ಸಿಂಪಲ್ ಸುನಿ‌ ನಿರ್ದೇಶನದ ಗತವೈಭವ ಬಿಡುಗಡೆಗೆ ರೆಡಿ..ನ.14ಕ್ಕೆ‌ ದುಶ್ಯಂತ್-ಆಶಿಕಾ ಸಿನಿಮಾ ತೆರೆಗೆ ಎಂಟ್ರಿ.

ಸಿಂಪಲ್ ಸುನಿ‌ ನಿರ್ದೇಶನದ ಗತವೈಭವ ಬಿಡುಗಡೆಗೆ ರೆಡಿ..ನ.14ಕ್ಕೆ‌ ದುಶ್ಯಂತ್-ಆಶಿಕಾ ಸಿನಿಮಾ ತೆರೆಗೆ ಎಂಟ್ರಿ.

ಸಿಂಪಲ್ ಸುನಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಗತವೈಭವ ತೆರೆಗೆ ಬರಲು ಸಜ್ಜಾಗಿದೆ. ನವೆಂಬರ್ 14ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಯುವ ಪ್ರತಿಭೆ ದುಶ್ಯಂತ್ ನಾಯಕನಾಗಿ, ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿದ್ದಾರೆ. ಗತವೈಭವ ಟೀಸರ್ ಅನಾವರಣ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯ ನಡೆಸಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಗತವೈಭವ ಸಿನಿಮಾದ ಸುದ್ದಿಗೋಷ್ಟಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಗತವೈಭವ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡ ಪ್ರಾಜೆಕ್ಟ್.‌ ನನ್ನ ಬ್ಯಾನರ್‌ನಡಿ  ಮಾಡಬೇಕು ಎಂದುಕೊಂಡ ಸಿನಿಮಾ ಇದು. ದುಶ್ಯಂತ್ ಈ ಪ್ರಾಜೆಕ್ಟ್ ಮಾಡಬೇಕು ಎಂದು ಬರೆದಿತ್ತು. ಅದಕ್ಕೆ ಇದು ಆಗಿದೆ. ನಾಲ್ಕು ಸಿನಿಮಾ ಮಾಡಿದಷ್ಟು ಈ ಜರ್ನಿ ಆಗಿದೆ. ಅಂದುಕೊಂಡ ರೀತಿ ಗತವೈಭವ ಮೂಡಿ ಬಂದಿದೆ. ಕೆಲವು ಸಿನಿಮಾ ಪ್ರಚಾರ ಮಾಡಿ ತೆರೆಗೆ ಬರುತ್ತವೆ. ಈ ಚಿತ್ರ ರಿಲೀಸ್ ಆದರೆ ಪ್ರಚಾರವಾಗುತ್ತವೆ. ನಾನು ಆಡಿಯನ್ಸ್ ರೀತಿ ಈ‌ ಸಿನಿಮಾಗಾಗಿ ಕಾಯುತ್ತಿದ್ದೇವೆ. ಪ್ರತಿ ಶಾರ್ಟ್ ತುಂಬಾ ಚೆನ್ನಾಗಿ ಬಂದಿದೆ. ಪ್ರೊಡ್ಯೂಸರ್ ದೀಪಕ್ ಸರ್ ಚಿತ್ರಕ್ಕೆ ಎಲ್ಲವನ್ನೂ ಒದಗಿಸಿದ್ದಾರೆ. ದುಶ್ಯಂತ್ ನ್ಯಾಚುರಲ್ ಆರ್ಟಿಸ್ಟ್. ಆಶಿಕಾ ಫ್ಯಾಮಿಲಿ ತರ ಆಗಿದ್ದಾರೆ. ಚಿತ್ರದಲ್ಲಿ ಎಂಟರ್ಟೈನ್ಮೆಂಟ್, ‌ಎಮೋಷನ್ ಎಲ್ಲವೂ ಇದೆ ಎಂದರು.

ನಟ ದುಶ್ಯಂತ್ ಮಾತನಾಡಿ, ನೂರು ದಿನಕ್ಕೂ ಹೆಚ್ಚು ಕಾಲ ಶೂಟಿಂಗ್ ಮಾಡಿದ್ದೇವೆ. ಪೋರ್ಚುಗಲ್ ಚಿತ್ರೀಕರಣ ಮಾಡಿದ್ದೇವೆ. ಗ್ರಾಫಿಕ್ ಕಾರಣದಿಂದ ಸಿನಿಮಾ ತಡವಾಯ್ತು.  ನಿರೀಕ್ಷೆಗೂ‌ ಮೀರಿದಷ್ಟು ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಗತವೈಭವ ಅದಕ್ಕೆ ಏನೂ ಬೇಕು ಅದು ತೆಗೆದುಕೊಳ್ತು. ಸುನಿ ಸರ್ ಅವರ ಹತ್ತು ಸಿನಿಮಾಗಳಿಗಿಂತ ಇದು ಬೆಸ್ಟ್ ಸಿನಿಮಾವಾಗಲಿದೆ. ಆಶಿಕಾ ಅವರ ಕರಿಯರ್‌ನಲ್ಲೂ ಇದು ಬೆಸ್ಟ್ ಚಿತ್ರ ಎನಿಸಿಕೊಳ್ಳಲಿದೆ. ನವೆಂಬರ್ 14ಕ್ಕೆ ಗತವೈಭವ ತೆರೆಗೆ ಬರಲಿದೆ. ಅಕ್ಟೋಬರ್ ನಲ್ಲಿ ಹಾಡುಗಳನ್ನು ರಿಲೀಸ್ ಮಾಡುವ ಪ್ಲ್ಯಾನ್ ನಡೆದಿದೆ ಎಂದರು.

ನಟಿ ಆಶಿಕಾ ರಂಗನಾಥ್ ಮಾತನಾಡಿ, ಗತವೈಭವ ತುಂಬಾ ಸ್ಪೆಷಲ್ ಸಿನಿಮಾ. ತಂಜಾವೂರಿನಲ್ಲಿ ಶೂಟಿಂಗ್ ಸಮಯದಲ್ಲಿ ಕೇಳಿದ ಕಥೆ. ತುಂಬಾ ಎಂಜಾಯ್ ಮಾಡಿಕೊಂಡು ಕಥೆ ಕೇಳಿದೆ. ಕಥೆ ಹೊಸದಾಗಿ. ಸುನಿ ಸರ್ ಗೂ ಇದು ಹೊಸದು ಅನಿಸುತ್ತದೆ. ಪ್ರತಿಯೊಬ್ಬ ಕಲಾವಿದರು ಈ ರೀತಿ ಪಾತ್ರ ಸಿಗಲು ಅದೃಷ್ಟ ಮಾಡಿರಬೇಕು. ನನಗೆ ಚಿತ್ರದಲ್ಲಿ ನಾಲ್ಕು ಲುಕ್  ಇದೆ. ಗತವೈಭವದಲ್ಲಿ ನಟಿಸಿರುವುದು ಬೇರೆಯದ್ದೇ ಅನುಭವ. ಹೋಮ್ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡಿದೆ ಅನುಭವ. ತೆರೆಮೇಲೆ ವೈಭವವಾಗಿ ಕಾಣಿಸಲು ಅದ್ಧೂರಿಯಾಗಿ ಚಿತ್ರೀಕರಣ ಮಾಡಲಾಗಿದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿದ ಅನುಭವ.  ದುಶ್ಯಂತ್ ಅದ್ಭುತ ನಟ. ಇದೊಂದು ವಿಭಿನ್ನ ಸಿನಿಮಾ ಎಂದು ಹೇಳಿದರು.

ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಂಟಿಫಿಕ್ ಥ್ರಿಲ್ಲರ್ ಕಂಟೆಂಟ್ ಬ್ಲೆಂಡ್ ಮಾಡಿ ಸುನಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ.  ಕಥೆ-ಚಿತ್ರಕಥೆ ಜೊತೆಗೆ ಸಂಭಾಷಣೆ ಬರೆದಿದ್ದು, ಸುನಿ ಸಿನಿಮಾಸ್ ಸಂಸ್ಥೆಯಡಿ ದೀಪಿಕ್ ಹಾಗೂ ಸುನಿ ಚಿತ್ರ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ಚಿತ್ರಕ್ಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *