ಬೆಂಗಳೂರು:ನಗರದ ಹೆಚ್ಎಎಲ್ ಏರ್ಪೋರ್ಟ್ ಮುಖ್ಯ ಗೇಟ್ ಬಳಿ ಸೋಮವಾರ ಮುಂಜಾನೆ ಭಯಾನಕ ಘಟನೆ ಸಂಭವಿಸಿದ್ದು, ಬಿಎಂಟಿಸಿ ಬಸ್ ಒಂದು ಎಂಜಿನ್ನಲ್ಲಿ ಉಂಟಾದ ಬೆಂಕಿಯಿಂದ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಬಸ್ನಲ್ಲಿ 5.15ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು, ಮೆಜೆಸ್ಟಿಕ್ನಿಂದ ಕಾಡುಗೋಡಿಗೆ ತೆರಳುತ್ತಿದ್ದ ಬಸ್ ಇದಾಗಿತ್ತು. ಚಾಲಕನ ಸಮಯಪ್ರಜ್ಞೆ ಹಾಗೂ ತಕ್ಷಣದ ನಿರ್ಧಯದಿಂದ, ಬಸ್ನಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲು ಸಾಧ್ಯವಾಗಿದೆ.
ಇದೀಗ ಹೆಚ್ಎಎಲ್ ಫೈರ್ ಬ್ರಿಗೇಡ್ ಧಾವನೆ:
ಬೆಂಕಿಯು ದಿಢೀರ್ ಬಸ್ನ ಇಡೀ ಹಿಂಭಾಗವನ್ನೆ ಆವರಿಸಿದ್ದರೂ ಕೂಡ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತಕ್ಷಣವೇ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ಬಸ್ಸು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರೂ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಾಲಕನ ಶೀಘ್ರ ಪ್ರತಿಕ್ರಿಯೆಗೆ ಶ್ಲಾಘನೆ:
ಸಮಯದ ಬಗ್ಗೆ ಎಚ್ಚರತೆ ಪ್ರದರ್ಶಿಸಿದ ಚಾಲಕ, ಬಸ್ ನಿಲ್ಲಿಸಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಮೊದಲು ಚಿಂತಿಸಿರುವುದು ಪ್ರಶಂಸಾರ್ಹ. ನಾಗರಿಕರಿಂದ ಈಚೆಗೆ “ನಿಜವಾದ ಹೀರೋ” ಎಂಬ ಶ್ಲಾಘನೆಯ ಮಾತುಗಳು ಹರಿದು ಬಂದಿವೆ.
For More Updates Join our WhatsApp Group :




