ಭಾರತದ ಗಣರಾಜ್ಯೋತ್ಸವದ ದಿನ ಕೆಂಪು ಕೋಟೆ ಗುರಿಯಾಗಬೇಕಾಗಿತ್ತು!

ಭಾರತದ ಗಣರಾಜ್ಯೋತ್ಸವದ ದಿನ ಕೆಂಪು ಕೋಟೆ ಗುರಿಯಾಗಬೇಕಾಗಿತ್ತು!

ನವದೆಹಲಿ: ದೆಹಲಿಯಲ್ಲಿ ನವೆಂಬರ್ 10ರಂದು ನಿಗೂಢ ಸ್ಫೋಟಸಂಭವಿಸಿದ್ದು, ಘಟನೆಯಲ್ಲಿ 10ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಎನ್​ಐಎ ಪ್ರಕರಣದ ತನಿಖೆ ನಡೆಸುತ್ತಿದೆ. ಹಾಗೆಯೇ ಇಬ್ಬರು ಶಂಕಿತರ ವಿಚಾರಣೆ ನಡೆಸುವಾಗ ಹಲವು ವಿಚಾರಗಳು ಬಹಿರಂಗಗೊಂಡಿವೆ. ಜನವರಿ 26ರಂದು ಗಣರಾಜ್ಯೋತ್ಸವದ ದಿನ ಕೆಂಉಕೋಟೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದು ಉಗ್ರರ ಯೋಜನೆಯಾಗಿತ್ತು ಎಂಬುದು ತಿಳಿದುಬಂದಿದೆ.

ದೆಹಲಿ ಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿ ಮುಜಮ್ಮಿಲ್ ತನಿಖಾಧಿಕಾರಿಗಳಿಗೆ ತಿಳಿಸಿರುವ ಪ್ರಕಾರ, ಆ ಪ್ರದೇಶದಲ್ಲಿ ನಡೆದ ಸ್ಫೋಟಕ್ಕೂ ಮೊದಲು ತಾನು ಮತ್ತು ಉಮರ್ ಕೆಂಪು ಕೋಟೆಯಿಂದ ಹಿಂದಿರುಗಿ ಬಂದಿದ್ದೆವು. ಮೊದಲು ಕೆಂಪುಕೋಟೆಯನ್ನು ಗುರಿಯಾಗಿಸಿ ದಾಳಿ ಮಾಡುವ ಯೋಜನೆಯಿತ್ತು ಹಾಗಾಗಿ ಹಲವು ಬಾರಿ ಕೆಂಪು ಕೋಟೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಓಡಾಡಿದ್ದೆವು ಎಂದು ತಿಳಿಸಿದ್ದಾನೆ.

ಈ ದೀಪಾವಳಿಯಂದು ಜನದಟ್ಟಣೆ ಇರುವ ಸ್ಥಳದ ಮೇಲೆ ದಾಳಿ ಮಾಡುವ ಯೋಜನೆಯಿತ್ತು ಮುಜಮ್ಮಿಲ್ ಪೊಲೀಸರಿಗೆ ತಿಳಿಸಿದ್ದಾನೆ, ಆದರೆ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ತಿಳಿಸಿವೆ. ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಮುಜಮ್ಮಿಲ್ ಅವರ ಸಹಾಯಕ ಮತ್ತು ಸಹೋದ್ಯೋಗಿ ಉಮರ್, ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ಕಾರು ಸ್ಫೋಟಗೊಂಡು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.

ಈಗ ಎನ್​ಐಎ ತಂಡವು ಇದರ ಹಿಂದೆ ಪಾಕಿಸ್ತಾನ ಅಥವಾ ಬೇರೆ ಯಾರಾದರೂ ಇದ್ದಾರೆಯೇ ಎಂದು ಕಂಡುಹಿಡಿಯಲು ಪ್ರತಿಯೊಂದು ಅಂಶವನ್ನು ಪರಿಶೀಲಿಸುತ್ತದೆ. ಏತನ್ಮಧ್ಯೆ, ಮಾಧ್ಯಮ ವರದಿಗಳ ಪ್ರಕಾರ, ಭಯೋತ್ಪಾದಕರ ಯೋಜನೆ ದೊಡ್ಡದಾಗಿತ್ತು. ದೀಪಾವಳಿ ಹಬ್ಬದಂದು ದೆಹಲಿಯನ್ನು ಭಯಗೊಳಿಸಲು ದುಷ್ಟ ಶಕ್ತಿಗಳು ಸಂಚು ರೂಪಿಸಿದ್ದವು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *