ತುಮಕೂರಿನಲ್ಲಿ ಪ್ರತ್ಯಕ್ಷ ಗೋಲ್ಡ್ ಮ್ಯಾನ್: ಮೈತುಂಬ 8.5 ಕೆಜಿ ಚಿನ್ನದ ಅಬ್ಬರ!

ತುಮಕೂರಿನಲ್ಲಿ ಪ್ರತ್ಯಕ್ಷ ಗೋಲ್ಡ್ ಮ್ಯಾನ್: ಮೈತುಂಬ 8.5 ಕೆಜಿ ಚಿನ್ನದ ಅಬ್ಬರ!

ತುಮಕೂರು:ದೇಶದಲ್ಲಿ ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧರಾದ ಸನ್ನಿ ನಾನಾಸಾಹೇಬ್ಇಂದು ತುಮಕೂರಿನಲ್ಲಿ ಪಬ್ಲಿಕ್ ಅಟ್ರಾಕ್ಷನ್ ಆಗಿ ಕಾಣಿಸಿಕೊಂಡಿದ್ದಾರೆ. ಪುಣೆ ಮೂಲದ ಈ ‘ಚಿನ್ನದ ಮನುಷ್ಯ’, ದೇಹದ ಮೇಲೆ ಬರೋಬ್ಬರಿ 8.5 ಕೆಜಿ ಚಿನ್ನ ಧರಿಸಿಕೊಂಡು ತುಮಕೂರಿನ ಗಣೇಶನ ಆಶೀರ್ವಾದ ಪಡೆಯಲು ಬಂದಿದ್ದಾರೆ.

ಬಿಗ್ ಬಾಸ್ ಹಿನ್ನಲೆ: ಹಿಂದಿ ಬಿಗ್ ಬಾಸ್ ಸೀಸನ್ 16ರ ಸ್ಪರ್ಧಿ ಹಾಗೂ ಸಿನಿಮಾ ನಿರ್ಮಾಪಕರೂ ಆಗಿರುವ ಸನ್ನಿ, ಗೋಲ್ಡ್ ಮ್ಯಾನ್ ಹೆಸರಿನಲ್ಲಿ ದೇಶಾದ್ಯಂತ ಖ್ಯಾತಿ ಪಡೆದಿದ್ದಾರೆ.

ಗಣೇಶೋತ್ಸವ ಪ್ರವೇಶ:ಕೈನಲ್ಲಿ ಬಂಗಾರದ ಉಂಗುರಗಳು, ಕೊರಳಲ್ಲಿ ರಾಶಿ ರಾಶಿ ಚಿನ್ನದ ಸರಗಳೊಂದಿಗೆ ಅವರು ತುಮಕೂರಿನ ಉದ್ಯಮಿ ವಿಶ್ವಾಸ್ ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜನರ ಕುತೂಹಲ: ಮೈಮೇಲೆ ಮಿನುಗುತ್ತಿದ್ದ ಚಿನ್ನದ ಅಲಂಕಾರವನ್ನು ನೋಡಲು ಸ್ಥಳೀಯರು ಮುಗಿಬಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *