ಮೈಸೂರು: ದಸರಾ ಉದ್ಘಾಟನೆಯ ವೇದಿಕೆಯಿಂದಲೇ ಟೀಕಾಕಾರರಿಗೆ ಧೈರ್ಯವಾಗಿ ಪ್ರತಿಸ್ಪಂದಿಸಿದ ಬೂಕರ್ ಪ್ರಶಸ್ತಿ ವಿಜೇತೆ, ಲೇಖಕಿ ಬಾನು ಮುಷ್ತಾಕ್ ಅವರು, ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುವುದು ತಮ್ಮಿಗೆ ಹೊಸದೇನಲ್ಲ ಎಂದು ಸ್ಪಷ್ಟಪಡಿಸಿದರು.
ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಮೈಸೂರು ದಸರಾ 2025ಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಬಾನು ಮುಷ್ತಾಕ್, “ನಾನು ನೂರಾರು ಕಾರ್ಯಕ್ರಮಗಳಲ್ಲಿ ದೀಪ ಬೆಳಗಿದ್ದೇನೆ, ಪುಷ್ಪಾರ್ಚನೆ ಹಾಗೂ ಮಂಗಳಾರತಿ ಸ್ವೀಕರಿಸಿದ್ದೇನೆ. ಇದರಲ್ಲಿ ನನಗೆ ಹೊಸದು ಏನೂ ಇಲ್ಲ,” ಎಂದು ಟೀಕಾಕಾರರ ನೇರ ಪ್ರಶ್ನೆಗಳಿಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿದರು.
“ಇದು ನನ್ನ ಬದುಕಿನ ಭಾಗ” – ಬಾನು ಮುಷ್ತಾಕ್ ಸ್ಪಷ್ಟನೆ
“ಈ ಕುರಿತಾಗಿ ನಾಳೆ ಬಿಡುಗಡೆಯಾಗಲಿರುವ ನನ್ನ ಆತ್ಮಕಥೆಯಲ್ಲಿಯೂ ನಾನು ವಿವರವಾಗಿ ಬರೆದಿದ್ದೇನೆ. ನಾನು ಹಾಗೂ ಹಿಂದೂ ಸಂಸ್ಕೃತಿಯ ನಡುವೆ ಇರುವ ಬಾಂಧವ್ಯವಿದೆ. ಯಾರದೋ ನಿರ್ಧಾರದಿಂದ ನಾನು ವೇದಿಕೆಗೆ ಬಂದಿಲ್ಲ. ನಾನು ಈಗಾಗಲೇ ಅನೇಕ ಸಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ,” ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯಗೆ ಕೃತಜ್ಞತೆ ವ್ಯಕ್ತಪಡಿಸಿದ ಬಾನು
“ಸಮಾಜದ ಕೆಲವೊಂದು ವಲಯಗಳಿಂದ ವಿರೋಧವಿದ್ದರೂ ನನ್ನನ್ನು ದಸರಾ ಉದ್ಘಾಟಕರಾಗಿ ಆಹ್ವಾನಿಸಿ ನೈತಿಕ ಬೆಂಬಲ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು. ಇದು ನಾನು ಎದುರಿಸಿದ ಟೀಕೆಗಳಿಗೆ ತಕ್ಕ ಪ್ರತಿಯಾಗಿ ಸರ್ಕಾರದಿಂದ ಸಿಕ್ಕ ಬೆಂಬಲ,” ಎಂದರು.
For More Updates Join our WhatsApp Group :




