ಭಾರತ- UAE ಸಂಬಂಧವು ಯಾವುದೇ ಒಪ್ಪಂದಗಳಿಗಿಂತಲೂ ಮಿಗಿಲು: ಸಚಿವ Hardeep Singh Puri

ಭಾರತ- UAE ಸಂಬಂಧವು ಯಾವುದೇ ಒಪ್ಪಂದಗಳಿಗಿಂತಲೂ ಮಿಗಿಲು: ಸಚಿವ Hardeep Singh Puri

ದುಬೈ : ಭಾರತ ಮತ್ತು ಯುಎಇ ನಡುವಿನ ಸಹಭಾಗಿತ್ವವು ಯಾವುದೇ ಅಂಕಿ ಅಂಶಗಳು, ಒಪ್ಪಂದಗಳಿಗಿಂತ ಮಿತಿಲಾಗಿದೆ. ಅದು ಜನರಿಗೆ ಸಂಬಂಧ ಪಟ್ಟಿದ್ದಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಯುಎಇಯಲ್ಲಿ ನಡೆದ ನ್ಯೂಸ್9 ಗ್ಲೋಬಲ್ ಸಮಿಟ್ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಿದ ಸಚಿವರು, ಎರಡೂ ದೇಶಗಳ ನಡುವಿನ ತಾಳಮೇಳದ ಬಗ್ಗೆ ಮಾತನಾಡಿದರು.

ಯುಎಇಯಲ್ಲಿರುವ 35 ಲಕ್ಷ ಭಾರತೀಯ ಸಮುದಾಯದವರು ಈ ಎರಡು ದೇಶಗಳ ನಡುವೆ ಜೀವಂತ ಸೇತುವಾಗಿದ್ದಾರೆ. ಈ ಅನಿವಾಸಿ ಭಾರತೀಯ ಸಮುದಾಯದವರು ಈ ಎರಡೂ ದೇಶಗಳ ಸಂಸ್ಕೃತಿ ಮತ್ತು ಮೌಲ್ಯಗಳ ರಾಯಭಾರಿಗಳಾಗಿದ್ದಾರೆ ಎಂದು ಹರ್ದೀಪ್ ಸಿಂಗ್ ಪುರಿ ಬಣ್ಣಿಸಿದರು.

Leave a Reply

Your email address will not be published. Required fields are marked *