FSSAI ಸ್ಪಷ್ಟನೆ: ಚಹಾ ಗಿಡದ ಉತ್ಪನ್ನ ಮಾತ್ರ ಚಹಾ.
ಮಾರುಕಟ್ಟೆಯಲ್ಲಿ ಬಗೆ ಬಗೆಯ ಟೀಗಳು ಲಭ್ಯವಿವೆ. ಫ್ಲೇವರ್ಡ್ ಚಹಾಗಳ ಚೊತೆಗೆ ಹರ್ಬಲ್ ಟೀಗಳಿಗೆ ಜನ ಮಾರು ಹೋಗುತ್ತಿದ್ದಾರೆ. ಆದರೆ ಇವೆಲ್ಲವನ್ನೂ ನಿಜಕ್ಕೂ ಟೀ ಎಂದು ಕರೆಯಬಹುದಾ? ಈ ಪ್ರಶ್ನೆಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಉತ್ತರಿಸಿದ್ದು, ಇವೆಲ್ಲವನ್ನು ಚಹಾ ಎನ್ನಲು ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
FSSAI ಪ್ರಕಾರ, ಚಹಾ ಗಿಡದಿಂದ ಪಡೆಯಲಾಗುವ ಉತ್ಪನ್ನಗಳಿಂದ ತಯಾರಿಸಲ್ಪಟ್ಟವು ಮಾತ್ರ ಈ ವ್ಯಾಪ್ತಿಗೆ ಬರುತ್ತವೆ. ಕಾಂಗ್ರಾ ಚಹಾ ಮತ್ತು ಹಸಿರು ಚಹಾ ಸೇರಿದಂತೆ ಮುಂತಾದವುಗಳನ್ನು ಟೀ ಹೆಸರಲ್ಲಿ ಮಾರಾಟ ಮಾಡಬಹುದು. ಅದನ್ನು ಹೊರತುಪಡಿಸಿ ಇತರ ಯಾವುದೇ ಕಷಾಯಗಳು ಅಥವಾ ಪಾನೀಯಗಳು ಈ ಹೆಸರನ್ನು ಬಳಸುವಂತಿಲ್ಲ. ಡಿಸೆಂಬರ್ 24ರಂದು ಈ ಬಗ್ಗೆ ಆದೇಶ ಹೊರಡಿಸಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದಲ್ಲಿ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ಹಾಗೂ ಅದರ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಳ್ಳುವ ಬಗ್ಗೆ FSSAI ಎಚ್ಚರಿಸಿದೆ.
ಅಂಗಡಿಗಳು ಮತ್ತು ಆನ್ಲೈನ್ ವೇದಿಕೆಗಳಲ್ಲಿ ಹರ್ಬಲ್ ಟೀ, ಜಾಸ್ಮಿನ್ ಟೀ, ರೂಯಿಬೋಸ್ ಟೀ ಹಾಗೂ ಹೂವಿನ ಚಹಾಗಳ ಹೆಸರಿನಲ್ಲಿ ಟೀ ಪುಡಿ/ಸ್ಯಾಚೆಟ್ ಮಾರಾಟವಾಗುತ್ತಿವೆ. ಆದರೆ Camellia sinensisನಿಂದ ಉತ್ಪತ್ತಿಯಾಗದ ಹರ್ಬಲ್ ಇನ್ಫ್ಯೂಷನ್ಗಳು ಅಥವಾ ಮಿಶ್ರಣಗಳನ್ನು ‘ಚಹಾ’ ಎಂದು ಕರೆಯಲು ಆಗಲ್ಲ ಎಂದು FSSAI ತಿಳಿಸಿದ್ದು, ಇವುಗಳನ್ನು ಟೀ ಹೆಸರಲ್ಲಿ ಮಾರಾಟ ಮಾಡುವುದು ಮಿಸ್ ಬ್ರ್ಯಾಂಡಿಂಗ್ ಎಂದು ಹೇಳಿದೆ. ಈ ಆದೇಶವು ತಯಾರಿಕೆ, ಪ್ಯಾಕಿಂಗ್, ಆಮದು ಅಥವಾ ಮಾರಾಟದಲ್ಲಿ ತೊಡಗಿರುವ ಆಹಾರ ಉದ್ಯಮಿಗಳು ಹಾಗೂ ಇ-ಕಾಮರ್ಸ್ ವೇದಿಕೆಗಳಿಗೆ ಅನ್ವಯವಾಗಲಿದೆ. ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಆಯುಕ್ತರು ಹಾಗೂ FSSAIಯ ಪ್ರಾದೇಶಿಕ ನಿರ್ದೇಶಕರು ಈ ನಿಯಮಗಳ ಪಾಲನೆ ಜೊತೆಗೆ ಮೇಲ್ವಿಚಾರಣೆ ಮಾಡುವಂತೆಯೂ ಸೂಚಿಸಲಾಗಿದೆ.
For More Updates Join our WhatsApp Group :




