ದಿಸ್ಪುರ್‌ || ಅಕ್ರಮವಾಗಿ Adult movie ಶೂಟಿಂಗ್‌ – ಬಾಂಗ್ಲಾ ಮಹಿಳೆ ಸೇರಿ ಮೂವರು ಅರೆಸ್ಟ್‌

ದಿಸ್ಪುರ್‌: ಅಸ್ಸಾಂನ (Assam) ಗುವಾಹಟಿಯ ಹೋಟೆಲ್‌ ಒಂದರಲ್ಲಿ ಸೆಕ್ಸ್‌ ಮೂವಿ ಶೂಟಿಂಗ್‌ ಮಾಡುತ್ತಿದ್ದ ಆರೋಪದ ಮೇಲೆ ಬಾಂಗ್ಲಾದೇಶಿ (Bangladesh) ಮಹಿಳೆ ಸೇರಿದಂತೆ ಮೂವರನ್ನು ದಿಸ್ಪುರ್ (Dispur) ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಸ್ಸಾಂ ಮೂಲದ ಶಫಿಕುಲ್, ಜಹಾಂಗೀರ್ ಮತ್ತು ಬಾಂಗ್ಲಾದೇಶದ ನಿವಾಸಿ ಮೀನ್ ಅಖ್ತರ್ (22) ಎಂದು ಗುರುತಿಸಲಾಗಿದೆ. ಆರೋಪಿಗಳು ಗುವಾಹಟಿಯ ಸೂಪರ್ ಮಾರ್ಕೆಟ್ ಪ್ರದೇಶದ ಹೋಟೆಲ್‌ ಒಂದರಲ್ಲಿ ಕೊಠಡಿಗಳನ್ನು ಬುಕ್ ಮಾಡಿದ್ದರು. ಅಲ್ಲಿ ಅವರು ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಲು ಯೋಜಿಸಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿ ದಾಳಿ ನಡೆಸಿದ್ದರು.

ಮೀನ್ ಅಖ್ತರ್ ಬಾಂಗ್ಲಾದೇಶ ಗಡಿಗೆ ಏಕಾಂಗಿಯಾಗಿ ಪ್ರಯಾಣಿಸಿ ಉದ್ಯೋಗದ ಸುಳ್ಳು ನೆಪದಲ್ಲಿ ಭಾರತವನ್ನು ಪ್ರವೇಶಿಸಿದ್ದಾಳೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆಕೆ ವೀಸಾ ಅಥವಾ ಪಾಸ್‌ಪೋರ್ಟ್ ಇಲ್ಲದೇ ಅಸ್ಸಾಂಗೆ ಪ್ರವೇಶಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಇದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಜಾಲಗಳ ಸಂಪರ್ಕದ ಬಗ್ಗೆ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *