ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ಪ್ರಕರಣ: ತುಮಕೂರಿನ ಮುಜಾಯುದ್ದೀನ್ ವಿಚಾರಣೆ ಬಳಿಕ ಬಿಡುಗಡೆ.

ದೆಹಲಿ ಕಾರ್ ಬಾಂಬ್ ಬ್ಲಾಸ್ಟ್ ಪ್ರಕರಣ: ತುಮಕೂರಿನ ಮುಜಾಯುದ್ದೀನ್ ವಿಚಾರಣೆ ಬಳಿಕ ಬಿಡುಗಡೆ.

ತುಮಕೂರು: ದೆಹಲಿಯ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯ ಹಿನ್ನಲೆಯಲ್ಲಿ ತುಮಕೂರಿನಲ್ಲಿ ಪೊಲೀಸರು ಒಬ್ಬ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಪಿಎಚ್ ಕಾಲೋನಿಯ ನಿವಾಸಿ ಮುಜಾಯುದ್ದೀನ್ ಎಂಬಾತನನ್ನು ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಲಾಗಿದೆ.ಸ್ಫೋಟ ನಡೆದ ಮರುದಿನವೇ ಸ್ಥಳೀಯ ಪೊಲೀಸರು ಎಎಸ್‌ಪಿ ಪುರುಷೋತ್ತಮ್ ಅವರ ಮಾರ್ಗದರ್ಶನದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಮುಜಾಯುದ್ದೀನ್‌ರನ್ನು ವಿಚಾರಣೆ ಮಾಡಿದ್ದಾರೆ.

ಹಿನ್ನೆಲೆ ಪರಿಶೀಲನೆ:
ಮೂಲಗಳ ಪ್ರಕಾರ, ಮುಜಾಯುದ್ದೀನ್ ಹಿಂದಿನ ದಿನಗಳಲ್ಲಿ ಕಲಿಫತ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದರೆಂಬ ಆರೋಪ ಹಿನ್ನೆಲೆ ವಿಚಾರಣೆ ನಡೆದಿದೆ. ಇದೇ ಸಂಘಟನೆಯ ಮುಖಂಡರಿಗೆ ತುಮಕೂರಿನಲ್ಲಿ ಸಭೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದ ಎಂಬ ವರದಿಯೂ ಇತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಾಯುದ್ದೀನ್ ಅವರನ್ನು ಹಿಂದಿನಿಂದ ಎನ್‌ಐಎ ಬಂಧಿಸಿ ದೆಹಲಿಯ ತಿಹಾರ್ ಜೈಲಿಗೆ ಕಳುಹಿಸಿತ್ತು. ಅವರು ಅಲ್ಲಿ ಆರು ವರ್ಷ ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಹೊರ ಬಂದಿದ್ದರು.

ಪ್ರಸ್ತುತ ವಿಚಾರಣೆ ಫಲಿತಾಂಶ:
ದೆಹಲಿ ಕಾರ್ ಬಾಂಬ್ ಸ್ಫೋಟದಲ್ಲಿ ಮುಜಾಯುದ್ದೀನ್ ಕೈವಾಡವಿಲ್ಲ ಎಂಬ ಖಾತರಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಿಚಾರಣೆ ನಂತರ ಬಿಡುಗಡೆ ಮಾಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *