ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, electric plane is coming..!

ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಬರುತ್ತಿದೆ ವಿದ್ಯುತ್ ವಿಮಾನ..!

ವಿದ್ಯುತ್ ಚಾಲಿತ ವಿಮಾನವೊಂದು ಬರುತ್ತಿದೆ. ಈಗಾಗಲೇ ಇದರ ಹಾರಾಟದ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಪ್ರಯಾಣಿಕರನ್ನು ಹೊತ್ತು, ಕೇವಲ 30 ನಿಮಿಷಗಳಲ್ಲಿ 130 ಕಿ.ಮೀ ಹಾರಾಟ ನಡೆಸಿದೆ. ಇದು ಇಂಧನ ಹಾಗೂ ಹಲವು ವೆಚ್ಚಗಳನ್ನು ಉಳಿಸುತ್ತದೆ ಎಂದು ಹೇಳಲಾಗಿದೆ. ಈ ವಿಮಾನ ಯಾವಾಗದಿಂದ ಅಧಿಕೃತವಾಗಿ ಹಾರಾಟ ಮಾಡಲಿದೆ, ಎಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂಬ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ.

ವಿಮಾನಯಾನದ ಇತಿಹಾಸದಲ್ಲಿ ಇದೇ ಮೊದಲು, ಸಂಪೂರ್ಣ ವಿದ್ಯುತ್ ವಿಮಾನದ ಹಾರಾಟ ಯಶಸ್ವಿಯಾಗಿ ನಡೆದಿದೆ. ಬೀಟಾ ಟೆಕ್ನಾಲಜೀಸ್ನ ಆಲಿಯಾ CX300 ಎಂಬ ವಿಮಾನ ಪ್ರಯಾಣಿಕರನ್ನು ಹೊತ್ತ ಹಾರಾಟ ನಡೆಸಿದೆ. ಈ ತಿಂಗಳ ಆರಂಭದಲ್ಲಿ ಈಸ್ಟ್ ಹ್ಯಾಂಪ್ಟನ್ನಿಂದ ಅಮೆರಿಕದ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ನಾಲ್ಕು ಪ್ರಯಾಣಿಕರೊಂದಿಗೆ ಹಾರಾಟ ನಡೆಸಿತು. ಫಾಕ್ಸ್ ನ್ಯೂಸ್ನ ವರದಿಯ ಪ್ರಕಾರ, ಸುಮಾರು 70 ನಾಟಿಕಲ್ ಮೈಲುಗಳನ್ನು (130 ಕಿಲೋಮೀಟರ್) ಕೇವಲ 30 ನಿಮಿಷಗಳಲ್ಲಿ ತಲುಪಿದೆ. ಈ ಹಾರಾಟ ವೆಚ್ಚ ಹೆಲಿಕಾಪ್ಟರ್ಗೆ ಹೋಲಿಸಿದ್ರೆ ಅಂದಾಜು ರೂ. 13,885 ($160) ಇಂಧನ ವೆಚ್ಚವಾಗುತ್ತದೆ. ಆದರೆ ಈ ವಿಮಾನಕ್ಕೆ ಕೇವಲ ರೂ. 694 ($8) ವೆಚ್ಚದಲ್ಲಿ ತಲುಪಿದೆ ಎಂದು ಹೇಳಲಾಗಿದೆ. ಜತೆಗೆ ಇದರಲ್ಲಿ ಅಂತಹ ಯಾವುದೇ ಶಬ್ದ-ಗದ್ದಲಗಳು ಇರುವುದಿಲ್ಲ, ಆರಾಮವಾಗಿ ಪ್ರಯಾಣಿಸಬಹುದು.

“ಇದು 100% ವಿದ್ಯುತ್ ಚಾಲಿತ ವಿಮಾನವಾಗಿದ್ದು, ಈಸ್ಟ್ ಹ್ಯಾಂಪ್ಟನ್ ನಿಂದ ಜೆಎಫ್ ಕೆಗೆ ಪ್ರಯಾಣಿಕರೊಂದಿಗೆ ಹಾರಾಟ ನಡೆಸಿದ್ದು, ನ್ಯೂಯಾರ್ಕ್ ಬಂದರು ಪ್ರಾಧಿಕಾರ ಮತ್ತು ನ್ಯೂಯಾರ್ಕ್ ಪ್ರದೇಶಕ್ಕೆ ಇದು ಮೊದಲ ಹಾರಾಟವಾಗಿದೆ. 35 ನಿಮಿಷಗಳಲ್ಲಿ 130 ಕಿಲೋಮೀಟರ್ ದೂರ ಕ್ರಮಿಸಿದ್ದೇವೆ” ಎಂದು ಬೀಟಾ ಟೆಕ್ನಾಲಜೀಸ್ ನ ಸಂಸ್ಥಾಪಕ ಮತ್ತು ಸಿಇಒ ಕೈಲ್ ಕ್ಲಾರ್ಕ್ ಹೇಳಿದ್ದಾರೆ. ಇದನ್ನು ಇಲ್ಲಿಂದ ಹಾರಾಟ ನಡೆಸಲು ಕೇವಲ 8$ (694 ರೂ) ಮಾತ್ರ ಖರ್ಚಾಗಿದೆ. ಪ್ರಯಾಣಿಕರು ಇಲ್ಲಿ ಪೈಲೆಟ್ ಹಾಗೂ ವಿಮಾನಕ್ಕೆ ಮಾತ್ರ ಪಾವತಿ ಮಾಡಬೇಕು ಅಷ್ಟೇ, ಮೂಲಭೂತವಾಗಿ, ಇದು ತುಂಬಾ ಕಡಿಮೆ ವೆಚ್ಚದಾಯಕವಾಗಿದೆ ಎಂದು ಹೇಳಿದ್ದಾರೆ. ಕಂಪನಿಯ ಪ್ರಕಾರ, CX300 ಒದಗಿಸುವ ಸೌಕರ್ಯ, ಪ್ರಯಾಣದ ಅನುಭವದಿಂದ ಮುಂದಿನ ದಿನದಲ್ಲಿ ಇದು ಹೆಚ್ಚು ಜನಪ್ರಿಯತೆ ಪಡೆಯಲಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *