“ಅಪೋಲೋ ಆಸ್ಪತ್ರೆಗೆ ಭೇಟಿ: ಪತ್ನಿ ಪಾರ್ವತಿಯ ಆರೋಗ್ಯ ವಿಚಾರಿಸಿದ C.Mಸಿದ್ದರಾಮಯ್ಯ”.

"ಅಪೋಲೋ ಆಸ್ಪತ್ರೆಗೆ ಭೇಟಿ: ಪತ್ನಿ ಪಾರ್ವತಿಯ ಆರೋಗ್ಯ ವಿಚಾರಿಸಿದ C.Mಸಿದ್ದರಾಮಯ್ಯ".

ಬೆಂಗಳೂರು: ಆರೋಗ್ಯದಲ್ಲಿ ಏರುಪೇರಾಗಿರುವ ಹಿನ್ನಲೆ ಬೆಂಗಳೂರಿನ ಶೇಷಾದ್ರಿಪುರಂ‌‌ನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಪತ್ನಿ ಬಿ.ಎಂ.ಪಾರ್ವತಿ ಅವರ ಆರೋಗ್ಯವನ್ನು ಸಿಎಂ ಸಿದ್ದರಾಮಯ್ಯ ವಿಚಾರಿಸಿದ್ದಾರೆ. ಪಾರ್ವತಿ ಅವರ ಆರೋಗ್ಯ ಸ್ಥಿರವಾಗಿದ್ದು, ಏನೂ ಸಮಸ್ಯೆ ಇಲ್ಲ. ಶ್ವಾಸಕೋಶ ಸೋಂಕಿನಿಂದ ಅವರು ಬಳಲುತ್ತಿದ್ದು, ಈಗ ಚೇತರಿಕೆ ಕಾಣುತ್ತಿದ್ದಾರೆ.

ಇನ್ನೂ 2-3 ದಿನ ಆಸ್ಪತ್ರೆಯಲ್ಲಿರಬೇಕಾಗುತ್ತೆ ಎಂದು ವೈದ್ಯರು ತಿಳಿಸಿರೋದಾಗಿ ಅಪೋಲೋ ಆಸ್ಪತ್ರೆ ಬಳಿ ಸಿದ್ದರಾಮಯ್ಯ ಹೇಳಿದ್ದಾರೆ. ಪಾರ್ವತಿ ಅವರಿಗೆ ಐಸಿಯುನಲ್ಲಿ ಸದ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಡಾ. ಬಿಸಿ ಶ್ರೀನಿವಾಸ್ ನೇತೃತ್ವದ ವೈದ್ಯರ ತಂಡ ಅವರಿಗೆ ಟ್ರೀಟ್​ಮೆಂಟ್​ ನೀಡುತ್ತಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *