Mohanlal ನಟನೆಯ ‘Thudarum’ ಸಿನಿಮಾ ಮೇಲೆ ಚಿತ್ರಕತೆ ಕದ್ದ ಆರೋಪ

Mohanlal ನಟನೆಯ ‘Thudarum’ ಸಿನಿಮಾ ಮೇಲೆ ಚಿತ್ರಕತೆ ಕದ್ದ ಆರೋಪ

ಮೋಹನ್ಲಾಲ್ ನಟನೆಯ ‘ತುಡರುಂ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ದೊಡ್ಡ ಯಶಸ್ಸುಗಳಿಸಿದೆ. ಒಟಿಟಿಯಲ್ಲಿಯೂ ಅಬ್ಬರಿಸುತ್ತಿದೆ. ಆದರೆ ಇದೀಗ ಮಲಯಾಳಂನ ಸಿನಿಮಾ ನಿರ್ದೇಶಕನೊಬ್ಬ ಕೃತಿಚೌರ್ಯದ ಆರೋಪ ಮಾಡಿದ್ದಾರೆ. ‘ತುಡರುಂ’ ಸಿನಿಮಾ ಅನ್ನು ತನ್ನ ಚಿತ್ರಕತೆ ಕದ್ದು ನಿರ್ಮಿಸಲಾಗಿದೆ ಎಂದಿದ್ದಾರೆ.

ಮಲಯಾಳಂ ಸ್ಟಾರ್ ನಟ ಮೋಹನ್ಲಾಲ್ ನಟನೆಯ ‘ತುಡರುಂ’ ಸಿನಿಮಾ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಏಪ್ರಿಲ್ 25 ರಂದು ಬಿಡುಗಡೆ ಆಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಕಲೆಕ್ಷನ್ ಮಾಡಿತ್ತು. ಒಟಿಟಿಗೆ ಬಂದ ಬಳಿಕವೂ ಸಹ ದೊಡ್ಡ ಸಂಖ್ಯೆಯ ವೀಕ್ಷಣೆಯನ್ನು ಪಡೆದುಕೊಂಡಿದೆ. ಸಿನಿಮಾ ಅನ್ನು ಮತ್ತೊಂದು ‘ದೃಶ್ಯಂ’ ಎಂದೇ ಬಣ್ಣಿಸಲಾಗಿತ್ತು. ಆದರೆ ಇದೀಗ, ಸಿನಿಮಾ ವಿರುದ್ಧ ಕೃತಿಚೌರ್ಯದ ಆರೋಪ ಕೇಳಿಬಂದಿದೆ. ಮಲಯಾಳಂನ ನಿರ್ದೇಶಕನೊಬ್ಬ ‘ತುಡರುಂ’ ಸಿನಿಮಾ ನನ್ನದೇ ಚಿತ್ರಕತೆಯನ್ನು ಕದ್ದು ಮಾಡಲಾಗಿರುವ ಸಿನಿಮಾ ಎಂದಿದ್ದಾರೆ.

ನಿರ್ದೇಶಕ ಸನಲ್ ಕುಮಾರ್ ಸಸಿಧರನ್ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ತನ್ನ ‘ಥಿಯಟ್ಟಮ್’ ಸಿನಿಮಾದ ಚಿತ್ರಕತೆಯನ್ನು ಕದ್ದು ‘ತುಡರುಂ’ ಸಿನಿಮಾ ಮಾಡಲಾಗಿದೆ ಎಂದಿದ್ದಾರೆ. ಸನಲ್ ಕುಮಾರ್ ಸಸಿಧರನ್, ಹೇಳಿರುವಂತೆ ಅವರು ‘ಥಿಯಟ್ಟಮ್’ ಸಿನಿಮಾದ ಕತೆಯನ್ನು 2020 ರಲ್ಲಿ ಬರೆದಿದ್ದರಂತೆ. ಆದರೆ ಅನಿವಾರ್ಯ ಕಾರಣಗಳಿಂದ ಇನ್ನೂ ಸಿನಿಮಾ ಮಾಡಿಲ್ಲವಂತೆ.

ಸನಲ್ ಕುಮಾರ್ ಸಸಿಧರನ್ ಬರೆದುಕೊಂಡಿರುವಂತೆ, ‘ತುಡರುಂ’ ಸಿನಿಮಾದ ಮೂಲ ಕತೆ, ಐಡಿಯಾ ತನ್ನ ಚಿತ್ರಕತೆಯನ್ನು ಹೋಲುತ್ತದೆ. ಆದರೆ ಕದ್ದಿರುವುದು ಗೊತ್ತಾಗಬಾರದೆಂದು ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ನನ್ನ ಸಿನಿಮಾನ ಮೂಲ ಭಾವವನ್ನು ಕದಿಯಲು ಅವರು ವಿಫಲರಾಗಿದ್ದಾರೆ. ಅವರಿಗೆ ಅಷ್ಟು ಬುದ್ಧಿವಂತಿಕೆ ಇಲ್ಲ ಅನಿಸುತ್ತದೆ’ ಎಂದಿದ್ದಾರೆ.

Leave a Reply

Your email address will not be published. Required fields are marked *