ಜಾತಿ ಗಣತಿಯ ಜಟಾಪಟಿಗೆ ನೂತನ ತಿರುವು: ಪಂಚಮಸಾಲಿ ಲಿಂಗಾಯತರಿಗೆ ಸ್ಟಿಕ್ಕರ್ ಅಭಿಯಾನ ಆರಂಭ.

ಜಾತಿ ಗಣತಿಯ ಜಟಾಪಟಿಗೆ ನೂತನ ತಿರುವು: ಪಂಚಮಸಾಲಿ ಲಿಂಗಾಯತರಿಗೆ ಸ್ಟಿಕ್ಕರ್ ಅಭಿಯಾನ ಆರಂಭ.

ಹುಬ್ಬಳ್ಳಿ:ಜಾತಿ ಗಣತಿ ವಿಚಾರದಲ್ಲಿ ಲಿಂಗಾಯತ ಸಮುದಾಯದಲ್ಲಿ ಸಹಮತ ಬಂದಿರುವಂತೆಯೇ, ಒಳಜಾತಿ ಗುರುತಿನ ಜಟಾಪಟಿ ತೀವ್ರವಾಗುತ್ತಿದೆ. “ಲಿಂಗಾಯತವೇ ಧರ್ಮ” ಎಂಬ ಒಕ್ಕೂಟದ ನಿಲುವಿಗೆ ಇತ್ತಿಚೆಗೆ ಬೆಂಬಲ ವ್ಯಕ್ತವಾಗಿದ್ದರೂ, ಜಾತಿ ಕಾಲಂನಲ್ಲಿ ಯಾವ ಶಬ್ದ ಬಳಸಬೇಕು ಎಂಬುದರ ಮೇಲೆ ಮತಭೇದ ನಿರ್ಮಾಣವಾಗಿದೆ.

 ‘ಪಂಚಮಸಾಲಿ ಲಿಂಗಾಯತ’ ಎಂದು ಬರೆಯಿರಿ – ಸ್ಟಿಕ್ಕರ್ ಅಭಿಯಾನ

ಪಂಚಮಸಾಲಿ ಲಿಂಗಾಯತ ಸಮುದಾಯದ ಗುರು ವಚನಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ:

  • ಪಂಚಮಸಾಲಿ ಲಿಂಗಾಯತಎಂದು ಜಾತಿ ಕಾಲಂನಲ್ಲಿ ಬರೆಯಿರಿ ಎಂಬ ಶ್ಲೋಗನ್ ನೊಂದಿಗೆ
  • ಹುಬ್ಬಳ್ಳಿಯಲ್ಲಿ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಅಭಿಯಾನ ಶುರು
  • ಪ್ರಾರಂಭದಲ್ಲಿ 1 ಲಕ್ಷ ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಗುರಿ
  • ಜಿಲ್ಲೆವಾರು ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ

ಏನು ಪೈಪೋಟಿ?

  • ಕೆಲ ಲಿಂಗಾಯತರು ವೀರಶೈವ ಲಿಂಗಾಯತ ಎಂದು ಬರೆಯಬೇಕು ಎನ್ನುತ್ತಿದ್ದರೆ,
  • ಪಂಚಮಸಾಲಿ ಬಣದವರು ಸ್ವತಂತ್ರ ಗುರುತಾಗಿಪಂಚಮಸಾಲಿ ಲಿಂಗಾಯತ ಎಂದು ಬರೆಯುವ ಅಗತ್ಯವಿದೆ ಎಂದು ಒತ್ತಾಯಿಸುತ್ತಿದ್ದಾರೆ
  • ಇದರಿಂದ ಸಮುದಾಯದಲ್ಲಿ ಜಾತಿ ಶ್ರೇಣೀಕರಣದ ಬಗ್ಗೆ ಚರ್ಚೆಗಳು ಮತ್ತೆ ಬಿಸಿಯಾಗಿದೆ

ವಚನಾನಂದ ಶ್ರೀಗಳ ಸ್ಪಷ್ಟ ಮಾತು:

“ಪಂಚಮಸಾಲಿಗಳು ಲಿಂಗಾಯತಧರ್ಮದ ಭಾಗ. ನಾವು ನಮ್ಮ ಜಾತಿ ಗುರುತನ್ನು ಸ್ಪಷ್ಟವಾಗಿ ದಾಖಲಿಸಬೇಕು. ಈ ಮೂಲಕ ನಾವು ಸಮುದಾಯದ ಒಳಒಡನಾಟವನ್ನು ಗಟ್ಟಿಗೊಳಿಸುತ್ತೇವೆ,” ಎಂದು ಅವರು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *