ಬೆಂಗಳೂರು: ಅಕ್ಟೋಬರ್ 1ರಿಂದ ಬಹುತೇಕ ಖಾಸಗಿ ಕಂಪನಿಗಳ ವರ್ಕ್ ಫ್ರಮ್ ಹೋಮ್ ಅಂತ್ಯವಾಗಲಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ಡಬಲ್ ಆಗುವ ಸಾಧ್ಯತೆ ಹೆಚ್ಚಿದೆ. ಉದ್ಯೋಗಿಗಳು ಕಚೇರಿಗೇ ಹೋಗಿ ಕೆಲಸ ಮಾಡಬೇಕಿರುವ ಕಾರಣ ವಾಹನಗಳ ಓಡಾಟದ ಸಂಖ್ಯೆಯೂ ಸಹಜವಾಗಿ ಹೆಚ್ಚಲಿದೆ. ಅಂದಾಜಿನ ಪ್ರಕಾರ ಔಟರ್ ರಿಂಗ್ ರೋಡ್ ಒಂದರಲ್ಲಿಯೇ ಪ್ರತಿನಿತ್ಯ 10 ಲಕ್ಷ ಉದ್ಯೋಗಿಗಳು ಓಡಾಡುವ ನಿರೀಕ್ಷೆ ಇದೆ.
ಬೆಂಗಳೂರಿನ ಬಹುತೇಕ ಖಾಸಗಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಸೌಲಭ್ಯ ಹಿಂಪಡೆಯಲು ನಿರ್ಧರಿಸಿವೆ ಎನ್ನಲಾಗಿದ್ದು, ಶೇಕಡಾ 80ರಷ್ಟು ಐಟಿ ಕಂಪನಿಗಳು ಈ ತೀರ್ಮಾನಕ್ಕೆ ಮುಂದಾಗಿವೆಯಂತೆ. ಔಟರ್ ರಿಂಗ್ ರೋಡ್ ನಲ್ಲಿ ಸುಮಾರು 500ರಷ್ಟು ಪ್ರತಿಷ್ಟಿತ ಕಂಪನಿಗಳಿದ್ದು, ಎರಡು ಸಾವಿರ ಆಫೀಸ್ ಗಳಿವೆ. ಇವುಗಳಲ್ಲಿ ಬಹುತೇಕ ಕಂಪನಿಗಳು ತಮ್ಮ ನೌಕರರಿಗೆ ವರ್ಕ್ ಫ್ರಮ್ ಹೋಮ್ ನೀಡಿದ್ದವು. ಆದರೆ ಈಗ ಉದ್ಯೋಗಿಗಳು ಮತ್ತೆ ಆಫೀಸ್ ನತ್ತ ಮುಖ ಮಾಡಬೇಕಿರುವ ಕಾರಣ ಟ್ರಾಫಿಕ್ ಸಹಜವಾಗಿಯೇ ಇನ್ನಷ್ಟು ಹೆಚ್ಚಾಗಲಿದೆ.
For More Updates Join our WhatsApp Group :




