ಜುಬ್ಬಾ ಪೈಜಾಮ ಬಿಟ್ಟು ಪರಂಪರೆಯ ಗೆಟಪ್ನಲ್ಲಿ ಮಿಂಚಿದ ಸ್ಪೀಕರ್ ಯುಟಿ ಖಾದರ್.

ಜುಬ್ಬಾ ಪೈಜಾಮ ಬಿಟ್ಟು ಪರಂಪರೆಯ ಗೆಟಪ್ನಲ್ಲಿ ಮಿಂಚಿದ ಸ್ಪೀಕರ್ ಯುಟಿ ಖಾದರ್.

ಬೆಂಗಳೂರು: ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್‌ನಲ್ಲಿ ನಡೆದ ಕಾಮನ್ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಮ್ಮೇಳನದಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಹೊಸ ಗೆಟಪ್‌ನಲ್ಲಿ ಮಿಂಚಿದರು.

ಸಾಮಾನ್ಯವಾಗಿ ಜುಬ್ಬಾ-ಪೈಜಾಮ ಅಥವಾ ಖಡಕ್ ವೈಟ್ ಶರ್ಟ್ ಧರಿಸಿ ಕಾಣಿಸಿಕೊಂಡಿದ್ದ ಖಾದರ್, ಈ ಬಾರಿ ಬೇರೆಯದೇ ಲುಕ್‌ನಲ್ಲಿ ಗಮನ ಸೆಳೆದರು. ಅವರು ರೇಷ್ಮೆ ಶರ್ಟ್, ಪಂಚೆ ಮತ್ತು ಶಲ್ಯಾ ಧರಿಸಿ ಆಗಮಿಸಿದ್ದು, ಇದು ಕರ್ನಾಟಕದ ಸಂಸ್ಕೃತಿಯ ಪ್ರತೀಕ ಎಂದು ತಿಳಿಸಿದ್ದಾರೆ.

ಖಾದರ್ ಅವರ ಈ ಹೊಸ ಲುಕ್ ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿದ್ದು, ಹಾಜರಿದ್ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *