಬಾರಿಗೆ ವಿಶ್ವ ಮಧುಮೇಹ ದಿನವನ್ನು ಪರಿಚಯಿಸಲಾಯಿತು. ವಿಜ್ಞಾನಿ ಸರ್ ಫೆಡ್ರಿಕ್ ಬೆಂಟಿOಗ್ ಅವರು ಪ್ರಥಮ ಬಾರಿಗೆ ಮಧುಮೇಹಕ್ಕೆ ನೀಡುವ ‘ಇನ್ಸುಲಿನ್’ ಸಂಶೋಸಿದರು. ಬೆಂಟಿOಗ್ ಅವರು ಜನಿಸಿದ ದಿನ ನವೆಂಬರ್ 14. ಅವರ ಸವಿ ನೆನಪಿಗಾಗಿ ನವೆಂಬರ್ 14 ಅನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಣೆ ಮಾಡಿಕೊಂಡ ಬರಲಾಗುತ್ತಿದೆ.

ಪ್ರತಿ ವರ್ಷ ವಿಶ್ವ ಮಧುಮೇಹ ದಿನವನ್ನು ಒಂದು ಧ್ಯೇಯವಾಕ್ಯದೊಂದಿಗೆ ಆಚರಣೆ ಮಾಡಿಕೊಂಡು ಬರಲಾಗಿದೆ. 2009 ಮತ್ತು 2013ರವರೆಗೆ ಶಿಕ್ಷಣ, ಮಾನವ ಹಕ್ಕು, ಜೀವನ ಶೈಲಿ, ಬೊಜ್ಜು, ಮಕ್ಕಳು/ಯುವಕರು ಎಂಬ ಧ್ಯೇಯದ ಜತೆ ಮಧುಮೇಹ ದಿನಾಚರಣೆ ಆಚರಿಸಲಾಗುತ್ತಿತ್ತು. ‘ಮಹಿಳೆ ಮತ್ತು ಮಕ್ಕಳ ಸಕ್ಕರೆ ಕಾಯಿಲೆ ಆರೋಗ್ಯಪೂರ್ಣ ಭವಿಷ್ಯಕ್ಕೆ ನಮ್ಮ ಹಕ್ಕು ‘ ಎಂಬುದು ಈ ವರ್ಷದ 2017 ನೇ ವರ್ಷದ ಮಧುಮೇಹ ದಿನದ ಧ್ಯೇಯವಾಗಿದೆ. ಈ ವರ್ಷ  ಡಯಾಬಿಟಿಸ್ ಅಂಡ್ ವೆಲ್ ಬೀಯಿಂಗ್ ಎಂಬ ಘೋಷವಾಕ್ಯದೊಂದಿಗೆ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ನೀಲಿ ಬಣ್ಣ ವಿಶ್ವಮಧುಮೇಹ ದಿನದ ಸಂಕೇತವಾಗಿದೆ.

ಗ್ಲೂಕೋಸ್ ಪದಾರ್ಥದ ನಿಯಂತ್ರಣದಲ್ಲಿ ಉಂಟಾಗುವ ದೋಷದಿಂದ ಬರುವ ಒಂದು ಕಾಯಿಲೆ ಮಧುಮೇಹ. ಇದು ವಂಶಪಾರ್ಯOಪರ್ಯದಿOದ ಬರಬಹುದಾದ ಕಾಯಿಲೆಯೂ ಹೌದು ಮಧುಮೇಹ. ಗ್ಲೂಕೋಸ್ ಒಂದು ರೀತಿಯ ಸಕ್ಕರೆಯಾಗಿದ್ದು, ಇದನ್ನು ಪ್ರಮುಖವಾಗಿ ಪ್ಯಾಂಕ್ರಿಯಾಸ್ ಅಂಗವು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ಹಾರ್ಮೋನ್ ನಿಯಂತ್ರಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು ಮಧುಮೇಹ ಒಂದು ಮಹಾಮಾರಿ ಎಂದು ಘೋಷಿಸಿದೆ. ಈ ಕಾಯಿಲೆಯ ಪ್ರಮುಖ ಲಕ್ಷಣಗಳೆಂದರೆ. ಪದೇ ಪದೇ ಮೂತ್ರವಿಸರ್ಜಿಸುವುದು, ತೀವ್ರವಾಗಿ ಬಾಯಾರಿಕೆ ಹಾಗೂ ಹಸಿವಾಗುವುದು, ತೂಕ ಹೆಚ್ಚುವದು ಅಥವಾ ಅಸಾಮಾನ್ಯ ತೂಕ ಇಳಿಕೆ, ಆಯಾಸ, ಪುರುಷರಲ್ಲಿ ಲೈಂಗಿಕ ದೌರ್ಬಲ್ಯತೆ ಮುಂತಾದವುಗಳು. ಸದ್ಯಕ್ಕೆ ಇದನ್ನು ಪೂರ್ಣ ಪ್ರಮಾಣದಲ್ಲಿ ನಿವಾರಿಸಲು ಸಾಧ್ಯವಾಗಿಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ಏರಿಳಿತದ ಮೇಲೆ ಈ ಕಾಯಿಲೆ ನಿರ್ಧರಿತವಾಗುತ್ತದೆ. ದಿನನಿತ್ಯ ಸುಮಾರು ಇಪ್ಪತ್ತು ನಿಮಿಷದ ವ್ಯಾಯಾಮ ಅಥವಾ ನಡಿಗೆಯಿಂದ ಮಧುಮೇಹವನ್ನು ದೂರವಿಡಬಹುದೆಂದು ವೈದ್ಯರು ಹೇಳುತ್ತಾರೆ.

ರಕ್ತದಲ್ಲಿ ಗ್ಲುಕೋಸ್ ಅಥವಾ ಸಕ್ಕರೆ ಅಂಶವು ಹೆಚ್ಚಾಗುವುದೇ ಸಕ್ಕರೆ ಕಾಯಿಲೆ. ವ್ಯಕ್ತಿಯ ದೇಹದಲ್ಲಿ ಮೆದೋಜೀರಕ ಗ್ರಂಥಿ ಇನ್ಸುಲಿನ್ ಅನ್ನೋ ಹಾರ್ಮೋನ್ನನ್ನು ಉತ್ಪಾದಿಸುತ್ತದೆ. ಇದು ಆಹಾರ ಸೇವನೆಯ ನಂತರ ಅಂಗಾOಶಗಳಲ್ಲಿ ಶೇಖರಣೆಗೊಂಡ ಸಕ್ಕರೆ ಅಂಶವನ್ನು ಸಮತೋಲನದಲ್ಲಿರಿಸಿ

ದೇಹದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಇನ್ಸುಲಿನ್ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗದಿರುವಾಗ ಅಥವಾ ದೇಹವು ಇನ್ಸುಲಿನ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿರುವಾಗ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಕಾಯಿಲೆ ಶುರುವಾಗುತ್ತದೆ.

ಸಕ್ಕರೆ ಕಾಯಿಲೆಯಲ್ಲಿ ಎರಡು ವಿಧಗಳಿವೆ. ಇನ್ಸುಲಿನ್ ಅವಲಂಭಿತ ಡಯಾಬಿಟೀಸ್. ಮೆದೊಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದಿಸಲು ವಿಫಲವಾದಾಗ ದೇಹದಲ್ಲಿ ಸಕ್ಕರೆ ಅಂಶವು ಜಾಸ್ತಿಯಾಗುತ್ತದೆ. ಇದು ಹೆಚ್ಚಾಗಿ ಸಣ್ಣ ವಯಸ್ಸಿನವರಿಗೆ ಮತ್ತು ಹದಿಹರೆಯದವರಲ್ಲಿ ಕಂಡುಬರುತ್ತದೆ. ಕೆಲವೊಂದು ಬಾರಿ 30 ವರ್ಷ ದಾಟಿದವರಲ್ಲಿಯೂ ಕಾಣಿಸುತ್ತದೆ. ಎರಡನೆಯದು ದೇಹವು ಇನ್ಸುಲಿನ್ಗೆ ಸರಿಯಾಗಿ ಪ್ರತಿಕ್ರಿಯೆ ನೀಡದೆ ಇರುವಾಗ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಇದು ಸಾಮಾನ್ಯವಾಗಿ 45ವರ್ಷ ಮೇಲ್ಪಟ್ಟವರಲ್ಲಿ ಕಾಣಿಸುತ್ತದೆ. ಕೆಲವೊಂದು ಬಾರಿ ಮಕ್ಕಳಲ್ಲಿ, ಸ್ಥೂಲಕಾಯ,ಕಡಿಮೆ ದೈಹಿಕ ಸಕ್ರಿಯತೆ ಇರುವವರಲ್ಲಿ ಕಂಡುಬರುತ್ತದೆ.

ಈಗ ಎಲ್ಲಾ ಕಡೆ ಕಲಬೆರಕೆ ಆಹಾರ, ಅನಾರೋಗ್ಯಕರ ಆಹಾರ ಸೇವನೆ ರೂಢಿಯಾಗಿದೆ. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆಗೊಳಿಸಿ ನಿಧಾನವಾಗಿ ಜೀರ್ಣವಾಗುವ ಆಹಾರವನ್ನು ತೆಗೆದುಕೊಳ್ಳುವುದು, ನಿಯಮಿತವಾಗಿ ತಿನ್ನುವುದು, ಕೊಬ್ಬು, ಸಿಹಿ ಪದಾರ್ಥಗಳನ್ನು ತ್ಯಜಿಸುವುದು, ಸಿಹಿಯಾದ ಮಾವು, ಹಲಸು ಇಂತಹ ಕ್ಯಾಲೋರಿ ಇರುವ ಹಣ್ಣುಗಳನ್ನು ಒಂದು ಹೊತ್ತಿನ ಊಟವನ್ನಾದರೂ ತ್ಯಜಿಸಿ ತಿನ್ನಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ನಂತರ ಮುಂಚಿನ ದಿನ ನೀರಿನಲ್ಲಿ ನೆನೆ ಹಾಕಿದ್ದ ಮೆಂತ್ಯೆಯನ್ನು ಕುಡಿಯಬೇಕು. ಬೆಂಡೆಕಾಯಿಯನ್ನು ತುಂಡರಿಸಿ ನೀರಲ್ಲಿ ಹಾಕಿ ಅದನ್ನು ಕುಡಿಯುವುದು ಅಥವಾ ಅಗಸೆ ಬೀಜವನ್ನು ತಿನ್ನಬೇಕು. ಬೆಳಗ್ಗಿನ ಉಪಹಾರಕ್ಕೆ ಗೋಧಿ, ರಾಗಿ, ನವಣೆಯಂತಹ ನವಧಾನ್ಯಗಳಿಂದ ಮಾಡಿರುವ ತಿಂಡಿಗಳನ್ನು ತಿನ್ನಬೇಕು. ಮದ್ಯಾಹ್ನಕ್ಕೆ ಸಣ್ಣ ಪ್ರಮಾಣದಲ್ಲಿ ಅನ್ನ ಮತ್ತು ಹೆಚ್ಚಾಗಿ ತರಕಾರಿಗಳನ್ನು ಹೊಟ್ಟೆ ತುಂಬುವಷ್ಟು ತಿನ್ನಬೇಕು. ಜೊತೆಗೆ ಹಣ್ಣುಗಳು, ಸೊಪ್ಪಿನ ಪಲ್ಯಗಳನ್ನೂ ಸಹ ಸೇವಿಸಬೇಕು. ರಾತ್ರಿ ಊಟಕ್ಕೆ ಸಲಾಡ್, ಮಜ್ಜಿಗೆ ಅಥವಾ ಚಪಾತಿ, ತರಕಾರಿ ಪಲ್ಯ, ಹೀಗೆ ಆಹಾರ ಸೇವಿಸಬೇಕು. ಮುಖ್ಯವಾಗಿ ಆಹಾರ ಪದ್ಧತಿಯಿಂದಲೇ ಸಕ್ಕರೆಕಾಯಿಲೆಯನ್ನು ಹತೋಟಿಯಲ್ಲಿಡಬಹುದು. ಇವಿಷ್ಟಲ್ಲದೆ ಸೂಜಿಚಿಕಿತ್ಸೆ ಮತ್ತು ನೀರಿನ ಕೆಲವೊಂದು ಚಿಕಿತ್ಸೆಯು ಮಧುಮೇಹವನ್ನು ಹತೋಟಿಯಲ್ಲಿಡಲು ಪರಿಣಾಮಕಾರಿ. ಈ ಎಲ್ಲಾ ಅಭ್ಯಾಸಗಳಿಂದ ಸಕ್ಕರೆಕಾಯಿಲೆಯನ್ನು ಹತೋಟಿಯಲ್ಲಿಟ್ಟುಕೊಂಡು ಅಡ್ಡಪರಿಣಾಮದಿಂದ ಕಾಪಾಡಿಕೊಳ್ಳಬಹುದು. ಪ್ರಕೃತಿ ಚಿಕಿತ್ಸೆಯಲ್ಲಿ ಎಲ್ಲಾ ವಿಧಧ ಕಾಯಿಲೆಗಳನ್ನು ಹತೋಟಿಯಲ್ಲಿಡಲು ಮತ್ತು ಹೆಚ್ಚಾಗದಂತೆ ನಿಯಂತ್ರಣದಲ್ಲಿರಿಸಲು ಅನೇಕ ಚಿಕಿತ್ಸೆಗಳಿವೆ.

Leave a Reply

Your email address will not be published. Required fields are marked *