ಹಾಂಗ್‌ಕಾಂಗ್ : ಬುಧವಾರ ಮಧ್ಯಾಹ್ನ ಹಾಂಗ್ ಕಾಂಗ್‌ನಲ್ಲಿ ಎತ್ತರದ 8 ಅಪಾರ್ಟ್ಮೆಂಟ್ ಕಟ್ಟಡಗಳಿರುವ ಕಾಂಪ್ಲೆಕ್ಸ್ಗೆ ಬೆಂಕಿ ಬಿದ್ದಿದೆ. ಈ ಅಪಾರ್ಟ್ಮೆಂಟ್ಗಳಲ್ಲಿ ಸುಮಾರು 2 ಸಾವಿರ ಮನೆಗಳಿದ್ದು, 4,600ಕ್ಕೂ ಹೆಚ್ಚು ಜನರು ವಾಸವಾಗಿದ್ದರು. ಈ ಬೆಂಕಿ ಅವಘಡದಲ್ಲಿ ಒಂದೆರಡು ಕಟ್ಟಡಗಳು ಪೂರ್ತಿ ಸುಟ್ಟು ಕರಕಲಾಗಿವೆ. ಇವುಗಳೆಲ್ಲವೂ 20 ಮಹಡಿಗಿಂತಲೂ ಎತ್ತರದ ಅಪಾರ್ಟ್ಮೆಂಟ್ಗಳಾಗಿವೆ. ಈ ಬೆಂಕಿ ಅವಘಡದಲ್ಲಿ ಇದುವರೆಗೆ 55 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಈ ವಿಷಯದಲ್ಲಿ ಪೊಲೀಸರು ಇಲ್ಲಿಯವರೆಗೆ ಮೂವರು ಶಂಕಿತರನ್ನು ಬಂಧಿಸಿದ್ದಾರೆ.
ಕಳೆದ 6 ದಶಕಗಳಲ್ಲಿ ಹಾಂಗ್ಕಾಂಗ್ನಲ್ಲಿ ಸಂಭವಿಸಿದ ಅತ್ಯಂತ ಭೀಕರ ಬೆಂಕಿ ದುರಂತ ಇದಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಏಕೆಂದರೆ, ಸುಮಾರು 300 ಜನರು ಇನ್ನೂ ಪತ್ತೆಯಾಗಲಿಲ್ಲ.
For More Updates Join our WhatsApp Group :




