ಕೊಪ್ಪಳ: ರಾಜ್ಯದಲ್ಲಿ ಮತ್ತೆ ಜಾತಿಗಣತಿ ಆರಂಭವಾಗುತ್ತಿದ್ದು, ಈ ಬಾರಿ ನಿಖರ ಮಾಹಿತಿ ಸಂಗ್ರಹಿಸಲು ಸಂಪೂರ್ಣ ತಂತ್ರಜ್ಞಾನ ಆಧಾರಿತ ಕ್ರಮ ತೆಗೆದುಕೊಳ್ಳಲಾಗಿದೆ. ಆದರೆ ಸಮೀಕ್ಷೆ ಆರಂಭಕ್ಕೂ ಮುನ್ನವೇ ವಿವಾದದ ಮಳೆ ಸುರಿಯತೊಡಗಿದೆ.
ವಿವಾದ ಎಲ್ಲಿ ಹುಟ್ಟಿತು?
ಮತಾಂತರ ಹೊಂದಿರುವ ಕೆಲವು ವ್ಯಕ್ತಿಗಳು ತಮಗೆ “ಕ್ರಿಶ್ಚಿಯನ್ ಬ್ರಾಹ್ಮಣ“, “ಲಿಂಗಾಯತ ಕ್ರಿಶ್ಚಿಯನ್“, “ಕುರಬ ಕ್ರಿಶ್ಚಿಯನ್” ಎಂದು ದಾಖಲೆ ಬರೆಸಿದ್ದಾರೆ. ಈ ವಿಚಾರವಾಗಿ ಬಿಜೆಪಿ ನಾಯಕರಿಂದ ಆಕ್ಷೇಪ ವ್ಯಕ್ತವಾಗಿದೆ.
ಇದು ಸಮೀಕ್ಷೆಯ ಗಂಭೀರತೆಗೆ ಧಕ್ಕೆ ತರುತ್ತದೆ ಎಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.
ತಂಗಡಗಿಯ ಸ್ಪಷ್ಟನೆ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮತಾಂತರವು ಕಾನೂನಿನಲ್ಲಿ ಅನುಮತಿತವಾಗಿದೆ ಎಂದಿದ್ದಾರೆ:
“ಆಮಿಷವೊಡ್ಡಿ ಮತಾಂತರ ಮಾಡುವುದು ತಪ್ಪು. ಆದರೆ, ವೈಯಕ್ತಿಕ ಮತಾಂತರಕ್ಕೆ ನಾವು ತಡೆಯಲು ಸಾಧ್ಯವಿಲ್ಲ. ಕಾನೂನಿನಲ್ಲಿ ಅವಕಾಶವಿದೆ. ಬಿಜೆಪಿಯವರು ಏನು ಹೇಳಿದರೂ, ನಮಗೆ ಮತಾಂತರವು ಅನಧಿಕೃತವೆಂಬ ನಿಲುವಿಲ್ಲ.“
“ಯಾರು ಯಾರು ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಕುರುಬ ಎಂದು ಬರೆಸಿಕೊಂಡಿದ್ದಾರೆ, ಅದು ಅವರ ಆಯ್ಕೆ. ನಾವು ಯಾರಿಗೂ ಬಲವಂತ ಮಾಡಿಲ್ಲ.“
ಹೊಸ ಜಾತಿಗಣತಿ ಎಲ್ಲ ಸಿದ್ಧತೆ
ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ವರೆಗೆ ನಡೆಯಲಿರುವ ಈ ಸಮೀಕ್ಷೆಯಲ್ಲಿ ಸುಮಾರು 1.75 ಲಕ್ಷ ಗಣತಿದಾರರು ಪಾಲ್ಗೊಳ್ಳಲಿದ್ದಾರೆ. ಡಿಸೆಂಬರ್ ವೇಳೆಗೆ ವರದಿ ಸರ್ಕಾರಕ್ಕೆ ಸಲ್ಲಿಸಲಾಗುವುದು.
“ಕಾಂತರಾಜು ವರದಿಗೆ ಈಗಾಗಲೇ 10 ವರ್ಷವಾದ್ದರಿಂದ, ಅದನ್ನು ಕೈಬಿಟ್ಟಿದ್ದೇವೆ. ಈ ಬಾರಿ ಸಂಪೂರ್ಣ ಟೆಕ್ ಆಧಾರಿತ ಸಮೀಕ್ಷೆ ನಡೆಯಲಿದೆ,” ಎಂದು ತಂಗಡಗಿ ಸ್ಪಷ್ಟಪಡಿಸಿದರು.
ಸಮಾನತೆ, ನಿಖರತೆ ತರುವ ಉದ್ದೇಶ
ಸಮೀಕ್ಷೆಯ ಮುಖ್ಯ ಉದ್ದೇಶವೆಂದರೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿನ್ನಲೆಯಲ್ಲಿ ಸಮುದಾಯಗಳ ನಿಖರ ಸ್ಥಿತಿ ತಿಳಿದುಕೊಳ್ಳುವುದು. ಸಮಿತಿಯ ಅಧ್ಯಕ್ಷತೆಯನ್ನೂ ಮಾಜಿ ಶಾಸಕ ಮಧುಸೂದನ ನಾಯ್ಕ್ ಅವರು ವಹಿಸಿದ್ದಾರೆ.
For More Updates Join our WhatsApp Group :




