ಚಳಿಗಾಲದಲ್ಲಿ ಖರ್ಜೂರ ಸೇವನೆ ಮಾಡಲೇಬೇಕು! ಆರೋಗ್ಯ ತಜ್ಞರು ಹೇಳಿರುವ ಮಹತ್ವದ ಕಾರಣ ಇಲ್ಲಿದೆ.

ಚಳಿಗಾಲದಲ್ಲಿ ಖರ್ಜೂರ ಸೇವನೆ ಮಾಡಲೇಬೇಕು! ಆರೋಗ್ಯ ತಜ್ಞರು ಹೇಳಿರುವ ಮಹತ್ವದ ಕಾರಣ ಇಲ್ಲಿದೆ.

ಖರ್ಜೂರ ಸೇವನೆ ಮಾಡುವುದು ಆರೋಗ್ಯಕ್ಕೆ ವರದಾನವಿದ್ದಂತೆ. ಇವುಗಳಲ್ಲಿರುವ ಪೋಷಕಾಂಶಗಳು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುವುದಕ್ಕೆ ಸಹಾಯ ಮಾಡುತ್ತದೆ. ಮಾತ್ರವಲ್ಲ, ಈ ಖರ್ಜೂರ ಗಳನ್ನು ದಿನನಿತ್ಯ ಸೇವನೆ ಮಾಡುವ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕ್ಯಾಲೋರಿ, ಕಾರ್ಬೋಹೈಡ್ರೇಟ್‌, ಫೈಬರ್, ಪ್ರೋಟೀನ್, ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರ, ಮ್ಯಾಂಗನೀಸ್, ಕಬ್ಬಿಣ, ವಿಟಮಿನ್ ಬಿ6 ಮತ್ತು ಉತ್ಕರ್ಷಣ ನಿರೋಧಕಗಳನ್ನು ಪಡೆದುಕೊಳ್ಳಬಹುದು. ಮಾತ್ರವಲ್ಲ, ಡಾ. ಮೇಧಾವಿ ಗೌತಮ್ ಅವರು ಹೇಳುವ ಪ್ರಕಾರ, ಚಳಿಗಾಲದಲ್ಲಿ ಖರ್ಜೂರವನ್ನು ಹೆಚ್ಚಾಗಿ ಸೇವನೆ ಮಾಡಬೇಕು. ಬೇರೆ ಸಮಯದಲ್ಲಿ ವಾರಕ್ಕೆ ಒಂದು, ಎರಡು ಸೇವನೆ ಮಾಡುತ್ತಿದ್ದರೆ ಚಳಿಗಾಲದಲ್ಲಿ ದಿನಕ್ಕೆ ಒಂದಾದರೂ ತಿನ್ನಬೇಕು ಇದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಾಗಾದರೆ ಖರ್ಜೂರಕ್ಕೂ ಚಳಿಗಾಲಕ್ಕೂ ಇರುವ ಸಂಬಂಧವೇನು, ಯಾಕೆ ಈ ಸಮಯದಲ್ಲಿ ಹೆಚ್ಚಾಗಿ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಳಿಗಾಲದಲ್ಲಿ ಏಕೆ ಹೆಚ್ಚಾಗಿ ಸೇವನೆ ಮಾಡಬೇಕು?

ಡಾ. ಮೇಧಾವಿ ಗೌತಮ್ ಹೇಳುವ ಪ್ರಕಾರ, ಚಳಿಗಾಲದಲ್ಲಿ ಖರ್ಜೂರ ಸೇವನೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕನಿಷ್ಠ ಪಕ್ಷ ನೀವು ವಾರದಲ್ಲಿ ಎರಡರಿಂದ ಮೂರು ಬಾರಿಯಾದರೂ ಖರ್ಜೂರವನ್ನು ಸೇವನೆ ಮಾಡಬೇಕು. ಇದು ಕೆಮ್ಮು ಮತ್ತು ಶೀತಗಳು ಬರದಂತೆ ತಡೆಯುತ್ತದೆ ಮತ್ತು ದೇಹವು ಬೆಚ್ಚಗಿರುವಂತೆ ಮಾಡುತ್ತದೆ. ಹಾಗಾಗಿ ರಾತ್ರಿ ಹಾಲಿನೊಂದಿಗೆ ಇವುಗಳನ್ನು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವುಗಳಲ್ಲಿ ಗ್ಲೂಕೋಸ್, ಸುಕ್ರೋಸ್ ಮತ್ತು ಫ್ರಕ್ಟೋಸ್‌ನಂತಹ ನೈಸರ್ಗಿಕ ಸಕ್ಕರೆಗಳಿದ್ದು, ಅವು ದೇಹಕ್ಕೆ ಶಕ್ತಿಯನ್ನು ಒದಗಿಸಲು ಕೂಡ ಸಹಾಯ ಮಾಡುತ್ತವೆ. ಮಾತ್ರವಲ್ಲ ರಾತ್ರಿ ಬಿಸಿ ಹಾಲಿನಲ್ಲಿ ಕುದಿಸಿದ ಖರ್ಜೂರ ತಿನ್ನುವುದು ಕೂಡ ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸಾಧ್ಯವಾದಲ್ಲಿ ನೀವು ಹಗಲಿನಲ್ಲಿ 2 ರಿಂದ 3 ಖರ್ಜೂರ ತಿನ್ನಬಹುದು. ಅವು ನೈಸರ್ಗಿಕವಾಗಿ ಸಕ್ಕರೆಯನ್ನು ಹೊಂದಿರುವುದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ.

ಸ್ನಾಯು ನೋವಿನಿಂದ ಮುಕ್ತಿ ಪಡೆಯಬಹುದು

ಖರ್ಜೂರದಲ್ಲಿ ಉತ್ತಮ ಪ್ರಮಾಣದ ಮೆಗ್ನೀಸಿಯಮ್ ಇದ್ದು ಸ್ನಾಯು ನೋವಿನಿಂದ ಪರಿಹಾರ ನೀಡುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಅಲ್ಲಲ್ಲಿ ನೋವುಗಳು ಕಂಡುಬರುವ ಪ್ರಮಾಣ ಹೆಚ್ಚಾಗಿರುವುದರಿಂದ, ಇದರಿಂದ ಪರಿಹಾರ ಪಡೆಯಲು ಖರ್ಜೂರ ಬಹಳ ಒಳ್ಳೆಯ ಆಯ್ಕೆ. ಇವುಗಳಲ್ಲಿರುವ ವಿಟಮಿನ್ ಎ ಅಂಶ ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಕಾರಿಯಾಗಿದೆ. ನಿಮಗೆ ಖರ್ಜೂರವನ್ನು ಹಾಗೆ ತಿನ್ನಲು ಇಷ್ಟವಾಗದಿದ್ದಲ್ಲಿ ಹಾಲಿನಲ್ಲಿ ಕುದಿಸಿ, ಮಿಶ್ರಣ ಮಾಡಿ ಅಥವಾ ಸ್ಮೂಥಿ ಮಾಡಿಯೂ ಸೇವನೆ ಮಾಡಬಹುದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *