ಗಣೇಶ ವಿಸರ್ಜನೆ ವೇಳೆ ದಾರುಣ ಅವಘಡ: ವಿದ್ಯುತ್ ತಂತಿಗೆ ತಗಲಿ ಯುವಕನ ಸಾ*.

ಗಣೇಶ ವಿಸರ್ಜನೆ ವೇಳೆ ದಾರುಣ ಅವಘಡ: ವಿದ್ಯುತ್ ತಂತಿಗೆ ತಗಲಿ ಯುವಕನ ಸಾ*.

ವಿಜಯಪುರ – ನಗರದ ಗಾಂಧಿಚೌಕ್ ಬಳಿಯ ಟಾಂಗಾ ಸ್ಟ್ಯಾಂಡ್ ಬಳಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಯುವಕನೊಬ್ಬ ವಿದ್ಯುತ್ ಶಾಕ್‌ಗೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.

ಮೃತ ಯುವಕನ ಹೆಸರುಶುಭಂ ಸಂಕಳ (ವಯಸ್ಸು 21), ಡೋಬಲೆ ಗಲ್ಲಿಯ ನಿವಾಸಿಯಾಗಿದ್ದನು.

ಘಟನೆಯ ವಿವರ: ಗಣೇಶ ಮೂರ್ತಿಯ ಎತ್ತರ ಹೆಚ್ಚಿಸಲು ಕೋಲಿನಿಂದ ವಿದ್ಯುತ್ ತಂತಿಯ ಮೇಲೆತ್ತುವಾಗ ಆಕಸ್ಮಿಕವಾಗಿ ವಿದ್ಯುತ್ ಹರಿದು, ಯುವಕನಿಗೆ ತೀವ್ರ ಶಾಕ್ ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಪೊಲೀಸರ ತಕ್ಷಣದ ಪ್ರತಿಕ್ರಿಯೆಯಿಂದಾಗಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಇತರ ಮೂರ್ತಿಗಳನ್ನು ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗಿದ್ದು, ಭದ್ರತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು: ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ನಿಂತು ಮುಂದಿನ ಮೆರವಣಿಗೆಗಳು ಸುಗಮವಾಗುವಂತೆ ಕ್ರಮ ಕೈಗೊಂಡಿದ್ದಾರೆ.

ವಿಜಯಪುರ ನಗರದಲ್ಲಿ ಏಳನೇ ದಿನದ ಗಣೇಶ ವಿಸರ್ಜನೆ ಸಂದರ್ಭ ನೂರಾರು ಮೂರ್ತಿಗಳು ವಿವಿಧ ಸಾರ್ವಜನಿಕ ಮಂಡಳಿಗಳಿಂದ ವಿಸರ್ಜನೆಗೊಳಿಸಲಾಗುತ್ತಿತ್ತು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *