ಇಂದು ಹಲವೆಡೆ 5 ಗಂಟೆ ವಿದ್ಯುತ್ ವ್ಯತ್ಯಯ! ಬೆಸ್ಕಾಂದಿಂದ ತುರ್ತು ನಿರ್ವಹಣಾ ಕಾಮಗಾರಿ.

ಇಂದು ಹಲವೆಡೆ 5 ಗಂಟೆ ವಿದ್ಯುತ್ ವ್ಯತ್ಯಯ! ಬೆಸ್ಕಾಂದಿಂದ ತುರ್ತು ನಿರ್ವಹಣಾ ಕಾಮಗಾರಿ.

ಬೆಂಗಳೂರು: ಬೆಸ್ಕಾಂ ಹೆಣ್ಣೂರು ಎಂಯುಎಸ್​ಎಸ್​-66ಕೆ.ವಿ. ಉಪ ಕೇಂದ್ರದಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವುದರ ಸಲುವಾಗಿ ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರಿನ ವಿದ್ಯುತ್ ಸರಬರಾಜು ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ವಿದ್ಯುತ್ ಕಡಿತ?

ಹೆಣ್ಣೂರು ಬಂಡೆ, ಸಮುದ್ರಿಕಾ ಎನ್​ಕ್ಲೇವ್, ಗ್ರೇಸ್ ಗಾರ್ಡನ್, ಕ್ರಿಸ್ತು ಜಯಂತಿ ಕಾಲೇಜು, ಕೆ. ನಾರಾಯಣಪುರ, ಬಿಳಿಶಿವಾಲೆ, ಆಶಾ ಟೌನ್​ಶಿಪ್, ಮಾರುತಿ ಟೌನ್​ಶಿಪ್, ನಾಗರಗಿರಿ ಟೌನ್​ಶಿಪ್, ಬಿಡಿಎಸ್ ಗಾರ್ಡನ್, ಕೊತ್ತನೂರು, ಪಟೇಲ್ ರಾಮಯ್ಯ ಲೇಔಟ್, ಸಿಎಸ್​ಐ ಗೇಟ್, ಬೈರತಿ ಕ್ರಾಸ್, ಬೈರತಿ ಗ್ರಾಮ, ಗೆದ್ದಲಹಳ್ಳಿ, ಬ್ಲೆಸಿಂಗ್​ ಗಾರ್ಡನ್, ಮಂತ್ರಿ ಅಪಾರ್ಟಮೆಂಟ್, ಹಿರೇಮಠ ಲೇಔಟ್, ಟ್ರೆನಿಟಿ ಫಾರ್ಚುನ್, ಮೈಕಲ್ ಸ್ಕೂಲ್, ಬಿಎಚ್​ಕೆ ಇಂಡಸ್ಟ್ರೀಸ್, ಜಾನಕಿರಾಮ್ ಲೇಔಟ್, ವಡ್ಡರಪಾಳ್ಯ, ದೊಡ್ಡಗುಬ್ಬಿ ಕ್ರಾಸ್, ಕುವೆಂಪು ಲೇಔಟ್, ಸಂಗಮ್ ಎನ್​ಕ್ಲೇವ್, ಬೈರತಿ ಬಂಡೆ, ನಕ್ಷತ್ರ ಲೇಔಟ್, ತಿಮ್ಮೇಗೌಡ ಲೇಔಟ್, ಪ್ರಕಾಶ್ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ವಿದ್ಯುತ್ ಸಂಬಂಧಿತ ದೂರು ನೀಡಲು ಸಂಪರ್ಕಿಸಿ

ವಿದ್ಯುತ್ ಸಂಪರ್ಕ ಸಂಬಂಧಿತ ದೂರುಗಳನ್ನು ವಾಟ್ಸ್​ಆ್ಯಪ್ ಮೂಲಕವೇ ನೀಡಬಹುದು.ಬೆಸ್ಕಾಂ ಸಹಾಯವಾಣಿ ಸಂಖ್ಯೆಗಳ ವಿವರವನ್ನೂ ನೀಡಿದೆ.

ಬೆಂಗಳೂರು ನಗರ

  • ದಕ್ಷಿಣ ವೃತ್ತ : 8277884011
  • ಪಶ್ಚಿಮ ವೃತ್ತ:8277884012
  • ಪೂರ್ವ ವೃತ್ತ : 8277884013
  • ಉತ್ತರ ವೃತ್ತ :8277884014

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *