18 ವರ್ಷ ಬೆಂಗಳೂರಿನಲ್ಲಿದ್ದು ಒಂದಕ್ಷರವೂ ಕನ್ನಡ ಕಲಿಯಲಿಲ್ಲ, Kannadigas ಪಕ್ಷಪಾತಿಗಳು ಎಂದಳು! ಪೋಸ್ಟ್ ವೈರಲ್..

'ಕನ್ನಡ್ ಗೊತ್ತಿಲ್ಲ' ಅನ್ನುವವರಿಗೆ ಮಾದರಿಯಾದ ಈ Tibetan ವ್ಯಕ್ತಿ:

ಬೆಂಗಳೂರು: ಬೆಂಗಳೂರಿನಲ್ಲಿ 18 ವರ್ಷಗಳ ಕಾಲ ಇದ್ದರೂ ನನ್ನ ಗೆಳತಿ ಕನ್ನಡ ಕಲಿಯಲಿಲ್ಲ. ನಾನು ಅವಳಿಗೆ ಕನ್ನಡ ಕಲಿಸುವ ಪ್ರಯತ್ನಗಳನ್ನು ಕೈಗೂಡಲಿಲ್ಲ. ಈಗ ಆಕೆ ಕನ್ನಡಿಗರು ಪಕ್ಷಪಾತಿಗಳು ಎನ್ನುತ್ತಿದ್ದಾಳೆ ಎನ್ನುವ ಕನ್ನಡಿಗ ಪ್ರಜ್ವಲ್ ಭಟ್ ಎನ್ನುವವರ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕದಲ್ಲಿ ವರ್ಷಗಳ ಕಾಲ ನೆಲೆಸಿ, ಇಲ್ಲಿನ ಎಲ್ಲಾ ಸೌಕರ್ಯಗಳನ್ನು ಬಳಸಿಕೊಂಡ ಮೇಲೆಯೂ ಕನ್ನಡ ಕಲಿಯಲಿಲ್ಲ. ಮೇಲಾಗಿ ಕನ್ನಡಿಗರ ಬಗ್ಗೆಯೇ ಕೀಳಾಗಿ ಕಾಣುವ ಜನರಿದ್ದಾರೆ ಎನ್ನುವುದು ಕನ್ನಡಿಗರನ್ನು ಕೆಂಡಾಮಂಡಲವಾಗಿಸಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆ ಶುರುವಾಗಿಸಿದೆ. ಕನ್ನಡಿಗರನ್ನು ಹೇಗೆ ಕಾಣಲಾಗುತ್ತಿದೆ ನಮ್ಮ ವಿಶಾಲತೆಯನ್ನು ಎಷ್ಟು ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ ಅಂತ ಚರ್ಚೆ ನಡೆದಿದೆ. ಕನ್ನಡಿಗರು ವಿಶಾಲ ಹೃದಯದವರು. ಆದರೆ, ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ನಡೆದಿದೆ ಎನ್ನುತ್ತಿದ್ದಾರೆ ಕನ್ನಡಿಗರು.

ಬೆಂಗಳೂರಿನಲ್ಲಿ ಸುದೀರ್ಘ 18 ವರ್ಷಗಳ ಕಾಲ ನೆಲೆಸಿದ ಮೇಲೆಯೂ ನನ್ನ ಗೆಳತಿ ಮತ ಚಲಾಯಿಸಿಲ್ಲ. ಕನ್ನಡವನ್ನೂ ಕಲಿಯಲಿಲ್ಲ. ಅವಳಿಗೆ ಕನ್ನಡದ ಸಣ್ಣ ಸಣ್ಣ ಪದಗಳನ್ನು ಹೇಳಿಕೊಡಲು ಅಥವಾ ಕಲಿಸುವುದಕ್ಕೆ ನಾನು ಮಾಡಿದ ಪ್ರಾರಂಭಿಕ ಪ್ರಯತ್ನಗಳು ಫಲ ನೀಡಲಿಲ್ಲ. ಇತ್ತೀಚೆಗೆ ಆಕೆ ಕನ್ನಡಿಗರು ಪಕ್ಷಪಾತಿಗಳು ಎಂದು ಹೇಳಿದ್ದಾಳೆ. ಅಂದಹಾಗೆ, ನಾವು ಈಗ ಹೆಚ್ಚು ಮಾತನಾಡುವುದಿಲ್ಲ ಎಂದು ಎಕ್ಸ್ನಲ್ಲಿ ಕನ್ನಡಿಗ ಪ್ರಜ್ವಲ್ ಭಟ್ ಅವರು ಬರೆದುಕೊಂಡಿದ್ದಾರೆ.

ಇದೊಂದು ಕೆಟ್ಟ ಉದಾ: ಸುದೀರ್ಘ 18 ವರ್ಷಗಳ ಕಾಲ ಕರ್ನಾಟಕದಲ್ಲಿ & ಒಂದು ಜಾಗದಲ್ಲಿದ್ದರೂ ಅಲ್ಲಿನ ಸ್ಥಳೀಯ ಭಾಷೆಯನ್ನು ಕಲಿಯಲಿಲ್ಲ ಎಂದಾದರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಜಿತೇಂದ್ರ ಎನ್ನುವವರು, ನನಗೂ ಇದೇ ರೀತಿಯ ಅನುಭವ ಆಗಿದೆ. ತಮಿಳುನಾಡಿನ ತಮಿಳು ಭಾಷೆಯ ತೀವ್ರ ಅಭಿಮಾನಿಯಾಗಿದ್ದ ನನ್ನ ಗೆಳಯ ಇದೇ ರೀತಿ ವರ್ತನೆ ತೋರಿದ್ದ. ಅವನು ಸುಮಾರು 15 ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದರೂ ಕನ್ನಡದ ಒಂದೇ ಒಂದು ಪದವನ್ನು ಕಲಿಯಲಿಲ್ಲ, ಕಲಿಯುವ ಅಗತ್ಯವೇನು, ಕಲಿಯದೆಯೇ ನಾನು ನಿಭಾಯಿಸಬಲ್ಲೆ ಎಂದು ಅವನು ಹೇಳುತ್ತಿದ್ದ. ಇಲ್ಲಿಯೇ ಇದ್ದು, ಕಾವೇರಿ ಸಮಸ್ಯೆ ಬಂದಾಗ ಅವನು ತಮಿಳುನಾಡನ್ನು ಬೆಂಬಲಿಸುತ್ತಿದ್ದ. ನಾನು ಅವರನ್ನು ಇಷ್ಟು ದಿನ ಹೇಗೆ ಸಹಿಸಿಕೊಂಡೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಎರಡು ವರ್ಷಗಳ ಹಿಂದೆ ತಮಿಳುನಾಡುಗೆ ವಾಪಸ್ ಆಗಿದ್ದಾರೆ. ನಾನು ಅವರೊಂದಿಗೆ ಈಗ ಮಾತನಾಡಲ್ಲ ಎಂದಿದ್ದಾರೆ.

ರಾಮ್ ಎನ್ನುವವರು, ದಕ್ಷಿಣ ಭಾರತೀಯರು ಉತ್ತರ ಭಾರತದ ಯಾವುದೇ ರಾಜ್ಯಗಳಿಗೆ ಹೋದರೂ, ಅವರು ಹಿಂದಿ ಅಥವಾ ಅವರ ಸ್ಥಳೀಯ ಭಾಷೆಯನ್ನು ಸ್ವಲ್ಪ ಸಮಯದಲ್ಲೇ ಕಲಿಯುತ್ತಾರೆ. ಆದರೆ, ಹಿಂದಿ – ನಾರ್ಥಿಗಳು ದಕ್ಷಿಣ ಭಾರತಕ್ಕೆ ಬಂದಾಗ, ಅವರು ಸ್ಥಳೀಯ ಭಾಷೆಯನ್ನು ಕಲಿಯಲು ಇಷ್ಟಪಡುವುದಿಲ್ಲ. ಸ್ಥಳೀಯರು ಅವರೊಂದಿಗೆ ಹಿಂದಿಯಲ್ಲಿ ಮಾತನಾಡಬೇಕು ಅಂತ ನಿರೀಕ್ಷೆ ಮಾಡುತ್ತಾರೆ. ಅಲ್ಲದೇ ಹಿಂದಿಯನ್ನು ರಾಷ್ಟ್ರೀಯ ಭಾಷೆ ಅಂತ ಬೇರೆ ಕರೆಯುತ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮಹಾರಾಷ್ಟ್ರದಲ್ಲೂ ಇದೇ ಸಮಸ್ಯೆ: ಇನ್ನು ಕನ್ನಡಿಗರ ಕಮೆಂಟ್ಗೆ ಮಹಾರಾಷ್ಟ್ರದ ಮರಾಠಿಗರೂ ದನಿಗೂಡಿಸಿದ್ದಾರೆ. ಅನಿಕೇತ್ ಭೋಸಲೆ ಎನ್ನುವವರು, ಮಹಾರಾಷ್ಟ್ರದಲ್ಲಿ ಇದು ಬಹಳ ಹಿಂದಿನಿಂದಲೂ ನಡೆಯುತ್ತಿದೆ. ವಲಸಿಗರು & ಉದ್ಯೋಗ ಹುಡುಕಿಕೊಂಡು ಇಲ್ಲಿಗೆ ಕೆಲಸ ಮಾಡಲು

ಬಂದರು ಮರಾಠಿ ಭಾಷೆಯನ್ನು ಕಲಿಯಲು ಬಯಸುವುದಿಲ್ಲ. ಅವರು ಸ್ಥಳೀಯ ಸಂಸ್ಕೃತಿಯೊಂದಿಗೆ ಹೊಂದಿಕೊಳ್ಳಲು ಬಯಸುವುದಿಲ್ಲ ಇದೊಂದು ಸಮಸ್ಯೆ ಎಂದಿದ್ದಾರೆ.

ನಂದಾ ಎನ್ನುವವರು, 18 ವರ್ಷಗಳಿಂದ ಕನ್ನಡ ಕಲಿಯದಿರುವುದು ಅವಳ ತಪ್ಪು. ಅವಳು ಕಲಿಯುವ ಬಗ್ಗೆ ಗಂಭೀರವಾಗಿರಲಿಲ್ಲ ಎಂದೇ ಅರ್ಥ. ಕನ್ನಡ ಕಠಿಣ ಭಾಷೆಯಲ್ಲ. ನಾನು ತಮಿಳುನಾಡಿನಿಂದ ಬಂದು ಬೆಂಗಳೂರಿನಲ್ಲಿ 19 ವರ್ಷದಿಂದ ವಾಸಿಸುತ್ತಿದ್ದೇನೆ. ನಾನು ಕನ್ನಡ ಮಾತನಾಡುವುದನ್ನು ಕಲಿತಿದ್ದೇನೆ ಅಂತ ಹೇಳಿದ್ದಾರೆ. ಈ ಒಂದು ಪೋಸ್ಟ್ಗೆ ನೂರಾರು ಜನ ರಿಯಾಕ್ಟ್ ಮಾಡಿದ್ದಾರೆ. ಈ ಬಗ್ಗೆ ಪರ – ವಿರೋಧ ಚರ್ಚೆಗಳು ಜೋರಾಗಿವೆ.

Leave a Reply

Your email address will not be published. Required fields are marked *