ಕೋಲಾರದಲ್ಲಿ ಶಾಕಿಂಗ್ ಕ್ರೈಂ: ಅಕ್ರಮ ಸಂಬಂಧ ಬಯಲಾಗಿತೆಂದು ಅತ್ತೆಯ ಮೇಲೆ ಮಾರಣಾಂತಿಕ ಹ* ನಡೆಸಿದ ಸೊಸೆ!

ಕೋಲಾರದಲ್ಲಿ ಶಾಕಿಂಗ್ ಕ್ರೈಂ: ಅಕ್ರಮ ಸಂಬಂಧ ಬಯಲಾಗಿತೆಂದು ಅತ್ತೆಯ ಮೇಲೆ ಮಾರಣಾಂತಿಕ ಹ* ನಡೆಸಿದ ಸೊಸೆ!

ಕೋಲಾರ:ಅಕ್ರಮ ಸಂಬಂಧದ ಬಗ್ಗೆ ಅತ್ತೆಗೆ ಗೊತ್ತಾದ ವಿಚಾರದಿಂದ ಕೋಪಗೊಂಡ ಸೊಸೆ, ತನ್ನ ಪ್ರಿಯಕರನ ಜೊತೆಗೂಡಿ ಅತ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಮಾನವೀಯ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗುಮ್ಮಲಪಲ್ಲಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಗಂಡ ಮನೆಯಲ್ಲಿ ಇಲ್ಲದ ಸಂದರ್ಭದ ದುಷ್ಕೃತ್ಯ:
ಅತ್ತೆ ರಮಣಮ್ಮ ತಮ್ಮ ಮನೆಯಲ್ಲಿದ್ದಾಗ, ಗಂಡ ಹೊರಗೆ ಹೋಗಿದ್ದ ಸಂದರ್ಭದಲ್ಲೇ ಸೊಸೆ ತನ್ನ ಪ್ರಿಯಕರ ಶಶಿಕುಮಾರ್ ಜೊತೆ ಸೇರಿ ಹಲ್ಲೆ ನಡೆಸಿದ್ದಾಳೆ. ತಲೆಗೆ ಗಂಭೀರ ಗಾಯವಾಗಿರುವ ರಮಣಮ್ಮರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ:
ಘಟನೆಯ ಕುರಿತು ಮಾಹಿತಿ ಪಡೆದ ಸ್ಥಳೀಯ ಪೊಲೀಸರು, ಸೊಸೆ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ಸ್ಥಳೀಯರಲ್ಲಿ ಈ ಕ್ರೂರ ಕೃತ್ಯ ಆಘಾತ ಮೂಡಿಸಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *