ಪಿಂಕ್ ಪವರ್ ರನ್ 2.0″: ಸ್ತನ ಕ್ಯಾನ್ಸರ್ ಜಾಗೃತಿಗೆ ಹೈದರಾಬಾದ್‌ನಲ್ಲಿ ಭಾರೀ ಸ್ಪಂದನೆ!

ಪಿಂಕ್ ಪವರ್ ರನ್ 2.0": ಸ್ತನ ಕ್ಯಾನ್ಸರ್ ಜಾಗೃತಿಗೆ ಹೈದರಾಬಾದ್‌ನಲ್ಲಿ ಭಾರೀ ಸ್ಪಂದನೆ!

ಹೈದರಾಬಾದ್: ಸುಧಾರೆಡ್ಡಿ ಫೌಂಡೇಶನ್ ವತಿಯಿಂದ ಎರಡನೇ ಆವೃತ್ತಿಯ ಪಿಂಕ್ ಪವರ್ ರನ್ 2025 ಮ್ಯಾರಥಾನ್ ಓಟ ನಡೆಯಿತು. ಹೈದರಾಬಾದ್​ನ ನೆಕ್​ಲೇಸ್ ರೋಡ್​ನಲ್ಲಿ 20,000 ಮಂದಿ ಪಾಲ್ಗೊಂಡಿದ್ದ ಈ ಓಟವನ್ನು ಬ್ರೆಸ್ಟ್ ಕ್ಯಾನ್ಸರ್ ಜಾಗೃತಿಗಾಗಿ ನಡೆಸಲಾಗಿತ್ತು. ಖ್ಯಾತ ಸಮಾಜಸೇವಕಿ ಸುಧಾರೆಡ್ಡಿ, ಮೇಘ ಎಂಜಿನಿಯರಿಂಗ್ ಸಂಸ್ಥೆಯ (ಎಂಇಐಎಲ್) ಎಂಡಿ ಕೃಷ್ಣ ರೆಡ್ಡಿ, ಮಿಸ್ ವರ್ಲ್ಡ್ ಆರ್ಗನೈಸೇಶನ್ ಮುಖ್ಯಸ್ಥೆ ಜೂಲಿಯಾ ಮಾರ್ಲೀ, ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಅವರು ಭಾನುವಾರ ಬೆಳಗ್ಗೆ ಈ ಜಾಗೃತಿ ಓಟಕ್ಕೆ ಚಾಲನೆ ಕೊಟ್ಟರು.

ಸ್ತನ ಕ್ಯಾನ್ಸರ್ ಅನ್ನು ಬೇಗ ಪತ್ತೆ ಮಾಡಿದರೆ ಗುಣಪಡಿಸಲು ಸಾಧ್ಯ ಎಂಬ ವಿಚಾರದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ವತಃ ಕ್ಯಾನ್ಸರ್ ಬಾಧಿತವಾದ ಹಾಲಿ ಮಿಸ್ ವರ್ಲ್ಡ್ ಕೂಡ ಆಗಿರುವ ಓಪಾಲ್ ಸುಚಾತಾ ಚುವಾಂಗಸ್ರಿ ಹಾಗೂ ವಿವಿಧ ಪ್ರದೇಶಗಳ ವಿಶ್ವ ಸುಂದರಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗಮನ ಸೆಳೆದರು. ವಿಶ್ವ ಸುಂದರಿ ಜೊತೆಗೆ, ಮಿಸ್ ವರ್ಲ್ಡ್ ಕೆರಿಬಿಯನ್, ಮಿಸ್ ನಮೀಬಿಯಾ, ಮಿಸ್ ವರ್ಲ್ಡ್ ಓಷಾನಿಯಾ, ಮಿಸ್ ವರ್ಲ್ಡ್ ಅಮೇರಿಕಾಸ್, ಮಿಸ್ ವರ್ಲ್ಡ್ ಯೂರೋಪ್, ಮಿಸ್ ವರ್ಲ್ಡ್ ಏಷ್ಯಾ ಅವರೂ ಇದ್ದರು. ಮಿಸ್ ಇಂಡಿಯಾ ವರ್ಲ್ಡ್ ನಂದಿನಿ ಗುಪ್ತ ಮತ್ತ ನಿಕಿತಾ ಪೊರವಾಲ್ ಕೂಡ ಭಾಗವಹಿಸಿದ್ದರು.

ಈ ಪಿಂಕ್ ರನ್ 2.0 ಮ್ಯಾರಥಾನ್​ನಲ್ಲಿ 10 ಕಿಮೀ, 5 ಕಿಮೀ ಹಾಗೂ 3 ಕಿಮೀ ರೇಸ್​ಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ರೇಸ್​ಗಳಲ್ಲೂ ಸಾಕಷ್ಟು ಜನರು ಭಾಗವಹಿಸಿದ್ದರು. 10 ಕಿಮೀ ರೇಸ್​ನಲ್ಲಿ ಪುರುಷರ ವಿಭಾಗದಲ್ಲಿ ಅಂಕಿತ್ ಗುಪ್ತಾ ಮೊದಲ ಸ್ಥಾನ ಪಡೆದರೆ, ಮಹಿಳಾ ವಿಭಾಗದಲ್ಲಿ ಸೀಮಾ ಗೆದ್ದರು.

2026ರಲ್ಲಿ 140 ದೇಶಗಳಲ್ಲಿ ಪಿಂಕ್ ಪವರ್ ರನ್

ಪಿಂಕ್ ಪವರ್ ರನ್​ನ ಎರಡನೇ ಆವೃತ್ತಿಗೆ ಸಿಕ್ಕ ಭರ್ಜರಿ ಸ್ಪಂದನೆಯು ಈಗ ಜಾಗತಿಕ ಮಟ್ಟದಲ್ಲಿ ಇದನ್ನು ಆಯೋಜಿಸಲು ಸುಧಾ ರೆಡ್ಡಿ ಫೌಂಡೇಶನ್ ನಿರ್ಧರಿಸಿದೆ. 2026ರಲ್ಲಿ ಜಾಗತಿಕ ಮಟ್ಟದ ಪಿಂಕ್ ಪವರ್ ರನ್ ನಡೆಸಲಾಗಲಿದೆ. ವಿಶ್ವಾದ್ಯಂತ ಸ್ತನ ಕ್ಯಾನ್ಸರ್ ಜಾಗೃತಿಗಾಗಿ ಈ ವೇದಿಕೆಯನ್ನು ಬಳಸಿಕೊಳ್ಳಲು ಫೌಂಡೇಶನ್ ಮುಂದಾಗಿದೆ.

ಮಿಸ್ ವರ್ಲ್ಡ್ ಆರ್ಗನೈಸೇಶನ್​ನಿಂದ ಏಳು ಖಂಡಗಳ ಬ್ಯೂಟಿ ಕ್ವೀನ್​ಗಳು ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲು ಜಾಗತಿಕ ರಾಯಭಾರಿಯಾಗಿ ನೆರವಾಗಲಿದ್ದಾರೆ. 2026ರಲ್ಲಿ ಈ ಮೆಗಾ ಇವೆಂಟ್​​ನಲ್ಲಿ ಓಟದ ಸ್ಪರ್ಧಿಗಳು ಬ್ಯಾಟಾನ್ ಅನ್ನು ಒಂದು ಖಂಡದಿಂದ ಮತ್ತೊಂದು ಖಂಡದಲ್ಲಿರುವವರಿಗೆ ಹಸ್ತಾಂತರಿಸುತ್ತಾರೆ. ಈ ರೀತಿ ಏಳು ಖಂಡಗಳಲ್ಲೂ ಈ ಜಾಗೃತಿ ಓಟ ಮುಂದುವರಿದುಕೊಂಡು ಹೋಗಲಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *