ಐಷಾರಾಮಿ ಕಾರಿಗೆ ಕ್ಯಾಮರಾಮ್ಯಾನ್ ಬಲಿ; 100 ಮೀ ದೂರದಲ್ಲಿ ಪತ್ತೆಯಾಯಿತು ಮೃತದೇಹ

ಚೆನ್ನೈ: ಐಷಾರಾಮಿ ಕಾರೊಂದು ಬೈಕಿಗೆ ಹೊಡೆದ ಪರಿಣಾಮ ಸುದ್ದಿ ವಾಹಿನಿಯೊಂದರ ಕ್ಯಾಮರಾಮ್ಯಾನ್ ಮೃತಪಟ್ಟಿರುವ ಘಟನೆ ಚೆನ್ನೈನಲ್ಲಿ ಮಂಗಳವಾರ (ನ.19ರಂದು) ರಾತ್ರಿ ನಡೆದಿದೆ.

ಪಾಂಡಿ ಬಜಾರ್ನ ಪ್ರದೀಪ್ ಕುಮಾರ್ ಮೃತ ಕ್ಯಾಮರಾಮ್ಯಾನ್. ಇವರು ತೆಲುಗಿನ ಜನಪ್ರಿಯ ಸುದ್ದಿ ವಾಹಿನಿಯೊಂದರಲ್ಲಿ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡುವುದರ ಜತೆ ಪಾರ್ಟ್ ಟೈಮ್ ರ್ಯಾಪಿಡೋ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಮಧುರವಾಯಲ್-ತಾಂಬರಂ ಎಲಿವೇಟೆಡ್ ಬೈಪಾಸ್ನಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಪ್ರದೀಪ್ ತೆರಳುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಐಷಾರಾಮಿ ಬಿಎಂಡಬ್ಲ್ಯು ಕಾರು ಪ್ರದೀಪ್ ಬೈಕ್ಗೆ ಢಿಕ್ಕಿ ಹೊಡೆದಿದೆ. ಕೂಡಲೇ ಪ್ರದೀಪ್ ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಪರಿಣಾಮ ಕಾರಿನಡಿಯಲ್ಲಿ ಪ್ರದೀಪ್ ದೇಹ ಸಿಲುಕಿಕೊಂಡಿದೆ. ಅಪಘಾತದ ಸ್ಥಳದಿಂದ 100 ಮೀಟರ್ ದೂರದವರೆಗೂ ಪ್ರದೀಪ್ ಅವರನ್ನು ಕಾರು ಎಳೆದುಕೊಂಡು ಹೋಗಿದೆ.

ಅಪಘಾತವಾದ ದ್ವಿಚಕ್ರ ವಾಹನವನ್ನು ಗಮನಿಸಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದ ಬಳಿಕ ಅಪಘಾತವಾದ 100 ಮೀಟರ್ ದೂರದಲ್ಲಿ ಪ್ರದೀಪ್ ಮೃತದೇಹ ಬಿದ್ದಿರುವುದನ್ನು ಪತ್ತೆ ಮಾಡಿದ್ದಾರೆ.

ಸದ್ಯ ಅಪಘಾತದ ಮಾಡಿ ಚಾಲಕ ಪರಾರಿ ಆಗಿದ್ದು, ಪೊಲೀಸರು ಪತ್ತೆ ಕಾರ್ಯ ಮುಂದುವರೆಸಿದ್ದಾರೆ.

Leave a Reply

Your email address will not be published. Required fields are marked *