ನವದೆಹಲಿ || ಜುಲೈ 2 ರಿಂದ ಪ್ರ PM Modi 5 ರಾಷ್ಟ್ರಗಳಿಗೆ ಭೇಟಿ: 8 ದಿನಗಳ ಪ್ರವಾಸದ ವೇಳಾಪಟ್ಟಿ ಇಲ್ಲಿದೆ.

ನವದೆಹಲಿ || ಜುಲೈ 2 ರಿಂದ ಪ್ರ PM Modi 5 ರಾಷ್ಟ್ರಗಳಿಗೆ ಭೇಟಿ: 8 ದಿನಗಳ ಪ್ರವಾಸದ ವೇಳಾಪಟ್ಟಿ ಇಲ್ಲಿದೆ.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಜುಲೈ 2 ರಿಂದ 8 ದಿನಗಳ ಕಾಲ 5 ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದು, ಇದು ಎರಡು ಖಂಡಗಳನ್ನು ಒಳಗೊಂಡ ಅವರ ಅತ್ಯಂತ ದೀರ್ಘ ಮತ್ತು ವಿಸ್ತಾರವಾದ ವಿದೇಶ ಪ್ರವಾಸಗಳಲ್ಲಿ ಒಂದಾಗಿರಲಿದೆ. ಇದರಲ್ಲಿ ಕೆಲವು ದೇಶಗಳಿಗೆ ಪ್ರಧಾನಿಯಾಗಿ ಮೋದಿ ಅವರು ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ 2016 ರಲ್ಲಿ ಜೂನ್ 4 ರಿಂದ ಜೂನ್ 8 ರವರೆಗೆ ಅಮೆರಿಕ, ಮೆಕ್ಸಿಕೊ, ಸ್ವಿಟ್ಜರ್ಲೆಂಡ್, ಅಫ್ಘಾನಿಸ್ತಾನ ಮತ್ತು ಕತಾರ್ಗೆ 5 ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದರು. ಆ ನಂತರ ಐದು ದೇಶಗಳಿಗೆ ಒಂದೇ ಬಾರಿ ಪ್ರವಾಸ ಕೈಗೊಳ್ಳುತ್ತಿರುವುದು ಇದೇ ಮೊದಲಾಗಿದೆ.

ಯಾವೆಲ್ಲ ದೇಶಗಳಿಗೆ ಭೇಟಿ ನೀಡಲಿದ್ದಾರೆ ಮೋದಿ?

ಘಾನಾ, ಟ್ರಿನಿಡಾಡ್, ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾಕ್ಕೆ ಮೋದಿ ಪ್ರವಾಸ ಕೈಗೊಳ್ಳಲಿದ್ದಾರೆ. ಇದರಲ್ಲಿ ಪಶ್ಚಿಮ ಆಫ್ರಿಕಾದ ಘಾನಾ ಗಣರಾಜ್ಯಕ್ಕೆ ಮೋದಿ ಭೇಟಿ ನೀಡುತ್ತಿರುವುದು ಇದೇ ಮೊದಲಾಗಿದೆ. ಇದರೊಂದಿಗೆ ಮೂರು ದಶಕಗಳ ನಂತರ ಘಾನಾಗೆ ಭಾರತದ ಪ್ರಧಾನಿ ಭೇಟಿ ನೀಡಿದಂತಾಗಲಿದೆ. ಮೊದಲಿಗೆ ಘಾನಾಕ್ಕೆ ತೆರಳುವ ಮೋದಿ, ಈ ಭೇಟಿಯ ಸಮಯದಲ್ಲಿ ಘಾನಾ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಹಭಾಗಿತ್ವ, ಪಾಲುದಾರಿಕೆ, ಆರ್ಥಿಕತೆ, ಇಂಧನ, ರಕ್ಷಣೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿನ ಸಹಕಾರವನ್ನು ಹೆಚ್ಚಿಸುವ ಅವಕಾಶಗಳ ಬಗ್ಗೆ ಚರ್ಚಿಸಲಿದ್ದಾರೆ.

Leave a Reply

Your email address will not be published. Required fields are marked *