ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಸದಸ್ಯರಿಗೆ ಜೆಡಿಎಸ್ ಎಂಎಲ್ಸಿ ಟಿಎ ಶರವಣ ವತಿಯಿಂದ ಅಚ್ಚಿನ ಬೆಳ್ಳಿ ಲೋಹದ ಮೇಲೆ ಬಂಗಾರದ ಲೇಪನ ಹಾಕಿ ಸಿದ್ದಪಡಿಸಿರುವ ಕರ್ನಾಟಕ ಸರ್ಕಾರದ ಲಾಂಛನ ಗಂಡಬೇರುಂಡವನ್ನು ಇಂದು ವಿತರಣೆ ಮಾಡಲಾಯಿತು.
ಶರವಣ ಎಂಎಲ್ಸಿಗಳಿಗೆ ಲಾಂಛನ ಸಿದ್ದಪಡಿಸಿದ್ದಾರೆ. ಅವರ ವ್ಯಾಪಾರದಲ್ಲಿ ಶ್ರಮ ಪಟ್ಟು ಗಳಿಸಿದ್ದಾರೆ. ಅದರಲ್ಲಿ ಲಾಂಛನ ಸಿದ್ಧಪಡಿಸಿ ನಮ್ಮೆಲ್ಲರಿಗೂ ತಂದುಕೊಟ್ಟಿದ್ದಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದರು.
For More Updates Join our WhatsApp Group :