ಪಾಕ್ ಸೇನಾ ಮುಖ್ಯಸ್ಥ ಮುಲ್ಲಾ ಮುನೀರ್ಗೆ ಭರ್ಜರಿ ಊಟ ಬಡಿಸಿದ Donald Trump : ದಿಢೀರ್ ಪ್ರೇಮಕ್ಕೆ ಕಾರಣಗಳೇನು?

ಪಾಕ್ ಸೇನಾ ಮುಖ್ಯಸ್ಥ ಮುಲ್ಲಾ ಮುನೀರ್ಗೆ ಭರ್ಜರಿ ಊಟ ಬಡಿಸಿದ Donald Trump : ದಿಢೀರ್ ಪ್ರೇಮಕ್ಕೆ ಕಾರಣಗಳೇನು?

ಅಂತಾರಾಷ್ಟ್ರೀಯ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ವಿರೋಧಿ ನಡೆಯನ್ನು ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಭಾರತ ಕೈಗೊಂಡಿದ್ದ ಆಪರೇಷನ್ ಸಿಂಧೂರವನ್ನು ನಾನೇ ತಡೆದಿದ್ದೇನೆ ಎಂಬ ಹೇಳಿಕೆಗಳನ್ನು ಟ್ರಂಪ್ ನೀಡುತ್ತಲೇ ಇದ್ದಾರೆ. ಇದೇ ವೇಳೆ, ಪಾಕಿಸ್ತಾನವನ್ನು ನಾನು ಪ್ರೀತಿಸುತ್ತೇನೆ ಎಂಬುದಾಗಿ ಹೇಳುವ ಮೂಲಕ ಟ್ರಂಪ್ ಅವರು ಭಾರತದ ವಿರೋಧಿಯಾಗಿ ಬದಲಾಗುತ್ತಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಪಾಕ್ ಸೇನಾ ಮುಖ್ಯಸ್ಥನಿಗೆ ವೈಟ್ ಹೌಸ್ನಲ್ಲಿ ಆತಿಥ್ಯ

ಈ ಬೆಳವಣಿಗೆಗಳ ನಡುವೆ ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅಲಿಯಾಸ್ ಮುಲ್ಲಾ ಮುನೀರ್ಗೆ ವೈಟ್ ಹೌಸ್ನಲ್ಲಿ ಅಪರೂಪದ ಆತಿಥ್ಯ ದೊರೆತಿದೆ. ಮುನೀರ್ರನ್ನು ಅಮೆರಿಕಕ್ಕೆ ಕರೆಸಿರುವ ಡೊನಾಲ್ಡ್ ಟ್ರಂಪ್ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಟ್ರಂಪ್ ನಡೆಯು ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದು, ಇದು ಭಾರತೀಯರ ಕೆಂಗಣ್ಣಿಗೂ ಗುರಿಯಾಗಿದೆ.

ಇಸ್ರೇಲ್ ಹಾಗೂ ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಖಾಸಗಿ ಭೋಜನ ಸಭೆ ನಡೆದಿದೆ. ಈ ಸಂಘರ್ಷದಲ್ಲಿ ಅಮೆರಿಕದ ಭಾಗವಹಿಸುವಿಕೆ ಕುರಿತು ಟ್ರಂಪ್ ಆಲೋಚನೆ ನಡೆಸಿದ್ದಾರೆ ಎಂಬುದರ ಕುರಿತು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಇರಾನ್ ನಡುವಿನ ಹತ್ತಿರದ ಸಂಬಂಧಗಳು ಈ ಸಭೆಗೆ ಹೆಚ್ಚಿನ ಮಹತ್ವವನ್ನು ನೀಡಿವೆ ಎನ್ನಲಾಗುತ್ತಿದೆ.

ಜಿಯೋ ನ್ಯೂಸ್ ಪ್ರಕಾರ, ಮುಲ್ಲಾ ಮುನೀರ್ ಅವರು ವೈಟ್ ಹೌಸ್ನಲ್ಲಿ ಟ್ರಂಪ್ ಅವರೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಅವರಿಬ್ಬರ ನಡುವಿನ ಚರ್ಚೆಗಳ ವಿವರಗಳು ಇನ್ನೂ ಹೊರಬಿದ್ದಿಲ್ಲ. ವಿದೇಶಿ ಸೇನಾ ಮುಖ್ಯಸ್ಥನೊಬ್ಬನಿಗೆ ವೈಟ್ ಹೌಟ್ನಲ್ಲಿ ಭೋಜನ ಕೂಟ ಏರ್ಪಡಿಸುವುದು ಅಪರೂಪವೆನ್ನಲಾಗುತ್ತಿದೆ. ಹಿಂದಿನ ಪಾಕಿಸ್ತಾನಿ ಸೇನಾ ಮುಖ್ಯಸ್ಥರಾಗಿದ್ದ ಅಯೂಬ್ ಖಾನ್, ಜಿಯಾ ಉಲ್ಲಾ ಹಕ್ ಮತ್ತು ಪರ್ವೇಜ್ ಮುಷರಫ್ ಅವರು ಇಂತಹ ಆಹ್ವಾನ ಪಡೆದಿದ್ದರೂ, ಅವರು ಆ ಸಮಯದಲ್ಲಿ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಅವರು ಕೆನಡಾದಲ್ಲಿ ನಡೆಯುತ್ತಿದ್ದ ಜಿ7 ಶೃಂಗಸಭೆಯಿಂದ ಹೊರಬಂದಿದ್ದರು. ಮಂಗಳವಾರ ಬೆಳಿಗ್ಗೆ ವಾಷಿಂಗ್ಟನ್ಗೆ ಮರಳಿದ್ದರು. ಆ ಬಳಿಕ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನು ಮಧ್ಯಾಹ್ನ 1 ಗಂಟೆಗೆ ಕ್ಯಾಬಿನೆಟ್ ಹಾಲ್ನಲ್ಲಿ ಭೋಜನಕ್ಕೆ ಆಹ್ವಾನಿಸುವುದಾಗಿ ಘೋಷಣೆ ಮಾಡಿದ್ದರು.

Leave a Reply

Your email address will not be published. Required fields are marked *